More

    ಶಾಲೆಗೆ ಹೋಗಿ ಬಂದಿದ್ದಕ್ಕೂ ಮನೆಯಲ್ಲಿ ವಿಶೇಷ ಸ್ವಾಗತ; ತೆಂಗಿನಕಾಯಿ ಒಡೆದು, ಮಗನಿಗೆ ಹಾರ ಹಾಕಿ ಸ್ವಾಗತಿಸಿದ ತಂದೆ-ತಾಯಿ

    ಬೆಳಗಾವಿ: ಅತ್ತೆ ಮನೆಯಲ್ಲಿ ಅಳಿಯನಿಗೆ ವಿಶೇಷ ಸ್ವಾಗತ ಕೋರುವುದನ್ನು ಕೇಳಿರುತ್ತೇವೆ, ನೋಡಿರುತ್ತೇವೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿಗೆ ಶಾಲೆಗೆ ಹೋಗಿ ಬಂದಿದ್ದಕ್ಕೂ ಮನೆಯಲ್ಲಿ ವಿಶೇಷ ಸ್ವಾಗತ ಸಿಕ್ಕಿದೆ.

    ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಮೂರನೇ ತರಗತಿ ವಿದ್ಯಾರ್ಥಿ ತಮೀಮ್​ ಕುಡಚೆ ಎಂಬಾತನಿಗೆ ಮನೆಯವರು ವಿಶೇಷವಾಗಿ ಬರಮಾಡಿಕೊಂಡಿದ್ದಾರೆ. ಇಲ್ಲಿನ ಮುಲ್ಲಾ ಪ್ಲಾಟ್ ನಿವಾಸಿಯಾಗಿರುವ ಈ ವಿದ್ಯಾರ್ಥಿಯ ತಂದೆ ಸಲೀಮ್ ಕುಡಚೆ ಹಾಗೂ ತಾಯಿ, ಮಗ ಶಾಲೆಯಿಂದ ಮನೆಗೆ ಮರಳುತ್ತಿದ್ದಂತೆ ತೆಂಗಿನಕಾಯಿ ಒಡೆದು, ಹಾರ ಹಾಕಿ ಸ್ವಾಗತಿಸಿದ್ದಾರೆ.

    ಇದನ್ನೂ ಓದಿ: ಹೆಂಡತಿಗೆ ಹೈ-ಡೋಸ್ ಇಂಜೆಕ್ಷನ್ ಚುಚ್ಚಿ ಕೊಲೆ ಮಾಡಿದ ವೈದ್ಯ!; ಮದ್ಯಪಾನ, ಜೂಜು, ವಾಮಾಚಾರಗಳಲ್ಲೂ ತೊಡಗಿದ್ದ ಡಾಕ್ಟರ್​

    ಕರೊನಾ ಸಾಂಕ್ರಾಮಿಕ ಪಿಡುಗಿನಿಂದಾಗಿ ಶಾಲೆಯ ಭೌತಿಕ ತರಗತಿಗಳು ಸ್ಥಗಿತಗೊಂಡು ಮತ್ತೆ ಆರಂಭಗೊಂಡಿದೆ. ಎರಡು ವರ್ಷದ ಬಳಿಕ ಮತ್ತೆ ಶಾಲೆಗೆ ಹೋಗಿ ಬಂದಿರುವ ಖುಷಿಗೆ ಈ ಪಾಲಕರು ಮಗನನ್ನು ಹೀಗೆ ಸ್ವಾಗತಿಸಿ ಸಂತಸ ವ್ಯಕ್ತಪಡಿಸಿದ್ದಾರೆ.

    ‘ನನ್ನ ಹಾಗೂ ಮಗು ಲೈಫ್ ಹಾಳು ಮಾಡಿದ್ದಿ’ ಎಂದು ವಾಟ್ಸ್​​ಆ್ಯಪ್​ ಸ್ಟೇಟಸ್​ ಹಾಕಿ, 6 ತಿಂಗಳ ಮಗು ಜತೆ ನದಿಗೆ ಹಾರಿದ ತಾಯಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts