More

    ಜ್ಯೋತಿಷ್ಯ ಕೇಳುವ ನೆಪದಲ್ಲಿ ಬಂದು, ಜ್ಯೋತಿಷಿ ಮೇಲೇ ಹಲ್ಲೆ ನಡೆಸಿ ದರೋಡೆ!

    ಬೆಂಗಳೂರು: ಇತ್ತೀಚೆಗೆ ಹಾಡಹಗಲೇ ಸರಳ ವಾಸ್ತು ಪರಿಣತ ಚಂದ್ರಶೇಖರ ಗುರೂಜಿ ಅವರನ್ನು ಹತ್ಯೆ ಮಾಡಿದ್ದ ಪ್ರಕರಣದ ಬಳಿಕ ಒಂದಷ್ಟು ಜ್ಯೋತಿಷಿಗಳಲ್ಲಿ ಆತಂಕ ಉಂಟಾಗಿತ್ತು. ಇದೀಗ ಅದನ್ನು ಹೆಚ್ಚಿಸುವಂಥ ಪ್ರಕರಣವೊಂದು ನಡೆದಿದೆ. ಅದೇನೆಂದರೆ ಜ್ಯೋತಿಷಿಯೊಬ್ಬರ ಮನೆಗೆ ಹಾಡಹಗಲೇ ನುಗ್ಗಿದ್ದ ಖದೀಮರು ಹಲ್ಲೆ ನಡೆಸಿ, ಬೆಲೆಬಾಳುವ ವಸ್ತುಗಳನ್ನು ದರೋಡೆ ಮಾಡಿಕೊಂಡು ಹೋಗಿದ್ದಾರೆ.

    ರಾಜಧಾನಿ ಬೆಂಗಳೂರಿನಲ್ಲೇ ಇಂಥದ್ದೊಂದು ಪ್ರಕರಣ ನಡೆದಿದೆ. ಕೆಂಗೇರಿ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಇಲ್ಲಿನ ಜ್ಯೋತಿಷಿಯೊಬ್ಬರಾದ ಸುಮಾರು 40 ವರ್ಷದ ಪ್ರಮೋದ್ ಎಂಬವರ ಮನೆಗೆ ಇಂದು ಮೂವರು ಜ್ಯೋತಿಷ್ಯ ಕೇಳುವ ನೆಪದಲ್ಲಿ ಬಂದಿದ್ದರು.

    ಬಳಿಕ ಅವರು ಜ್ಯೋತಿಷಿ ಮೇಲೆ ಹಲ್ಲೆ ಮಾಡಿ, ಚಿನ್ನಾಭರಣದ ಜೊತೆಗೆ 5 ಲಕ್ಷ ರೂ. ನಗದು ಸುಲಿಗೆ ಮಾಡಿಕೊಂಡು ಹೋಗಿದ್ದಾರೆ. 400 ಗ್ರಾಂ ಚಿನ್ನಾಭರಣ, 50 ಗ್ರಾಂ ಬೆಳ್ಳಿಯ ವಸ್ತುಗಳನ್ನೂ ದರೋಡೆ ಮಾಡಿಕೊಂಡು ಹೋಗಿದ್ದಾರೆ. ಕೆಂಗೇರಿ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ವಿಶಾಲ ಗಾಣಿಗ ಕೊಲೆ ಪ್ರಕರಣ: ಇನ್ನೊಬ್ಬ ಸುಪಾರಿ ಕಿಲ್ಲರ್ ಬಂಧನ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts