More

    ಕಳೆದುಹೋದ ಉಂಗುರ 18 ವರ್ಷಗಳ ಬಳಿಕ ಮನೆ ಬಾಗಿಲಲ್ಲಿ ಪ್ರತ್ಯಕ್ಷ!

    ಫ್ಲೊರಿಡಾ: ಜೀವನದಲ್ಲಿ ನಮಗೆ ಏನೆಲ್ಲಾ ಉಡುಗೊರೆಗಳು ಸಿಕ್ಕಿರುತ್ತವೆ. ಅವುಗಳ ಪೈಕಿ ಕೆಲವೊಂದು ನಮ್ಮ ಜೀವನದ ಅಮೂಲ್ಯ ವಸ್ತುವಾಗಿಬಿಡುತ್ತವೆ. ಅದೇ ರೀತಿ ಶಾಲಾ-ಕಾಲೇಜುಗಳ ದಿನಗಳಲ್ಲಿ ಪಡೆದ ಬಹುಮಾನಗಳ ಪೈಕಿ ಕೆಲವು ಎಷ್ಟೇ ಚಿಕ್ಕದಾಗಿದ್ದರೂ ಅದರ ನೆನಪು ಮಾತ್ರ ಜೀವನ ಪರ್ಯಂತ ಇರುತ್ತವೆ.

    ಅಂಥ ಅಮೂಲ್ಯ ಎಂದುಕೊಂಡಿದ್ದ ವಸ್ತು ಕಳೆದುಹೋದರೆ ಅದರ ನೋವು ಅನುಭವಿಸಿದವರಿಗೇ ಗೊತ್ತು. ಕಳೆದುಕೊಂಡ ವಸ್ತು ಅಚಾನಕ್‌ ಆಗಿ ಸಿಕ್ಕಿಬಿಟ್ಟರೆ? ಬಹುಶಃ ಜೀವನದಲ್ಲಿ ಅದಕ್ಕಿಂತ ಖುಷಿಯ ಘಟನೆ ಬೇರೊಂದಿಲ್ಲ ಎನ್ನಿಸಿಬಿಡುತ್ತದೆ.

    ಅಂಥದ್ದೇ ಒಂದು ಘಟನೆ, ಆದರೆ ತೀರಾ ಅಪರೂಪವಾದಂಥ ಘಟನೆಯೊಂದು ಫ್ಲೊರಿಡಾ ನಿವಾಸಿಯೊಬ್ಬರ ಜೀವನದಲ್ಲಿ ನಡೆದಿದ್ದು, ಈ ಘಟನೆಯೀಗ ವಿಶ್ವದ ಗಮನ ಸೆಳೆದಿದೆ.

    ಇದನ್ನೂ ಓದಿ: ತಯಾರಾಯ್ತು ಖಾದಿ ಪಿಪಿಇ ಕಿಟ್‌: ವಿದೇಶಿ ಕಿರಿಕಿರಿಯಿಂದ ವೈದ್ಯರಿನ್ನು ನಿರಾಳ

    ಅದೇನೆಂದರೆ, ಆಮಿ ಗೋಯೆಟ್ಸ್‌ ಎಂಬಾಕೆ ಹೈಸ್ಕೂಲ್‌ ಮುಗಿಸಿ ಕಾಲೇಜಿಗೆ ಹೋಗುವ ಸಂದರ್ಭದಲ್ಲಿ ಆಕೆಗೊಂದು ಉಂಗುರವನ್ನು ಶಾಲೆಯಿಂದ ಗಿಫ್ಟ್‌ ನೀಡಲಾಗಿತ್ತು. ಇದು ನಡೆದು 18 ವರ್ಷಗಳೇ ಸಂದಿವೆ. ಅಂದರೆ 2002ರಲ್ಲಿ ಆಗಿರುವ ಘಟನೆ ಇದು. ಆದರೆ ದುರದೃಷ್ಟವಶಾತ್‌ ಆಕೆ ಆ ಉಂಗುರ ಹಾಕಿಕೊಂಡು ಬೀಚ್‌ಗೆ ಹೋಗಿದ್ದ ಸಂದರ್ಭದಲ್ಲಿ ಎಲ್ಲಿಯೋ ಕಳೆದುಕೊಂಡು ಬಿಟ್ಟಿದ್ದಾಳೆ.

    ಅಪರೂಪದ ಉಡುಗೊರೆ ಕಳೆದುಕೊಂಡಾಗ ಆಮಿಗಾದ ದುಃಖ ಅಷ್ಟಿಷ್ಟಲ್ಲ. ಅದರ ಹುಡುಕಾಟಕ್ಕೆ ಆಕೆ ಪಟ್ಟಿರುವ ಶ್ರಮವೂ ಅಷ್ಟಿಷ್ಟಲ್ಲ. ಪೊಲೀಸರಲ್ಲಿ ದೂರು ಕೂಡ ದಾಖಲು ಮಾಡಿದ್ದಳು. ಎಲ್ಲೆಡೆ ಹುಡುಕಿ ಸೋತು ನಿರಾಶಳಾದ ಆಮಿ ವರ್ಷಗಳು ಕಳೆದಂತೆ ಅದನ್ನು ಮರೆತುಬಿಟ್ಟಿದ್ದಾಳೆ.

    ಬರೋಬ್ಬರಿ 18 ವರ್ಷಗಳ ನಂತರ ಆಕೆಯ ಮನೆಗೆ ಬಂದ ಪೊಲೀಸರು ಆ ಉಂಗುರವನ್ನು ಆಮಿಗೆ ತೋರಿಸಿದಾಗ ಆಘಾತ, ಅಚ್ಚರಿ, ಖುಷಿ ಎಲ್ಲವೂ ಒಟ್ಟಿಗೇ ಆಗಿದೆ. ಇದು ತನ್ನದೇ ಉಂಗುರ ಎಂದು ಆಕೆ ಹೇಳಿದ್ದಾಳೆ.

    ಪೊಲೀಸರು ಈ ಉಂಗುರದ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಆಕೆಗೆ ಕೇಳಿದಾಗ, ಎಲ್ಲದಕ್ಕೂ ಸರಿಯುತ್ತರ ನೀಡಿದ್ದನ್ನು ನೋಡಿ, ಉಂಗುರ ಆಕೆಗೆ ಕೊಡಲಾಗಿದೆ. ಉಂಗುರವು ಬೀಚ್‌ನಲ್ಲಿ ಒಬ್ಬ ವ್ಯಕ್ತಿಗೆ ಸಿಕ್ಕಿದ್ದು, ಅದನ್ನಾತ ಪೊಲೀಸರಿಗೆ ನೀಡಿದ್ದಾನೆ. ಉಂಗುರದಲ್ಲಿ ಶಾಲೆಯ ಹೆಸರು, ಇಸವಿ ಎಲ್ಲವೂ ಇದ್ದುದರಿಂದ ಅದರ ಬಗ್ಗೆ ತನಿಖೆ ಮಾಡಿದ ಪೊಲೀಸರು ಆಮಿಯ ಪತ್ತೆ ಹಚ್ಚಿ ಅದನ್ನು ಕೊಟ್ಟಿದ್ದಾರೆ! ಆಮಿ ಈ ಬಗ್ಗೆ ತಮ್ಮ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದು, ಭಾರಿ ವೈರಲ್‌ ಆಗಿದೆ.

    📌STORY TIME! I am still in shock!!!! Gwinnett County PD called me this morning. They said they needed to ask me some…

    Posted by Amy Goetz on Tuesday, June 16, 2020

    ದೇಶಭಕ್ತಿಯ ಈ ಪರಿ! ಉಪವಾಸವಾದರೂ ಸತ್ತೇವು, ಉದ್ಯೋಗಕ್ಕೆ ಧಿಕ್ಕಾರ ಎಂದ ಜೊಮಾಟೊ ಸಿಬ್ಬಂದಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts