More

    ಮರುಗುತ್ತಿದೆ ಮುರಗೋಡ ಶಾಲೆ

    |ಮಹಾಂತೇಶ ಬಾಳಿಕಾಯಿ ಮುರಗೋಡ

    ಶತಮಾನದ ಇತಿಹಾಸ, ಹಲವು ದಾಖಲೆ ಹೊಂದಿರುವ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುರಗೋಡ ಪಟ್ಟಣದ ಸರ್ಕಾರಿ ಮಾದರಿ ಶಾಲೆ ಅಭಿವೃದ್ಧಿ ಕಾಣದೆ ಮರುಗುತ್ತಿದೆ. ಶಾಲೆಯ ಕೊಠಡಿಗಳು ಸಂಪೂರ್ಣ ಶಿಥಿಲಗೊಂಡಿದ್ದು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ನರಕಯಾತನೆ ಅನುಭವಿಸುತ್ತಿದ್ದಾರೆ.

    1880ರಲ್ಲಿ ಆರಂಭಗೊಂಡ ಈ ಸರ್ಕಾರಿ ಪ್ರಾಥಮಿಕ ಶಾಲೆಯು ಸುತ್ತಲಿನ 65ಕ್ಕೂ ಹೆಚ್ಚು ಗ್ರಾಮಗಳ ಮಕ್ಕಳಿಗೆ ವಿದ್ಯಾರ್ಜನೆ ನೀಡುತ್ತಲಿದೆ. ಶಾಲೆಯಲ್ಲಿ ಪ್ರಸಕ್ತ 1ರಿಂದ 8ನೇ ತರಗತಿವರೆಗೆ 498 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದು ಒಟ್ಟೂ 230 ವಿದ್ಯಾರ್ಥಿಗಳು ಹಾಗೂ 268 ವಿದ್ಯಾರ್ಥಿನಿಯರಿದ್ದಾರೆ. 15 ಶಿಕ್ಷಕರಿದ್ದಾರೆ.

    ಶಾಲೆ ಆರಂಭದಿಂದ ಈವರೆಗೆ ಲಕ್ಷಾಂತರ ವಿದ್ಯಾರ್ಥಿಗಳು ಇಲ್ಲಿ ಕಲಿತಿದ್ದು, ವಿವಿಧ ಉನ್ನತ ಹುದ್ದೆಯಲ್ಲಿದ್ದಾರೆ. ಅನೇಕರು ರಾಜಕೀಯ ನಾಯಕರಾಗಿ, ಶಿಕ್ಷಕರಾಗಿ, ಗಣ್ಯ ಉದ್ಯಮಿಗಳಾಗಿ ಸಾಸಿದವರಿದ್ದಾರೆ. 140 ವಸಂತಗಳನ್ನು ಕಂಡ ಇಂತಹ ಐತಿಹಾಸಿಕ ಶಾಲೆ ನಿರ್ಲಕ್ಷ್ಯದ ಹೊಡೆತಕ್ಕೆ ಸಿಲುಕಿ ಕುಸಿದುಬೀಳುವ ಸ್ಥಿತಿ ತಲುಪಿವೆ. ಮುಂದೊಂದು ದಿನ ವಿದ್ಯಾರ್ಥಿಗಳ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಇನ್ನು, ಈ ಮಾದರಿ ಶಾಲೆಗೆ ಕಿಡಿಗೇಡಿಗಳ ಹಾವಳಿ ಬೇರೆ.

    ಶಾಲೆಗೆ ದುಸ್ಥಿತಿ: ಅನೇಕ ದಶಕಗಳ ಹಿಂದೆ ನಿರ್ಮಿಸಿರುವ ಸರ್ಕಾರಿ ಮಾದರಿ ಕೇಂದ್ರ ಶಾಲೆಯ ಹೆಂಚುಗಳ ಮೇಲ್ಛಾವಣಿ ಯಾವ ಕ್ಷಣದಲ್ಲಾದರೂ ನೆಲಕಚ್ಚುವ ಹಂತದಲ್ಲಿದೆ. ಕಿಡಿಗೇಡಿಗಳ ದುಷ್ಕೃತ್ಯಕ್ಕೆ ಶಾಲೆಯ ಬಾಗಿಲು, ಕಿಟಕಿಗಳು ನಾಶವಾಗಿವೆ. ವಿಜ್ಞಾನ ಸಾಮಗ್ರಿಗಳು, ಗ್ರಂಥಾಲಯದ ಪುಸ್ತಕಗಳನ್ನೂ ಕಳವು ಮಾಡಿದ್ದಾರೆ. ಶೌಚಗೃಹವಂತೂ ಸಂಪೂರ್ಣ ನಾಶವಾಗಿವೆ. ಶಾಲೆಯ ರಜಾ ದಿನಗಳಲ್ಲಿ ಜೂಜುಕೋರರ ಮೋಜು, ಮಸ್ತಿ ಮಾಡುವ ತಾಣವಾಗಿದೆ. ಆದರೂ ಈ ಬಗ್ಗೆ ಅಕಾರಿಗಳು, ಜನಪ್ರತಿನಿಗಳು ಗಮನ ಹರಿಸುತ್ತಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

    ಮಧ್ಯಾಹ್ನದ ಬಿಸಿಯೂಟ ಮಾಡುವ ಸ್ಥಳ ಅಸುರಕ್ಷತೆಯಿಂದ ಕೂಡಿದೆ. ಮೇಲ್ಛಾವಣಿಯಲ್ಲಿರುವ ಹೆಂಚುಗಳು ಕಿತ್ತು ಹೋಗಿವೆ. ಕೊಠಡಿ ಜಂತಿ, ಕಂಬಗಳು ಶಾಲಾ ಮಕ್ಕಳ ಪಾಲಿಗೆ ಯಮ ಸ್ವರೂಪಿಯಾಗಿವೆ. ಇರುವ ಒಟ್ಟೂ 29 ಕೊಠಡಿಗಳಲ್ಲಿ 17 ಕೊಠಡಿ ಹೆಂಚಿನ ಮೇಲ್ಛಾವಣಿಯದ್ದಾಗಿದ್ದು, ಇದರಲ್ಲಿ 15 ಕೊಠಡಿ ಸಂಪೂರ್ಣ ಶಿಥಿಲಗೊಂಡಿದೆ. ಇನ್ನುಳಿದ 12 ಕೊಠಡಿಗಳು ಸದ್ಯ ಶಿಕ್ಷಣಕ್ಕೆ ಆಸರೆಯಾಗಿವೆ.

    140 ವರ್ಷವಾದರೂ ಮರೀಚಿಕೆಯಾದ ಶತಮಾನೋತ್ಸವ

    ಶಾಲೆ ಆರಂಭವಾಗಿ 140 ವರ್ಷ ಕಳೆದರೂ ಶಾಲಾ ಶತಮಾನೋತ್ಸವ ಆಚರಿಸದಿರುವುದು ಶಿಕ್ಷಣ ಪ್ರೇಮಿಗಳ ಹಾಗೂ ಗ್ರಾಮಸ್ಥರ ಬೇಸರಕ್ಕೆ ಕಾರಣವಾಗಿದೆ. ಇದೇ ಕ್ಷೇತ್ರದಿಂದ ಆಯ್ಕೆಯಾಗಿದ್ದ ಎ್.ಡಿ. ಗೋರಾಬಾಳ ಅವರು 16 ವರ್ಷದ ಹಿಂದೆ ಬೆಳಗಾವಿ ಜಿಪಂ ಅಧ್ಯಕ್ಷರಾಗಿದ್ದ ವೇಳೆ ಮುರಗೋಡ ಮಾದರಿ ಶಾಲೆ ಬಗ್ಗೆ ಕಾಳಜಿ ವಹಿಸಿ, ಶತಮಾನೋತ್ಸವ ಆಚರಣೆಗೆ ಪೂರ್ವಭಾವಿ ಸಭೆ ಮಾಡಿದ್ದರು. ಬಳಿಕ ಅಕಾರಿಗಳು, ಎಸ್‌ಡಿಎಂಸಿ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು ಸರಿಯಾಗಿ ಸ್ಪಂದಿಸದ ಕಾರಣ ಶತಮಾನೋತ್ಸವ ಆಚರಣೆ ನನೆಗುದಿಗೆ ಬಿದ್ದಿದೆ.

    ಮುರಗೋಡ ಮಾದರಿ ಶಾಲೆಯ ಶತಮಾನೋತ್ಸವ ಆಚರಣೆ ಕುರಿತು ಶಿಕ್ಷಣ ಇಲಾಖೆ ಅಕಾರಿಗಳ ಜತೆ ಮಾತುಕತೆ ಮಾಡಲಾಗಿದೆ. ಶಾಲೆಗೆ ಕಿಡಿಗೇಡಿಗಳ ಉಪಟಳ ತಡೆಯಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು.
    | ಮಹಾಂತೇಶ ಎಸ್. ಕೌಜಲಗಿ ಶಾಸಕ, ಬೈಲಹೊಂಗಲ

    ಮುರಗೋಡ ಶಾಲೆಗೆ ಸಾಕಷ್ಟು ಬಾರಿ ಭೇಟಿ ನೀಡಿದ್ದು ಹಳೇ ಕೊಠಡಿ ತೆರವುಗೊಳಿಸಲು ಹಾಗೂ ಶೌಚಗೃಹ ನಿರ್ಮಿಸಲು ಅಲ್ಲಿನ ಪ್ರಧಾನ ಗುರುಗಳಿಗೆ ತಿಳಿಸಲಾಗಿದೆ. ಶತಮಾನೋತ್ಸವ ಆಚರಣೆಗೆ ಸ್ಥಳೀಯವಾಗಿ ಸಭೆ ಕರೆದು ಶಾಲೆ ಸುಧಾರಣೆ ಬಳಿಕ ದಿನಾಂಕ ನಿಗದಿ ಪಡಿಸಲಾಗುವುದು.
    | ಕೇಶವ ಪೆಟ್ಲೂರ ಕ್ಷೇತ್ರ ಶಿಕ್ಷಣಾಕಾರಿ, ಸವದತ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts