More

    ನಿವೃತ್ತ ಶಿಕ್ಷಕಿ ರತ್ನಾವತಿ ಬೈಕಾಡಿ ಅವರಿಗೆ ಗೌರವಾಭಿನಂದನೆ

    ಮಂಗಳೂರು: ಬೆಸೆಂಟ್ ಪ್ರೌಢಶಾಲೆಯ ನಿವೃತ್ತ ಶಿಕ್ಷಕಿ, ಸಂಪನ್ಮೂಲ ವ್ಯಕ್ತಿ ರತ್ನಾವತಿ ಜೆ. ಬೈಕಾಡಿ ಅವರನ್ನು ಮಂಗಳೂರಿನ ಗುರುಸೇವಾ ಪರಿಷತ್ತಿನ ಮಹಿಳಾ ಘಟಕದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.


    ಆನೆಗುಂದಿ ಸಂಸ್ಥಾನ ಸರಸ್ವತೀ ಪೀಠ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಅವರು ರತ್ನಾವತಿ ಜೆ. ಬೈಕಾಡಿಯವರನ್ನು ಫಲ ಮಂತ್ರಾಕ್ಷತೆ ನೀಡಿ ಹರಸಿದರು. ರಥಬೀದಿ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ಜರಗಿದ ಈ ಕಾರ್ಯಕ್ರಮದಲ್ಲಿ ಗುರು ಸೇವಾ ಪರಿಷತ್ತಿನ ಮಹಿಳಾ ಘಟಕದ ಸದಸ್ಯರಾದ ವಿನೊದಾ ಸುಂದರ ಆಚಾರ್ಯ ಬೆಳುವಾಯಿ, ಗಾಯತ್ರಿ ಗುರುರಾಜ್ ಕೆ.ಜೆ , ಶ್ಯಾಮಲಾ ಜಗದೀಶ್ ಸಿದ್ಧಕಟ್ಟೆ, ಜಯಶ್ರೀ ಗಣೇಶ್ ಕೆಮ್ಮಣ್ಣು, ಅಕ್ಷತಾ ಬೈಕಾಡಿ, ಸಂಧ್ಯಾ ಶೇಖರ ಆಚಾರ್ಯ ಮಂಗಳಾದೇವಿ ಮೊದಲಾದವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts