More

    ಬಿಲ್​ ಕಟ್ಟಲು ಬಂದಿದ್ದ ವ್ಯಕ್ತಿಯಿಂದ 75 ಸಾವಿರ ರೂ. ಹಣವಿದ್ದ ಬ್ಯಾಗ್​ ಕಸಿದು ಕೋತಿ ಎಸ್ಕೇಪ್! ನಂತರ ನಡೆದಿದ್ದಿಷ್ಟು…

    ಶಿಮ್ಲಾ: ಫೋನ್​ ಬಿಲ್​ ಕಟ್ಟಲು ಬಂದಿದ್ದ ಗ್ರಾಹಕರೊಬ್ಬರ ಮೇಲೆ ಕೋತಿಯೊಂದು ದಾಳಿ ಮಾಡಿ, ಅವರ ಬಳಿಯಿದ್ದ 75 ಸಾವಿರ ರೂ. ಹಣವಿದ್ದ ಬ್ಯಾಗ್​​ ಅನ್ನು ಕಸಿದು ಪರಾರಿಯಾದ ಘಟನೆ ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದಲ್ಲಿರುವ ಮಾಲ್​ ರಸ್ತೆಯ ಬಿಎಸ್​ಎನ್​ಎಲ್​ ಕಚೇರಿಯಲ್ಲಿ ನಡೆದಿದೆ.

    ಕೋತಿಗಳ ದಾಳಿ ಈ ಪ್ರದೇಶದ ತುಂಬಾ ಸಾಮಾನ್ಯ ಎಂದು ಹೇಳಲಾಗಿದೆ. ಕೋತಿ ಬಿಎಸ್​ಎನ್​ಎಲ್​ ಕಚೇರಿಯ ಮೇಲೆ ಕುಳಿತು, ತಾನು ಕಸಿದುಕೊಂಡಿದ್ದ ಬ್ಯಾಗಿನಿಂದ ನೋಟುಗಳನ್ನು ಹೊರತೆಗೆದು ಹರಿದು, ಬೀಸಾಡಿದೆ. ಘಟನೆಯ ಬಳಿಕ 70 ಸಾವಿರ ಮೌಲ್ಯದ ನೋಟುಗಳು ಪತ್ತೆಯಾಗಿದೆ. 4 ಸಾವಿರ ರೂ. ಮೌಲ್ಯದ ನಗದನ್ನು ಕೋತಿ ಹರಿದು ಹಾಕಿದೆ. ಈ ವೇಳೆ ಸಾಕಷ್ಟು ಸಂಖ್ಯೆಯಲ್ಲಿ ಜನರು ಒಂದೆಡೆ ಸೇರಿ ಕೋತಿಯ ಚೇಷ್ಟೆಯನ್ನು ನಿಂತು ನೋಡಿದ್ದಾರೆ.

    ಇದಕ್ಕೂ ಮುನ್ನ ಕೋತಿಯಿಂದ ಬ್ಯಾಗ್​ ಕಿತ್ತುಕೊಳ್ಳಲು ಜನರು ಸಾಕಷ್ಟು ಪ್ರಯತ್ನ ಮಾಡಿದರೂ ಅದು ಸಾಧ್ಯವಾಗಲಿಲ್ಲ. ಬ್ಯಾಗ್​ನಲ್ಲಿದ್ದ ಕೆಲವು ಪತ್ರಗಳನ್ನು ಸಹ ಹರಿದು ಗಾಳಿಗೆ ತೂರಿದೆ. ಸಾಕಷ್ಟು ಚೇಷ್ಟೆ ಮಾಡಿದ ಬಳಿಕ ಬ್ಯಾಗ್​ ಅನ್ನು ಅಲ್ಲಿಯೇ ಬಿಟ್ಟು ಕೋತಿ ಅಲ್ಲಿಂದ ಪರಾರಿ ಆಯಿತು. ಬಿಎಸ್​ಎನ್​ಎಲ್​ ಕಚೇರಿಯ ಅಧಿಕಾರಿಗಳು ಕಟ್ಟಡದ ಮೇಲೆ ಏರಿ ನೋಡಿದಾಗ ಬ್ಯಾಗ್​ನಲ್ಲಿ 70 ಸಾವಿರ ರೂಪಾಯಿ ಹಣ ಸುರಕ್ಷಿತವಾಗಿದ್ದವು. 4 ಸಾವಿರ ರೂ. ಮಾತ್ರ ಹಾಳಾಗಿತ್ತು.

    ಕೋತಿಯನ್ನು ಬೆದರಿಸಲು ಏರ್ ಗನ್‌ ಸಹ ಬಳಸಲಾಯಿತು ಎಂದು ಟೆಲಿಕಾಂ ತಂತ್ರಜ್ಞ ಮುಜೀಬ್ ರೆಹಮಾನ್ ಹೇಳಿದ್ದಾರೆ. ಕಚೇರಿಯ ಕೌಂಟರ್ ವರೆಗೆ ಮಂಗಗಳು ಹೆಚ್ಚಾಗಿ ಬರುತ್ತವೆ ಎಂದು ತಿಳಿಸಿದರು. ಕೋತಿಗಳ ನಿರಂತರ ದಾಳಿಯ ವಿರುದ್ಧ ಸರ್ಕಾರ ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. (ಏಜೆನ್ಸೀಸ್​)

    ‘ವಿಜಯಾನಂದ’ ಸಿನಿಮಾ ಹಾಡಿಗೆ ಅಭಿಮಾನಿಗಳು ಫಿದಾ… 2 ಕೋಟಿ ದಾಟಿದ ವ್ಯೂವ್ಸ್​

    ಸಾವರ್ಕರ್​ ವಿಚಾರವಾಗಿ ಶಿವಸೇನೆ ಮತ್ತು ಕಾಂಗ್ರೆಸ್​ ನಡುವೆ ಭಿನ್ನಮತ?

    ನಾನು ರಾಜಕೀಯ ಬಿಟ್ರೂ ಮಂಡ್ಯ ಬಿಡಲ್ಲ: ಸುಮಲತಾ ಅಂಬರೀಶ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts