More

    ಈ ಬಾರಿ ವಸತಿ ಮಾರಾಟ ಶೇ.9ಕ್ಕೆ ಏರಿಕೆ?

    ಮುಂಬೈ: ಪ್ರಸಕ್ತ ಸಾಲಿನಲ್ಲಿ ವಸತಿ ಮಾರಾಟವು ಶೇ.8 ರಿಂದ 9ರಷ್ಟು ಬೆಳೆಯುತ್ತದೆ ಎಂದು ರೇಟಿಂಗ್ ಸಂಸ್ಥೆ ICRA ತಿಳಿಸಿದೆ. ಸಂಸ್ಥೆಯ ಪ್ರಕಾರ ಭಾರತದ ಅಗ್ರ ಏಳು ದೊಡ್ಡ ನಗರಗಳಲ್ಲಿ ಮುಂಬೈ ರಿಯಲ್ ಎಸ್ಟೇಟ್(ಎಂಎಂಆರ್) ಅತಿದೊಡ್ಡ ಮಾರುಕಟ್ಟೆಯಾಗಿದೆ, ಇಲ್ಲಿ 2023ರ ಆರ್ಥಿಕ ವರ್ಷದಲ್ಲಿ 25 ರಷ್ಟು ವಸತಿ ಗ್ರಾಹಕರ ಕೈಸೇರಿದ್ದು, ಈ ವರ್ಷ ಒಟ್ಟಾರೆ ವಹಿವಾಟಿನಲ್ಲಿ ಈ ಕ್ಷೇತ್ರ ಅಗ್ರಸ್ಥಾನ ಕಾಯ್ದುಕೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದೆ.

    ಇದನ್ನೂ ಓದಿ: ಭಾರತ ಇವಿಯಲ್ಲೂ ವಿಶ್ವಗುರು: 2030ಕ್ಕೆ ವಾರ್ಷಿಕ 1.6 ಕೋಟಿ ಎಲೆಕ್ಟ್ರಿಕ್ ವಾಹನ ಮಾರಾಟ

    ಆದರೆ ಇದು ಅಂತಿಮವಾಗಿ ಬಳಕೆದಾರರ ಬೇಡಿಕೆ ಮತ್ತು ಕೈಗೆಟುಕುವವ ದರದಲ್ಲಿ ಮನೆ ಅಥವಾ ನಿವೇಶನಗಳನ್ನು ಒದಗಿಸುವುದರ ಮೇಲೆ ಅವಲಂಬಿಸಿದೆ ಎಂದು ತಿಳಿಸಿದೆ.

    ಜೂನ್ 2023 ರ ವೇಳೆಗೆ 182 ಮಿಲಿಯನ್ ಚದರ ಅಡಿಗಳಷ್ಟು ವಸತಿ ಪ್ರದೇಶ ಮಾರಾಟವಾಗಲಿಲ್ಲ. ದೇಶದ ಅಗ್ರ ಏಳು ನಗರಗಳಲ್ಲಿ ಶೇ. 28 ರಷ್ಟು ಇದೇ ವೇಳೆಗೆ ಬಿಲ್ಡರ್​ಗಳ ಬಳಿಯೇ ಉಳಿಯುವಂತಾಯಿತು. ಮುಂಬೈನಲ್ಲಿನ ವಸತಿ ಮಾರಾಟದ ಬೆಲೆ 2020 ಮತ್ತು 2024 ರ ನಡುವೆ ಶೇ.4.3 ರಷ್ಟು ಹೆಚ್ಚಾಗಿದೆ, ಇದು ಈ ಅವಧಿಯಲ್ಲಿ ಇತರೆ ನಗರಗಳಲ್ಲಿ ಶೇ.6.6 ಏರಿಕೆಯಾಗಿದೆ. ಮುಂಬೈ ರಿಯಲ್​ ಎಸ್ಟೇಟ್​ ನಲ್ಲಿ 2024 ರಲ್ಲಿ ಸರಾಸರಿ ಮಾರಾಟದ ಬೆಲೆ ಶೇ 3ರಿಂದ 5ರಷ್ಟು ಹೆಚ್ಚಾಗಬಹುದು ಎಂದು ICRA ನಿರೀಕ್ಷಿಸಿದೆ.

    ICRA ದ ಸಹಾಯಕ ಉಪಾಧ್ಯಕ್ಷ ತುಷಾರ್ ಭರಾಂಬೆ ಪ್ರಕಾರ, 2023 ರ ಅವಧಿಯಲ್ಲಿ ಮುಂಬೈ ರಿಯಲ್​ ಎಸ್ಟೇಟ್​ನಲ್ಲಿ 151 ಮಿಲಿಯನ್ ಚದರ ಅಡಿ ಮಾರಾಟವಾಗಿದ್ದರೆ 2024ರಲ್ಲಿ ಈ ವೇಳೆಗಾಗಲೇ 141 ಮಿಲಿಯನ್ ಚದರ ಅಡಿ ಮಾರಾಟವಾಗಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ 0.9 ಹೆಚ್ಚು ಪ್ರದೇಶ ಮಾರಾಟವಾಗಬಹುದು ಎಂದು ಎನ್ನುತ್ತಾರೆ.

    ಇನ್ನು ಮಂಬೈ ರಿಯಲ್​ ಎಸ್ಟೇಟ್​ನಲ್ಲಿ 2020 ರಲ್ಲಿ ಶೇ.26 ರಷ್ಟಿದ್ದ ವಸತಿ ನಿರ್ಮಾಣವು 2024 ರಲ್ಲಿ ಶೇ.35 ಕ್ಕೆ ಏರಿಕೆ ಕಂಡಿದೆ. ಇದೇ ಅವಧಿಯಲ್ಲಿ ಐಷಾರಾಮಿ ವಸತಿ ನಿರ್ಮಾಣಕ್ಕೆ (ಘಟಕವೊಂದಕ್ಕೆ 3.5 ಕೋಟಿ ರೂ.ಗಿಂತ ಹೆಚ್ಚು) ವಿನಿಯೋಗಿಸುತ್ತಿದ್ದು, ಈ ವಲಯದಲ್ಲಿ ಶೇ.7 ರಿಂದ 10 ಕ್ಕೆ ಹೂಡಿಕೆಯಲ್ಲಿ ಏರಿಕೆ ಕಂಡಿದೆ. ಮಧ್ಯಮ ವರ್ಗದವರ ಕೈಗೆಟಕುವ ಮನೆಗಳ ನಿರ್ಮಾಣದಲ್ಲಿ ಆಸಕ್ತಿ ತೋರುವುದರಿಂದ ಖರೀದಿದಾರರನ್ನು ಹೆಚ್ಚಾಗಿ ಸೆಳೆಯಬಹುದಾಗಿದೆ. ಪ್ರಮುಖವಾಗಿ ಮುಂಬೈ ಮಾರುಕಟ್ಟೆಯಲ್ಲಿ ವಸತಿ ಮಾರಾಟವು ಪ್ರಧಾನವಾಗಿ ಮಧ್ಯಮ-ಆದಾಯದ ವಿಭಾಗದಲ್ಲಿ 1 ರಿಂದ 3.5 ಕೋಟಿ ರೂ. ನಡುವಿನ ಮನೆಗಳತ್ತ ವಾಲುತ್ತಿದೆ ಎಂದು ಭರಾಂಬೆ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts