More

    ಮೋದಿಗೆ ಮೊರೆ ಹೋದ ಮೇಲಷ್ಟೇ ರಸ್ತೆ ದುರಸ್ತಿಗೆ ಮುಂದಾದ್ರು: ಗ್ರಾಮಸ್ಥರು ಕಳಿಸಿದ್ದ ವಿಡಿಯೋ ವೈರಲ್​ ಆಗ್ತಿದ್ದಂತೆ ರಿಪೇರಿ ಶುರು

    ಆಲ್ದೂರು: ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ಬಂದರೆ ಯಾವುದೇ ಕೆಲಸ ಆಗುತ್ತದೆ ಎಂಬ ನಂಬಿಕೆ ಬಂದ ಮೇಲೆ ಅನೇಕರು ಸಮಸ್ಯೆ ಪರಿಹಾರಕ್ಕೆ ಪ್ರಧಾನಿ ಕಚೇರಿಗೆ ಮೊರೆ ಹೋಗುವುದು ಹೆಚ್ಚಾಗುತ್ತಿದೆ. ಪ್ರಧಾನಿ ಕಚೇರಿಯೂ ಸ್ಪಂದಿಸುತ್ತಿರುವುದರಿಂದ ಸಮಸ್ಯೆ ಪರಿಹರಿಸಿ ಎಂದು ಪತ್ರ ಬರೆಯುವ, ವೀಡಿಯೋ ಕಳುಹಿಸುವವರ ಸಂಖ್ಯೆ ಹೆಚ್ಚುತ್ತಿದೆ.

    ಚಿಕ್ಕಮಗಳೂರು ತಾಲೂಕಿನ ಆಲ್ದೂರು ಬಸ್ಕಲ್ ನಡುವಿನ 14 ಕಿ.ಮೀ. ರಸ್ತೆ ಗುಂಡಿ ಬಿದ್ದು ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿದ್ದು, ಈ ರಸ್ತೆಯ ದುಸ್ಥಿತಿಯ ವೀಡಿಯೋವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಗೆ ಕಳುಹಿಸಲಾಗಿದೆ.

    ರಸ್ತೆ ದುರಸ್ತಿ ಮಾಡುವಂತೆ ಸ್ಥಳೀಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡಿ ಸಾಕಾಗಿದ್ದು, ಯಾರೂ ಸ್ಪಂದಿಸುತ್ತಿಲ್ಲ. ದಯವಿಟ್ಟು ಈ ರಸ್ತೆ ದುರಸ್ತಿಗೆ ಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕು ಎಂದು ಗ್ರಾಮಸ್ಥರು ಪ್ರಧಾನಿ ನರೇಂದ್ರ ಮೋದಿಯವರ ಕಚೇರಿಗೆ ವಿಡಿಯೋ ಕಳುಹಿಸಿದ್ದಾರೆ.

    ಮಂಗಳವಾರ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಮೂಡಿಗೆರೆಯ ಸಮಾಜ ಸೇವಕ ವಿಜಯ್‌ಕುಮಾರ್ ತಮ್ಮ ಸ್ನೇಹಿತರೊಂದಿಗೆ ಸೇರಿಕೊಂಡು ವೆಟ್ ಮಿಕ್ಸ್ ಹಾಕಿ ಗುಂಡಿ ಮುಚ್ಚುವ ಕೆಲಸ ಆರಂಭಿಸಿದ್ದಾರೆ.

    ಯಾವುದು ಈ ರಸ್ತೆ?: ಬೆಂಗಳೂರಿನಿಂದ ಶೃಂಗೇರಿಗೆ ತೆರಳಲು ಎರಡು ಮಾರ್ಗಗಳಿವೆ. ಬೆಂಗಳೂರಿನಿಂದ ಹಾಸನ, ಬೇಲೂರು, ಚಿಕ್ಕಮಗಳೂರು, ಆಲ್ದೂರು ಮಾರ್ಗದಲ್ಲಿ ಕೆಲವರು ಹೋಗುತ್ತಾರೆ. ಬಹುತೇಕ ಪ್ರವಾಸಿಗರು ಗೂಗಲ್ ಮ್ಯಾಪ್ ಅನುಸರಿಸಲಿದ್ದು, ಗೂಗಲ್ ಹಾಸನ, ಚಿಕ್ಕಮಗಳೂರು, ಹಾಂದಿ, ಬಸ್ಕಲ್ ಮಾರ್ಗ ತೋರಿಸುತ್ತದೆ. ಈ ಮಾರ್ಗದಲ್ಲಿ ಪ್ರಯಾಣ ಮಾಡಿದರೆ 10 ಕಿಮೀ ಕಡಿಮೆಯಾಗಲಿದೆ. ಸಾಮಾನ್ಯವಾಗಿ ಗೂಗಲ್ ಕಿಮೀ ಕಡಿಮೆ ಇರುವ ಮಾರ್ಗವನ್ನೇ ತೋರಿಸುತ್ತದೆ.

    ಮೂಡಿಗೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹಾಂದಿ ಬಸ್ಕಲ್ ನಡುವೆ ಸುಮಾರು 14 ಕಿಮೀ ರಸ್ತೆ ಹಾಳಾಗಿದ್ದು, ಈ ರಸ್ತೆಯಲ್ಲಿ ಪ್ರಯಾಣ ಮಾಡಲು ತುಂಬಾ ಪ್ರಯಾಸ ಪಡಬೇಕು. ಒಮ್ಮೆ ಈ ರಸ್ತೆಯಲ್ಲಿ ಬಂದವರು ಮತ್ತೊಮ್ಮೆ ಬರುವುದಿಲ್ಲ. ಒಂದು ದಿನಕ್ಕೆ ಈ ಮಾರ್ಗದಲ್ಲಿ ಸರಾಸರಿ 500 ಪ್ರವಾಸಿ ವಾಹನಗಳು ಸಂಚರಿಸುತ್ತವೆ.

    ರಾಜ್ಯದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಹೃದಯಾಘಾತಕ್ಕೆ ಬಲಿ; ಒಂದೇ ವಾರದಲ್ಲಿ ದಿನ ಬಿಟ್ಟು ದಿನ 3 ಮಕ್ಕಳು ಹೃದಯಾಘಾತದಿಂದ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts