More

    ಮಹಾರಾಷ್ಟ್ರದ ಹಳ್ಳಿಯಲ್ಲಿ 18 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ಬ್ಯಾನ್! ಕಾರಣ ಏನು ಗೊತ್ತಾ?

    ಮುಂಬೈ: ಈಗಿನ ಕಾಲದ ಮಕ್ಕಳು ಮೂರೂ ಹೊತ್ತು ಮೊಬೈಲ್​ನಲ್ಲಿ ಮುಳುಗಿರುತ್ತಾರೆ. ಇದನ್ನು ತಪ್ಪಿಸಲು ಮಹಾರಾಷ್ರ್ಟದ ಯವತ್ಮಾಲ್​ ಜಿಲ್ಲೆಯ ಬನ್ಸಿ ಗ್ರಾಮದಲ್ಲಿ 18 ವರ್ಷದ ಕೆಳಗಿನ ವಯಸ್ಸಿನವರಿಗೆ ಮೊಬೈಲ್ ಫೋನ್ ಬಳಕೆಯನ್ನು ಬ್ಯಾನ್ ಮಾಡಿದ್ದಾರೆ.

    ಬನ್ಸಿ ಹಳ್ಳಿಯ ಜನರಿಗೆ ಮಕ್ಕಳು ಗೇಮ್ ಮತ್ತು ಆ ವಯಸ್ಸಿಗೆ ಬೇಡವಾದ ವೆಬ್ಸೈಟ್​ಗಳನ್ನು ಬಳಸಿ ಹಾಳಾಗುತ್ತಾರೆ ಎಂಬ ಚಿಂತೆ. ಆದ್ದರಿಂದ ಬನ್ಸಿ ಹಳ್ಳಿಯ ಸರಪಂಚ್ ಗಜಾನನ್ ಹಳ್ಳಿಯ ಎಲ್ಲಾ ಪೋಷಕರಿಗೆ ಬ್ಯಾನ್​ ಅನ್ನು ತಮ್ಮ ಮಕ್ಕಳು ಕಡ್ಡಾಯವಾಗಿ ಪಾಲಿಸುವಂತೆ ಮಾಡಿ ಎಂದು ಹೇಳಿದ್ದಾರೆ.

    ಸರಪಂಚ್ ಪ್ರಕಾರ, ಸ್ಕೂಲ್ ಮಕ್ಕಳು ಮೊಬೈಲ್ ವ್ಯಸನಿಗಳಾಗಿದ್ದಾರೆ ಆದ್ದರಿಂದ ಸರ್ವಾನುಮತದಿಂದ 18 ವರ್ಷದೊಳಗಿನ ಮಕ್ಕಳು ಮೊಬೈಲ್ ಫೋನ್ ಬಳಸುವಂತಿಲ್ಲ ಎಂಬ ನಿರ್ಣಯಕ್ಕೆ ಬಂದಿದ್ದಾರೆ.

    “ಇದನ್ನು ಅನುಷ್ಠಾನಕ್ಕೆ ತರುವುದು ಕಷ್ಟ ಎಂಬುದು ತಿಳಿದಿದೆ. ಮೊದಲು, ಕೌನ್ಸೆಲಿಂಗ್ ಮಾಡುತ್ತೇವೆ, ನಮ್ಮ ಗುರಿ ತಲುಪಲು ಅಸಾಧ್ಯವಾದರೆ ದಂಡ ವಿಧಿಸಲಾಗುವುದು. ಈ ನಿರ್ಧಾರವನ್ನು ಸರ್ವಾನುಮತದಿಂದ ತೆಗೆದುಕೊಂಡಿದ್ದೇವೆ” ಎಂದು ಗಜಾನನ್ ಹೇಳಿದ್ದಾರೆ.

    ದಂಡದ ಮೊತ್ತ ಶೀಘ್ರದಲ್ಲಿ ನಿಗದಿಯಾಗುತ್ತದೆ ಎಂದು ಸರಪಂಚ್ ತಿಳಿಸಿದ್ದಾರೆ. ಏಜೆನ್ಸೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts