More

    video/ ಬೆಂಗಳೂರು-ಮೈಸೂರಿನ ಜನರೇ, ಈ ಗ್ರಾಮಕ್ಕೆ ನೀವೇನಾದ್ರೂ ಕಾಲಿಟ್ಟರೆ 5 ಸಾವಿರ ರೂ. ದಂಡ ಕಟ್ಟಬೇಕು!

    ಮಂಡ್ಯ: ಮೈಸೂರು ಮತ್ತು ಬೆಂಗಳೂರಿನ ಜನರು ಮಂಡ್ಯ ಜಿಲ್ಲೆಗೆ ಹೋಗುವ ಮುನ್ನ ಎಚ್ಚರ! ಅಪ್ಪಿತಪ್ಪಿ ನೀವೇನಾದರೂ ಹೋದರೆ ತಲಾ 5 ಸಾವಿರ ರೂ. ದಂಡ ಕಟ್ಟಬೇಕಾದೀತು.

    ಹೌದು, ಇಂತಹದ್ದೊಂದು ರೂಲ್ಸ್​ ಮಂಡ್ಯ ತಾಲೂಕಿನ ಬೇಲೂರು ಗ್ರಾಮದಲ್ಲಿ ಮಾಡಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಈ ಗ್ರಾಮಕ್ಕೆ ಹೊರಗಿನಿಂದ ಯಾರೂ ಬರುವಂತಿಲ್ಲ. ಬಂದ್ರೆ 5,000 ರೂ. ದಂಡ ಕಟ್ಟಬೇಕು ಎಂದು ಡಂಗೂರ ಸಾರಲಾಗಿದ್ದು, ಈ ವಿಡಿಯೋ ವೈರಲ್​ ಆಗಿದೆ. ಅಷ್ಟಕ್ಕೂ ಗ್ರಾಮಸ್ಥರೇ ಈ ರೂಲ್ಸ್​ ಮಾಡಿಕೊಂಡಿರೋದು ಯಾವ ಕಾರಣಕ್ಕೆ ಗೊತ್ತಾ? ಇದನ್ನೂ ಓದಿರಿ ಬಸ್​ ನಿಲ್ದಾಣದಲ್ಲೇ ಕರೊನಾ ಶಂಕಿತನ ಶವ ಬಿಟ್ಟು ಹೋದರು!

    “ಕೇಳ್ರಪ್ಪೋ ಕೇಳಿ, ಬೆಂಗಳೂರಿಂದ ನಮ್ಮೂರಿಗೆ ಬರಬೇಡಿ, ನಮ್ಮೂರಿಂದ ಬೆಂಗಳೂರು ಮೊದಲಾದ ಕಡೆಗೆ ಹೋಗಬೇಡಿ. ಬರುವವವರು, ಹೋಗುವವರಿಗೆ 5 ಸಾವಿರ ರೂ. ದಂಡ ಹಾಕ್ತಾರೆ ಕಣ್ರಪ್ಪೋ…’ ಎಂದು ಬೇಲೂರು ಗ್ರಾಮದಲ್ಲಿ ಡಂಗೂರ ಸಾರಲಾಗಿದೆ. 

    ಮಂಡ್ಯ ಜಿಲ್ಲೆಗೆ ಹೊರಗಿನವರದ್ದೇ ಭಯ. ಬೆಂಗಳೂರಿನಿಂದ ಬಂದೋರಲ್ಲಿ ಕರೊನಾ ಸೋಂಕು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಂಡ್ಯದ ಬೇಲೂರು ಗ್ರಾಮಕ್ಕೆ ಬೆಂಗಳೂರು-ಮೈಸೂರು ಜಿಲ್ಲೆಯಿಂದ ಯಾರೊಬ್ಬರೂ ಬರುವಂತಿಲ್ಲ. ಬಂದರೆ ದಂಡ ಕಟ್ಟಬೇಕು ಎಂದು ಡಂಗೂರ ಸಾರಲಾಗಿದೆ. ಅಲ್ಲದೆ, ಈ ಊರಿನ ಜನರೂ ಅನಗತ್ಯವಾಗಿ ಹೊರಗೆ ಹೋಗುವಂತಿಲ್ಲ ಎಂದೂ ಹೇಳಲಾಗಿದೆ. 

    ನಿನ್ನೆವರೆಗೂ(ಭಾನುವಾರ)  ಮಂಡ್ಯ ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ 518. ದಿನದಿಂದ ದಿನಕ್ಕೆ ಜಿಲ್ಲೆಯಲ್ಲೂ ಸೋಂಕಿತರ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಹಜವಾಗಿಯೇ ಬೇಲೂರು ಗ್ರಾಮದಲ್ಲೂ ಆತಂಕ ಆವರಿಸಿದ್ದು ಮುಂಜಾಗ್ರತಾ ಕ್ರಮದ ನಿಟ್ಟಿನಲ್ಲಿ ಇಂತಹ ರೂಲ್ಸ್​ ಮಾಡಿಕೊಳ್ಳಲಾಗಿದೆ. 

    ಈ ಡಂಗೂರ ಕೇಳಿದ್ರೆ ನಿಮ್ಮ ಜೇಬಿಗೆ ಕತ್ತರಿ ಬೀಳಲ್ಲ!

    ಈ ಡಂಗೂರ ಕೇಳಿದ್ರೆ ನಿಮ್ಮ ಜೇಬಿಗೆ ಕತ್ತರಿ ಬೀಳಲ್ಲ!ಮೈಸೂರು ಮತ್ತು ಬೆಂಗಳೂರಿನ ನಿವಾಸಿಗಳೇ, ನೀವು ಬೇರೆ ಊರಿಗೆ ಹೋಗುವ ಮುನ್ನ ಈ ವಿಡಿಯೋ ನೋಡಿ. ಈ ಗ್ರಾಮಕ್ಕೆ ಹೊರಗಿನವರ ಪ್ರವೇಶ ನಿಷಿದ್ಧ. ಅಪ್ಪಿತಪ್ಪಿ ಹೊರಗಿನವರು ಕಾಲಿಟ್ಟರೆ ತಲಾ 5 ಸಾವಿರ ರೂ. ದಂಡ ವಸೂಲಿ ಮಾಡ್ತಾರೆ. ಅಂದಹಾಗೆ ಇದು ಕರೊನಾ ಸೋಂಕು ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಮಂಡ್ಯ ಜಿಲ್ಲೆಯ ಗ್ರಾಮವೊಂದರಲ್ಲಿ ಮಾಡಿಕೊಂಡಿರುವ ರೂಲ್ಸ್​. #Dangoora #Corona #Mandya

    Posted by Vijayavani on Monday, July 6, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts