More

    ಬಾಗಿಲಿಗೆ ಮನವಿ ಅಂಟಿಸಿ ಪ್ರತಿಭಟನೆ

    ಸವದತ್ತಿ: ಕಾಂಕ್ರೀಟ್ ರಸ್ತೆ ಕಳಪೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು ಸೋಮವಾರ ಲೋಕೋಪಯೋಗಿ ಇಲಾಖೆಯ ಕಚೇರಿ ಬಾಗಿಲಿಗೆ ಮನವಿ ಪತ್ರ ಅಂಟಿಸಿ ವಿನೂತನವಾಗಿ ಪ್ರತಿಭಟಿಸಿದ್ದಾರೆ.

    ಪ್ರತಿಭಟನೆ ವೇಳೆ ಲೋಕೋಪಯೋಗಿ ಇಲಾಖೆಯ ಎಇಇ ಎಚ್.ಎ.ಕದ್ರಾಪುರಕರ ಅವರು ಕಚೇರಿಯಲ್ಲಿ ಇರಲಿಲ್ಲ. ಇವರ ಮನವಿಯನ್ನು ಲೋಕೋಪಯೋಗಿ ಇಲಾಖೆ ಸಿಬ್ಬಂದಿ ಸ್ವೀಕರಿಸಲಿಲ್ಲ, ಹೀಗಾಗಿ ಸಿಬ್ಬಂದಿ ವರ್ತನೆ ಖಂಡಿಸಿ ಇಲಾಖೆ ಕಚೇರಿ ಬಾಗಿಲಿಗೆ ಮನವಿ ಪತ್ರ ಅಂಟಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.

    ಸಾಮಾಜಿಕ ಕಾರ್ಯಕರ್ತ ಮಲ್ಲಿಕಾರ್ಜುನ ಬೀಳಗಿ ಮಾತನಾಡಿ, ಸಾರ್ವಜನಿಕ ಲೋಕೋಪಯೋಗಿ ಇಲಾಖೆಯಿಂದ ಇಲ್ಲಿನ ಪುರಸಭೆಯಿಂದ ಎಲ್.ಐ.ಸಿ ಕಚೇರಿವರೆಗೆ ಕೆಲ ತಿಂಗಳುಗಳ ಹಿಂದೆ ನಡೆಸಿರುವ ರಸ್ತೆ ಕಾಮಗಾರಿ ಕಳಪೆಯಾಗಿದೆ. ಕಿತ್ತು ಹೋದ ರಸ್ತೆಗೆ ಮರು ಕಾಂಕ್ರೀಟ್ ನಡೆಸಬೇಕು. ಸೂಕ್ತ ಕ್ರಮ ಜರುಗಿಸದಿದ್ದರೆ ರಸ್ತೆ ತಡೆದು ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

    ಗುತ್ತಿಗೆದಾರರು ಮತ್ತು ಅಧಿಕಾರಿಗಳು ಸೇರಿ ಜನರ ತೆರಿಗೆ ಹಣ ಪೋಲು ಮಾಡುತ್ತಿದ್ದಾರೆ. ಕಳಪೆ ರಸ್ತೆ ಕುರಿತು ಜಾಲತಾಣಗಳಲ್ಲಿ ಟೀಕಿಸಿದಾಗ ರಸ್ತೆಗೆ ತೇಪೆ ಹಚ್ಚುವ ಕಾರ್ಯ ನಡೆಸಲಾಗಿದೆ. 5 ಕೋಟಿ ವೆಚ್ಚದಲ್ಲಿ ಸಿ.ಸಿ. ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ಈಗಲೇ ತೆಗ್ಗು ಗುಂಡಿ ಬಿದ್ದು ರಸ್ತೆ ಬಿರುಕು ಬಿಟ್ಟಿದೆ. ಸಮಸ್ಯೆ ಕುರಿತು ಹಲವು ಬಾರಿ ಇಲಾಖೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ದೂರಿದರು.

    ಗುತ್ತಿಗೆದಾರರು ಬಿರುಕು ಬಿಟ್ಟ ಮತ್ತು ಹದಗೆಟ್ಟ ರಸ್ತೆಯನ್ನು ಸಿಮೆಂಟ್ ನೀರಿನಿಂದ ತೇಪೆ ಹಚ್ಚುವ ಕೆಲಸ ಮಾಡುತ್ತಿದ್ದು, ಇದು ಜನರ ಕಣ್ಣಿಗೆ ಮಣ್ಣೆರೆಚುವ ತಂತ್ರವಾಗಿದ್ದು, ಜನರ ತೆರಿಗೆ ಹಣದ ಲೂಟಿ ನಡೆಯುತ್ತಿದೆ. ತೇಪೆ ಕಾರ್ಯ ಕೈಬಿಟ್ಟು ಮರು ಕಾಂಕ್ರೀಟ್ ಕಾಮಗಾರಿ ನಡೆಸಬೇಕು. ರಸ್ತೆಯ ಕಾಮಗಾರಿಯನ್ನು ಒಂದು ವಾರದೊಳಗೆ ಪ್ರಾರಂಭಿಸದಿದ್ದರೆ ರಸ್ತೆ ರೋಖೋ ಚಳವಳಿ ನಡೆಸಲಾಗುವುದು ಎಚ್ಚರಿಸಿದರು.

    ಶಂಕರ ಇಜಂತಕರ, ನಿಂಗಪ್ಪ ಬೆಡಸೂರ, ಯಲ್ಲಪ್ಪ ರುದ್ರಾಕ್ಷಿ, ಬಸವರಾಜ ಬಿಕ್ಕಣ್ಣವರ, ಉಮೇಶ ಭೀಮಣ್ಣವರ, ಗುರುನಾಥ ಅಲಬನ್ನವರ ಮತ್ತು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts