More

    ಮೀಸಲು ಪರಿಷ್ಕರಣೆಗೆ ಸರ್ಕಾರದಿಂದ ಮೊದಲ ಹೆಜ್ಜೆ – ಸಂಪುಟ ಉಪಸಮಿತಿ ರಚನೆ

    ಬೆಂಗಳೂರು : ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲು ಪ್ರಮಾಣ ಹೆಚ್ಚಿಸಬೇಕೆಂಬ ಬಹುವರ್ಷಗಳ ಬೇಡಿಕೆಗೆ ಅನುಗುಣವಾಗಿ ಯಾವ ರೀತಿ ತೀರ್ಮಾನ ಕೈಗೊಳ್ಳಬೇಕೆಂದು ಶಿಫಾರಸು ಮಾಡಲು ಸಚಿವ ಸಂಪುಟ ಉಪ ಸಮಿತಿ ರಚನೆಯಾಗಿದೆ. ಬುಧವಾರ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ವಿಸ್ತೃ ಚರ್ಚೆ ನಡೆದಿದ್ದು, ಅಂತಿಮವಾಗಿ ಸಂಪುಟ ಉಪ ಸಮಿತಿ ರಚಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರ್ಧರಿಸಿದರು.

    ಈ ಸಮಿತಿಯಲ್ಲಿ ಯಾರ್ಯಾರಿರ ಬೇಕು ಎಂಬುದನ್ನು ಕೂಡ ಅವರೇ ನಿರ್ಧರಿಸಲಿದ್ದಾರೆ. ಇನ್ನೊಂದು ವಾರದಲ್ಲೇ ಸಮಿತಿ ರಚನೆಯಾಗಲಿದೆ. ಈ ಕುರಿತು ಮಾಹಿತಿ ನೀಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲು ಹೆಚ್ಚಳ ವಿಚಾರವಾಗಿ ಬಹಳ ವರ್ಷದಿಂದ ಬೇಡಿಕೆ ಇದೆ. ಬಹಳ ಹಿಂದೆ ಕೋಟಾ ನಿಗದಿಯಾಗಿದೆ. ಈಗ ಜನಸಂಖ್ಯೆ ಹೆಚ್ಚಾಗಿದೆ. ಪರಿಷ್ಕರಣೆ ಆಗಬೇಕೆಂದು ಒತ್ತಡ ಬಂದಿದ್ದರಿಂದ, ಈ ಬಗ್ಗೆ ಪ್ರಯತ್ನ ನಡೆದಿದೆ ಎಂದರು.

    ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಮಾತನಾಡಿ, ಶೇ.15 ಇರುವ ಪರಿಶಿಷ್ಟ ಜಾತಿ ಮೀಸಲನ್ನು ಶೇ.17ಕ್ಕೆ, ಶೇ.3 ಇರುವ ಪರಿಶಿಷ್ಟ ಪಂಗಡದ ಮೀಸಲನ್ನು ಶೇ.7ಕ್ಕೆ ಹೆಚ್ಚಿಸಬೇಕೆಂಬ ಬೇಡಿಕೆ ಇದೆ. ಇದೇ ವಿಚಾರದಲ್ಲಿ ನ್ಯಾ. ನಾಗಮೋಹನ ದಾಸ್ ವರದಿ ಕೊಟ್ಟಿದ್ದು, ಇದರ ಸಾಧಕ ಬಾಧಕ ರ್ಚಚಿಸಿ ತೀರ್ಮಾನ ಕೈಗೊಳ್ಳಲು ಉಪಸಮಿತಿ ರಚಿಸಲಾಗಿದೆ ಎಂದು ಹೇಳಿದರು.

    ಇದನ್ನೂ ಓದಿ: ವಿಜಯ ನಗರ ಜಿಲ್ಲಾ ರಚನೆ ಯಾರಿಗೆ ಲಾಭ- ನಷ್ಟ : ಮುಂದುವರಿದಿದೆ ರಾಜಕೀಯ ಲೆಕ್ಕಾಚಾರ

    ಮುಖ್ಯಾಂಶಗಳು
    1. ಜಲಸಂಪನ್ಮೂಲ ಇಲಾಖೆ ಅಧೀನದ ಕೃಷ್ಣ ಭಾಗ್ಯ ಜಲ ನಿಗಮಕ್ಕೆ 500 ಕೋಟಿ ರೂ., ಕರ್ನಾಟಕ ನೀರಾವರಿ ನಿಗಮಕ್ಕೆ 650 ಕೋಟಿ ರೂ., ಕಾವೇರಿ ನೀರಾವರಿ ನಿಗಮಕ್ಕೆ 250 ಕೋಟಿ ರೂ., ವಿಶ್ವೇಶ್ವರಯ್ಯ ಜಲ ನಿಗಮಕ್ಕೆ 250 ಕೋಟಿ ರೂ. ಸಾಲ ಪಡೆಯಲು ಸರ್ಕಾರ ಖಾತರಿ ನೀಡಿ ಆದೇಶ ಹೊರಡಿಸಿದ ಕ್ರಮಕ್ಕೆ ಅನುಮೋದನೆ.
    2. ಬೆಳಗಾವಿ ನಗರ ಸಭೆಯ 28.5 ಕೋಟಿ ರೂ. ಅಂದಾಜಿನ ವಿವಿಧ ಅಭಿವೃದ್ಧಿ ಕಾಮಗಾರಿಗೆ ಅನುಮೋದನೆ. ಆ ಹಣವನ್ನು ನಗರಸಭಯೇ ಭರಿಸಲಿದೆ. ಹೊಸಪೇಟೆಯಲ್ಲಿ 13.85 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ವಣಕ್ಕೆ ಒಪ್ಪಿಗೆ.
    3. ಲೋಕಸೇವಾ ಆಯೋಗದ ಅನುಮತಿ ಇಲ್ಲದೆ ಸರ್ಕಾರಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ನಿಯಮಾವಳಿ ತಿದ್ದುಪಡಿ ಮಾಡಲಾಗುತ್ತಿದೆ. ಈವರೆಗೆ ಲೋಕಸೇವಾ ಆಯೋಗದ ಅನುಮತಿ ಬೇಕಿತ್ತು. ಇನ್ನುಮುಂದೆ ಸರ್ಕಾರವೇ ನೇರ ಕ್ರಮ ಕೈಗೊಳ್ಳಲಿದೆ.
    4. ದಕ್ಷಿಣ ಕನ್ನಡ ಜಿಲ್ಲೆಯ ಮೆನ್ನಬೆಟ್ಟು, ಕಿನ್ನಿಗೋಳಿ ಹಾಗೂ ಕಟೀಲು ಗ್ರಾಮ ಪಂಚಾಯಿತಿಗಳನ್ನು ಒಟ್ಟುಗೂಡಿಸಿ ಕಟೀಲು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ತೀರ್ವನ. ಹರಿಹರ ನಗರಸಭೆ ವ್ಯಾಪ್ತಿಗೆ ಗುತ್ತೂರು ಮತ್ತು ಬಕ್ಕಾಪುರ ಗ್ರಾಮ ಪಂಚಾಯಿತಿಗಳ ಸೇರ್ಪಡೆ.

    ನೆರೆ ಪರಿಹಾರಕ್ಕೆ 1000 ಕೋಟಿ ರೂಪಾಯಿ
    ನೆರೆ ಪರಿಹಾರಕ್ಕೆ ಕೇಂದ್ರ ಸರ್ಕಾರ 577 ಕೋಟಿ ರೂ. ಬಿಡುಗಡೆ ಮಾಡಿದ್ದು, ರಾಜ್ಯ ಸರ್ಕಾರದಿಂದ 4 ಸಾವಿರ ಕೋಟಿವರೆಗೆ ಖರ್ಚು ಮಾಡಲು ನಿರ್ಧರಿಸಲಾಗಿದೆ. ತಕ್ಷಣಕ್ಕೆ ಪ್ರವಾಹಪೀಡಿತ ಜಿಲ್ಲೆಗಳಿಗೆ ಪರಿಹಾರ ಒದಗಿಸಲು 1000 ಕೋಟಿ ರೂ. ಬಿಡುಗಡೆ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.

    ಡಿಸೆಂಬರ್ 7ರಿಂದ 15ರ ತನಕ ವಿಧಾನಮಂಡಲದ ಚಳಿಗಾಲದ ಅಧಿವೇಶನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts