More

    ಚಿಕ್ಕನಾಯಕನಹಳ್ಳಿ-ಕೆಬಿ ಕ್ರಾಸ್ ಚತುಷ್ಪಥ ಮನವಿಗೆ ಗಡ್ಕರಿ ಸ್ಪಂದನೆ

    ತುಮಕೂರು : ಚಿಕ್ಕನಾಯಕನಹಳ್ಳಿ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 150ಎ ಚತುಷ್ಪಥವಾಗಿಸಬೇಕು. ಬೈಪಾಸ್ ರಸ್ತೆ ನಿರ್ಮಾಣಕ್ಕೆ ಹೆಚ್ಚುವರಿ ಅನುದಾನ ಮಂಜೂರು ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಬರೆದಿರುವ ಪತ್ರಕ್ಕೆ ಸಕಾರಾತ್ಮಕ ಸ್ಫಂದನೆ ಸಿಕ್ಕಿದೆ.

    25ಕ್ಕೂ ಹೆಚ್ಚು ಕಬ್ಬಿಣದ ಅದಿರು ಗಣಿಗಾರಿಕೆ ಕ್ಲಸ್ಟರ್‌ಗಳಿಗೆ ಬಹಳ ಪ್ರಸಿದ್ಧವಾಗಿದೆ ಮತ್ತು ತೆಂಗಿನಕಾಯಿ ಮತ್ತಿತರ ಸರಕು ಪೂರೈಸುವ ಜಿಲ್ಲೆಯ ಚಿಕ್ಕನಾಯಕನಹಳ್ಳಿಯಿಂದ ಕೆ.ಬಿ.ಕ್ರಾಸ್ ನಡುವಿನ 6.26ಕಿಮೀ ರಸ್ತೆಯನ್ನು ಚತುಷ್ಪಥವಾಗಿ ಮೇಲ್ದರ್ಜೆಗೇರಿಸಬೇಕು ಎಂದು ಮನವಿ ಮಾಡಲಾಗಿದ್ದು, ಭೇಟಿಗೂ ಅವಕಾಶ ಕೋರಿದ್ದು ಈ ಭಾಗದಲ್ಲಿ ಜನರಿಗೆ ಅನುಕೂಲವಾಗಲಿದೆ.

    ಸಚಿವ ಮಾಧುಸ್ವಾಮಿ ಸ್ವಕ್ಷೇತ್ರದ ಹುಳಿಯಾರು-ಕೆ.ಬಿ.ಕ್ರಾಸ್‌ವರೆಗಿನ ಎರಡು ಪಥಗಳಿಗೆ ಮರು ನಿರ್ಮಾಣದ ಕೆಲಸ ಪ್ರಗತಿಯಲ್ಲಿದ್ದು ಇದು ಸಾಕಾಗುವುದಿಲ್ಲ, ಚಿಕ್ಕನಾಯಕನಹಳ್ಳಿ ಕರ್ನಾಟಕದ ಕಬ್ಬಿಣದ ಅದಿರು ಗಣಿಗಾರಿಕೆಯ ಪ್ರಮುಖ ವಲಯವಾಗಿದ್ದು ಗಣಿಗಾರಿಕೆ ಚಟುವಟಿಕೆಗಳು ಪುನರಾರಂಭವಾದರೆ ರಸ್ತೆ ಹಾಳಾಗುವ ಅಪಾಯವಿದ್ದು ನಾಲ್ಕು ಪಥಕ್ಕೆ ಹೆಚ್ಚಿಸಲು ತುರ್ತು ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

    ಪಟ್ಟಣದ ಬೈಪಾಸ್ ರಸ್ತೆ 9.36ಕಿಮೀ ನಿರ್ಮಿಸಲು ಕೋರಲಾಗಿದ್ದು ಮಾರ್ಗ ಪರಿಷ್ಕರಣೆ ಮತ್ತು ಭೂಸ್ವಾಧೀನಕ್ಕೆ ಹೆಚ್ಚವರಿ 46 ಕೋಟಿ ರೂ. ಮಂಜೂರು ಮಾಡಬೇಕಿದೆ. ಈ ಬಗ್ಗೆ ಕೇಂದ್ರ ಸಚಿವರ ಗಮನ ಸೆಳೆಯಲಾಗಿದ್ದು ಈ ಬಗ್ಗೆ ಕೂಡಲೇ ಪ್ರಸ್ತಾವನೆ ಸಲ್ಲಿಸುವಂತೆ ಕೇಂದ್ರ ಸರ್ಕಾರ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದು ಸೂಚಿಸಿದೆ.
    ರಾಷ್ಟ್ರೀಯ ಹೆದ್ದಾರಿ 150ಎ ನಮ್ಮ ಜಿಲ್ಲೆಯಲ್ಲಿ ಹಾದುಹೋಗುವ ರಾಹೆ 48, 234, 206, 75 ಮತ್ತು 275ನ್ನು ಸಂಪರ್ಕಿಸುವುದರಿಂದ ಪ್ರಮುಖ ರಸ್ತೆಯಾಗಿದ್ದು, ವಿಸ್ತರಣೆ ಅತ್ಯಗತ್ಯವಾಗಿದೆ ಎಂದು ಮಾಧುಸ್ವಾಮಿ ಮನವಿ ಮಾಡಿದ್ದಾರೆ.

    ಭೂ ಸ್ವಾದೀನಕ್ಕೆ ಹೆಚ್ಚುವರಿ ಅನುದಾನ ಕೋರಿಕೆ : ಹುಳಿಯಾರು-ಶಿರಾ ಸಂಪರ್ಕ ಕಲ್ಪಿಸುವ ರಾ.ಹೆ.234 ಮರುನಿರ್ಮಾಣ ಕಾಮಗಾರಿ ಕೂಡ ನಡೆಯುತ್ತಿದ್ದು, ಭೂಸ್ವಾದೀನ ಪ್ರಕ್ರಿಯೆ ಪೂರ್ಣವಾಗದೆ ಕಾಮಗಾರಿ ಕೆಲವು ಕಡೆಗಳಲ್ಲಿ ಸ್ಥಗಿತವಾಗಿದೆ. ಹುಳಿಯಾರು ಪಟ್ಟಣ ಮಿತಿ, ಬುಕ್ಕಾಪಟ್ಟಣ ಗ್ರಾಮ ಮಿತಿ, ಹುಯಿಲುದೊರೆ, ಹೊನ್ನೇನಹಳ್ಳಿ ಹಾಗೂ ಶಿರಾ ನಗರ ವ್ಯಾಪ್ತಿಯಲ್ಲಿ ಭೂಸ್ವಾದೀನಕ್ಕೆ ಇತ್ತೀಚಿನ ಪರಿಷ್ಕರಣೆಯಂತೆ 45.50ಕೋಟಿ ರೂ. ಹೆಚ್ಚುವರಿ ಹಣದ ಅಗತ್ಯವಿದ್ದು ಕೂಡಲೇ ಕಾಮಗಾರಿ ಆರಂಭಿಸಲು ಮಾಧುಸ್ವಾಮಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

    150ಎ ರಾಷ್ಟ್ರೀಯ ಹೆದ್ದಾರಿ ಜೇವರ್ಗಿ ದಕ್ಷಿಣ ಕರ್ನಾಟಕದ ಚಾಮರಾಜನಗರಕ್ಕೆ ಸಂಪರ್ಕಿಸುವ ರಸ್ತೆಯಾಗಿದ್ದು ಜಿಲ್ಲೆಯಲ್ಲಿ ಹಾದುಹೋಗುವ ಎಲ್ಲ ರಾಷ್ಟ್ರೀಯ ಹೆದ್ದಾರಿಗಳ ಜತೆ ಸಂಪರ್ಕಿಸುತ್ತದೆ, ಚಿಕ್ಕನಾಯಕನಹಳ್ಳಿಯಲ್ಲಿ ಗಣಿಗಾರಿಕೆ ಆರಂಭವಾದರೆ ಮಂಗಳೂರು, ಕಾರವಾರ ಬಂದರಿಗೂ ಇಲ್ಲಿಂದ ಸಂಪರ್ಕಿಸಬೇಕಿದೆ. ಹಾಗಾಗಿ, ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ದ್ವಿಪಥ ಸಾಕಾಗುವುದಿಲ್ಲ, ಚತುಷ್ಪಥದ ಅಗತ್ಯದ ಬಗ್ಗೆ ನಿತಿನ್ ಗಡ್ಕರಿ ಅವರಿಗೆ ಮನವರಿಕೆ ಮಾಡಲಾಗಿದೆ.
    ಜೆ.ಸಿ.ಮಾಧುಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts