More

    ರಾಜ್ಯ ಸಚಿವ ಸಂಪುಟ ವಿಸ್ತರಣೆ ಯಾವಾಗ?; ದೆಹಲಿಯಲ್ಲಿನ ಮಹತ್ವದ ಸಭೆ ಮುಕ್ತಾಯ ಆಗುತ್ತಿದ್ದಂತೆ ಸಿಎಂ ಹೇಳಿದ್ದೇನು?

    ನವದೆಹಲಿ: ಕರ್ನಾಟಕದ ಸಚಿವ ಸಂಪುಟದ ವಿಸ್ತರಣೆ ವಿಚಾರವೂ ಸೇರಿದಂತೆ ಹಲವು ವಿಚಾರಗಳ ಕುರಿತು ಇಂದು ದೆಹಲಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ ಅವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದೆ. ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗಿಯಾಗಿದ್ದು, ಅಲ್ಲಿನ ಮಾತುಕತೆ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ.

    ಮೀಸಲಾತಿ, ಸಂಪುಟ ವಿಸ್ತರಣೆ ಇತ್ಯಾದಿ ಸೇರಿ ಹಲವು ವಿಚಾರಗಳ ಕುರಿತು ನಡ್ಡ ಅವರ ನೇತೃತ್ವದಲ್ಲಿ ಸಭೆ ನಡೆದಿದೆ. ಜನವರಿ-ಫೆಬ್ರವರಿಯಲ್ಲಿ ಪ್ರಧಾನಿ ಮೋದಿ, ಅಮಿತ್ ಷಾ, ರಾಜನಾಥ್ ಸಿಂಗ್ ಸೇರಿ ಹಲವರು ರಾಜ್ಯ ಪ್ರವಾಸ ಶುರು ಮಾಡಲಿದ್ದಾರೆ ಎಂದಿರುವ ಬೊಮ್ಮಾಯಿ, ಇಂದಿನ ಸಭೆಯಲ್ಲಿ ಮೀಸಲಾತಿ ಹೋರಾಟ ಬಗ್ಗೆ ಚರ್ಚೆ ಆಗಿದೆ, ಸಾಮಾಜಿಕ ನ್ಯಾಯ ಮಾನದಂಡವಾಗಿ ಇರಿಸಿಕೊಂಡು ಆ ಬಗ್ಗೆ ನಿರ್ಣಯಿಸಬೇಕು ಎಂಬ ನಿಲುವು ತಳೆಯಲಾಗಿದೆ. ಹಾಗೆಯೇ ಯಾರಿಗೆ ಮೀಸಲಾತಿ ಈಗ ಇದೆಯೋ ಅವರಿಗೆ ಅನ್ಯಾಯ ಆಗದಂತೆ ಕೂಡ ನಾವು ನೋಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

    ಕೆಲವರು ಪಕ್ಷಕ್ಕೆ ಸೇರುವ ಇರಾದೆ ಹೊಂದಿದ್ದಾರೆ ಎಂಬ ಸಂಗತಿಯನ್ನು ಸಿಎಂ ಹೇಳಿಕೊಂಡಿದ್ದು, ಸಂಪುಟ ವಿಸ್ತರಣೆ ಕುರಿತು ಇನ್ನಷ್ಟು ಮಾಹಿತಿ ಹಂಚಿಕೊಂಡರು. ಡಿ.30ರಂದು ಅಮಿತ್ ಷಾ ರಾಜ್ಯಕ್ಕೆ ಬರುತ್ತಿದ್ದಾರೆ, ಜ. 12ಕ್ಕೆ ಪ್ರಧಾನಿ ಮೋದಿ ಕರ್ನಾಟಕಕ್ಕೆ ಬರಲಿದ್ದಾರೆ. ರಾಜ್ಯ ಸರ್ಕಾರದ ಅಗತ್ಯಗಳ ಬಗ್ಗೆ ನಾನು ವಿವರಿಸಿದ್ದೇನೆ ಮತ್ತು ಮೊದಲ ಬಾರಿ ಈ ಬಗ್ಗೆ ವಿಸ್ತೃತ ಚರ್ಚೆ ಮಾಡಿದ್ದೇನೆ, ತಮ್ಮ ಅಭಿಪ್ರಾಯ ತಿಳಿಸುವುದಾಗಿ ವರಿಷ್ಠರು ಪ್ರತಿಕ್ರಿಯಿಸಿದ್ದಾರೆ, ಅಂತಿಮವಾಗಿ ಹೈಕಮಾಂಡ್ ಒಪ್ಪಬೇಕು, ನಂತರವೇ ವಿಸ್ತರಣೆ ಬಗ್ಗೆ ತೀರ್ಮಾನ ಆಗಲಿದೆ ಎಂದು ಸಿಎಂ ಹೇಳಿದ್ದಾರೆ. ಅಲ್ಲದೆ ಈ ಮೂಲಕ ಜ. 12ರ ಬಳಿಕವೇ ಸಂಪುಟ ವಿಸ್ತರಣೆ ಎಂಬ ಸಂಗತಿಯನ್ನೂ ಅವರು ಸೂಚ್ಯವಾಗಿ ತಿಳಿಸಿದಂತಿದೆ. ಎಲ್ಲವೂ ಅಂದುಕೊಂಡಂತೆಯೇ ಆದರೆ ಸಂಕ್ರಾಂತಿ ಸುಮಾರಿಗೆ ಸಂಪುಟ ವಿಸ್ತರಣೆ ಆಗಲಿದೆ ಎನ್ನಲಾಗಿದೆ.

    ನಾನು ಮೂರ್ಖನಾಗಲೂ ಸಿದ್ಧ ಎಂದ ಇಮೇಲ್ ಕಂಡುಹಿಡಿದಾತ!; ಮಸ್ಕ್​ ಹೊಸ ಟಾಸ್ಕ್​ಗೆ ಹೀಗೊಂದು ಟಾಂಗ್

    ಸರ್ವರೋಗಕ್ಕೂ ಇದೇ ಮದ್ದು!; ಚಿನ್ನಕ್ಕಿಂತಲೂ ದುಬಾರಿ ಈ ವಸ್ತು: ಇದಕ್ಕೆಂದೇ ಚೀನಾದವರು ಭಾರತದೊಳಕ್ಕೆ ನುಗ್ಗಿದ್ದಾರೆ ಹಲವು ಸಲ!

    ಮೈದಾನದಲ್ಲೇ ಕುಸಿದು ಬಿದ್ದು ಸಾವಿಗೀಡಾದ ಕ್ರಿಕೆಟಿಗ; ರನ್​ಗಾಗಿ ಓಡುತ್ತಿದ್ದಾಗ ಹೃದಯಾಘಾತ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts