More

    ನದಿಯಲ್ಲಿ ಈಜುವಾಗ ಅಪಾಯಕಾರಿ ಗುಹೆಯಲ್ಲಿ ಸಿಲುಕಿ ಬುದ್ಧಿವಂತಿಕೆಯಿಂದಲೇ ಬದುಕುಳಿದ ಬಾಲಕ!

    ಬೀಜಿಂಗ್​: ಪೂರ್ವ ಚೀನಾದಲ್ಲಿರುವ ನದಿಯೊಂದರಲ್ಲಿ ಈಜುವಾಗ ನೀರಿನ ಗುಹೆಯಲ್ಲಿ ಸಿಲುಕಿಕೊಂಡಿದ್ದ ಬಾಲಕನನ್ನು ರಕ್ಷಣಾಗಾರರು ರಕ್ಷಿಸಿದ್ದಾರೆ. ಗುಹೆಯ ಮೇಲಿನ ಸಣ್ಣ ಕಿಂಡಿಯಲ್ಲಿ ತನ್ನ ಕೈ ತೂರಿ ಅಲ್ಲಾಡಿಸುವ ಮೂಲಕ ರಕ್ಷಣಾಗಾರರ ಗಮನ ಸೆಳೆದ ಏಳು ವರ್ಷದ ಬಾಲಕ ಅನಾಹುತದಿಂದ ಬಚಾವ್​ ಆಗಿದ್ದಾನೆ.

    ಇದನ್ನೂ ಓದಿ: ನಟಿ ಸುಧಾರಾಣಿ ಅಣ್ಣನ ಮಗಳಿಗೆ ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಪರದಾಟ

    ಈ ಘಟನೆ ಜುಲೈ 22ರಂದು ಚೀನಾದ ಜಜಿಯಾಂಗ್​ ಪ್ರಾಂತ್ಯದ ಯೊಂಗ್ಜಿಯಾ ಕೌಂಟಿಯಲ್ಲಿ ನಡೆದಿದೆ. ಬಾಲಕನನ್ನು ಅವರ ತಾತ ಸ್ಥಳೀಯ ನದಿಗೆ ಕರೆದೊಯ್ದಿದ್ದಾಗ ಅವಘಡ ಸಂಭವಿಸಿದೆ ಎಂದು ಅಗ್ನಿಶಾಮಕ ಸಿಬ್ಬಂದಿ ಹೇಳಿದ್ದಾರೆ. ಇನ್ನು ಭೂಮಿಯನ್ನು ಅಗೆದು ಬಾಲಕನನ್ನು ರಕ್ಷಿಸಿರುವ ವಿಡಿಯೋ ಸಹ ವೈರಲ್​ ಆಗಿದೆ.

    ನಾನು ಮೊಮ್ಮಗನ ಕಡೆ ಗಮನ ಕೊಡದಿದ್ದಾಗ ಇದ್ದಕ್ಕಿದ್ದಂತೆ ಆತ ನೀರಿನಿಂದ ಕಾಣದಾದ. ಹತಾಶೆಯಿಂದ ಆತನಿಗಾಗಿ ಹುಡುಕಾಡಿದೆ. ಈ ವೇಳೆ ಸಣ್ಣ ಕೈಯೊಂದು ನೆಲದ ಮೇಲೆ ಅಲ್ಲಾಡುತ್ತಿರುವುದನ್ನು ನಾನು ಮತ್ತು ಗ್ರಾಮಸ್ಥರು ನೋಡಿದರು. ತಕ್ಷಣ ನಾವು ಅಗ್ನಿಶಾಮಕ ಸಿಬ್ಬಂದಿಗೆ ವಿಷಯ ಮುಟ್ಟಿಸಿದೆವು. ಅದಾದ 10 ನಿಮಿಷಗಳಲ್ಲಿ ಬಾಲಕನನ್ನು ಯಶಸ್ವಿಯಾಗಿ ರಕ್ಷಿಸಲಾಯಿತು ಎಂದು ಬಾಲಕನ ತಾತ ಹೇಳಿಕೊಂಡಿದ್ದಾರೆ.

    ಬಾಲಕ ಸಿಲುಕಿಕೊಂಡಿದ್ದು ನದಿ ನೀರನ್ನು ಭೂಗತ ಗುಹೆ ವ್ಯವಸ್ಥೆಗೆ ತಿರುಗಿಸುವ ಚಾನಲ್​ ಎಂದು ಹೇಳಲಾಗಿದ್ದು, ಈ ಸುರಂಗವನ್ನು ಮುಂದೆ ಅವಘಡಗಳು ಸಂಭವಿಸಿದಂತೆ ತಡೆಯಲು ಮುಚ್ಚಾಲಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ನದಿ ಹಾಗೂ ಜಲಾಶಯಗಳಲ್ಲಿ ಮಕ್ಕಳು ಈಜುವುದು ಅಪಾಯಕಾರಿಯಂತಲೂ ಎಚ್ಚರಿಸಿದ್ದಾರೆ. (ಏಜೆನ್ಸೀಸ್​)

    ಇದನ್ನೂ ಓದಿ: ಮನೆಮಂದಿಗೆ ನೆಗೆಟಿವ್‌- ಸಾಕುಬೆಕ್ಕಿಗೆ ಪಾಸಿಟಿವ್‌! ತಜ್ಞರಿಗೂ ಸವಾಲು

    VIDEO| ಅಪಘಾತವಾದ್ರೆ ಜನ ಸಾಯುವುದುಂಟು ಆದರೆ ಇಲ್ಲಿ ಅಪಘಾತವೇ ಯುವಕನ ಪ್ರಾಣ ಉಳಿಸಿದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts