More

    ದುಬೈನಲ್ಲಿ ರಿಷಭ್​ ಶೆಟ್ರ ಅಡ್ವೆಂಚರ್​! ಡಿವೈನ್​ ಸ್ಟಾರ್​ಗೆ ಇದು ಫ್ಯಾಮಿಲಿ ಟೈಮ್​

    ಬೆಂಗಳೂರು: ಕಾಂತಾರದ ಚಿತ್ರದಲ್ಲಿ ಅವಿರತವಾಗಿ ಕೆಲಸ ಮಾಡಿ ದಣಿದಿದ್ದ ಡಿವೈನ್ ಸ್ಟಾರ್ ರಿಷಭ್​ ಶೆಟ್ರು ಈಗ ದುಬೈ ಟ್ರಿಪ್ಟಿಗೆ ಹೊರಟಿದ್ದಾರೆ. ಕುಟುಂಬದ ಜೊತೆ ರಿಷಬ್ ದುಬೈ ಪ್ರವಾಸ ಕೈಗೊಂಡಿದ್ದು ಕೆಲ ಸಮಯ ಆರಾಮವಾಗಿ ಕಾಲ ಕಳೆಯಲಿದ್ದಾರೆ.

    ಕಾಂತಾರ ಬ್ಲಾಕ್​ಬಸ್ಟರ್ ಹಿಟ್ ಆಗಿದ್ದು ಈಗ ದುಬೈನಲ್ಲಿ ಫ್ಯಾಮಿಲಿ ಜೊತೆ ಬಿಂದಾಸ್ ಟ್ರಿಪ್​ಗೆ ಹೊರಟಿದ್ದಾರೆ. ಸಿನಿಮಾ ಶೂಟಿಂಗ್, ಪ್ರಮೋಷನ್ ಅಂತ ವರ್ಷಗಟ್ಟಲೇ ಬ್ಯುಸಿಯಿದ್ದ ರಿಷಭ್ ಶೆಟ್ರು ಈಗ ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿದ್ದಾರೆ. ಪತ್ನಿ ಪ್ರಗತಿ, ಮಗಳು ಆರಾಧ್ಯಾ ಹಾಗೂ ಮಗ ರಣ್ವಿತ್ ಜೊತೆ ರಿಷಬ್ ದುಬೈಗೆ ರಜೆಯ ಮೇಲೆ ಹೋಗಿದ್ದಾರೆ.

    ಅರಬ್ ದೇಶದಲ್ಲಿ ರಿಷಭ್​ ಉತ್ತಮವಾಗಿ ತಮ್ಮ ಸಮಯ ಕಳೆಯಲಿದ್ದು ಡೆಸರ್ಟ್ ರೈಡಿಂಗ್, ಪ್ಯಾರಾ ಗ್ಲೈಡಿಂಗ್ ಸೇರಿದಂತೆ ಅಡ್ವೆಂಚರಸ್ ಆಟಗಳನ್ನು ಆಡುತ್ತಾ ಶೆಟ್ರು ಎಂಜಾಯ್ ಮಾಡಲು ಮುಂದಾಗಿದ್ದಾರೆ. ಈಗ ದುಬೈ ಪ್ರವಾಸದ ವಿಡಿಯೋ ಶೇರ್ ಮಾಡಿರುವ ರಿಷಭ್​ ಶೆಟ್ರು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿ ಡಿವೈನ್ ಸ್ಟಾರ್ ಸಂಭ್ರಮಿಸಿದ್ದಾರೆ. ಈ ವಿಡಿಯೋ ನೋಡಿ ಅಭಿಮಾನಿಗಳು, ಕಾಂತಾರ 2 ಯಾವಾಗ ಬಾಸ್ ಅಂತ ಕಮೆಂಟ್ ಹಾಕುತ್ತಿದ್ದಾರೆ.

     
     
     
     
     
    View this post on Instagram
     
     
     
     
     
     
     
     
     
     
     

    A post shared by Pragathi Shetty (@pragathirishabshetty)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts