More

    ಮನೆಮಂದಿಗೆ ನೆಗೆಟಿವ್‌- ಸಾಕುಬೆಕ್ಕಿಗೆ ಪಾಸಿಟಿವ್‌! ತಜ್ಞರಿಗೂ ಸವಾಲು

    ಲಂಡನ್: ಕರೊನಾ ವೈರಸ್‌ ಮನುಷ್ಯರಿಗೆ ಮಾತ್ರವಲ್ಲದೇ ಸಾಕುಪ್ರಾಣಿಗಳಾದ ಬೆಕ್ಕು, ನಾಯಿಗಳಿಗೆ ಹರಡಿರುವುದು ಇದಾಗಲೇ ಸುದ್ದಿಯಾಗಿದೆ. ಅಷ್ಟೇ ಅಲ್ಲದೇ ಹುಲಿಯಲ್ಲಿ ಕೂಡ ಸೋಂಕು ಪತ್ತೆಯಾಗಿರುವುದು ಸುದ್ದಿಯಾಗಿತ್ತು.

    ಸಾಕು ಪ್ರಾಣಿಗಳಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದ್ದ ಪ್ರಕರಣಗಳ ಪೈಕಿ, ಮನೆಯಲ್ಲಿ ಸೋಂಕು ಇರುವವರ ಸಂಪರ್ಕಕ್ಕೆ ಪ್ರಾಣಿಗಳು ಬಂದಿರುವುದು ಖಚಿತವಾಗಿತ್ತು. ಅದೇ ರೀತಿ ಹುಲಿಯ ಪ್ರಕರಣದಲ್ಲಿಯೂ ವರದಿಯಾಗಿತ್ತು.

    ಆದರೆ ಇದೀಗ ಅಚ್ಚರಿಯ ವಿಷಯವೊಂದು ಲಂಡನ್‌ನ ವೇಬ್ರಿಡ್ಜ್‌ನಲ್ಲಿ ನಡೆದಿದೆ. ಇಲ್ಲಿಯ ಬೆಕ್ಕು ಅನಾರೋಗ್ಯಪೀಡಿತವಾಗಿತ್ತು. ಅದನ್ನು ಪರೀಕ್ಷೆ ಮಾಡಿದಾಗ ಅದರಲ್ಲಿ ಕರೊನಾ ಪಾಸಿಟಿವ್‌ ಇರುವುದು ಕಂಡುಬಂದಿದೆ.

    ಇದನ್ನೂ ಓದಿ: ನಟಿ ಸುಧಾರಾಣಿ ಅಣ್ಣನ ಮಗಳಿಗೆ ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಪರದಾಟ

    ಈ ಹಿನ್ನೆಲೆಯಲ್ಲಿ ಮನೆಯಲ್ಲಿ ಇರುವ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ ಯಾರಲ್ಲಿಯೂ ಕರೊನಾ ಸೋಂಕು ಕಂಡುಬಂದಿಲ್ಲ. ಈ ಕುರಿತು ಮಾಹಿತಿ ನೀಡಿರುವ ಲಂಡನ್‌ನ ಮುಖ್ಯ ಪಶುಸಂಗೋಪನಾಧಿಕಾರಿ, ಕ್ರಿಸ್ಟನ್‌ ಮಿಡ್ಲೆಮಿಸ್‌, ಇದೊಂದು ಅಚ್ಚರಿಯ ವಿಷಯವಾಗಿದೆ. ಆ ಬೆಕ್ಕಿಗೆ ಹೇಗೆ ಸೋಂಕು ತಗುಲಿದೆ ಎನ್ನುವ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಯುತ್ತಿದೆ. ಎನಿಮಲ್‌ ಆ್ಯಂಡ್‌ ಪ್ಲ್ಯಾಂಟ್‌ ಏಜೆನ್ಸಿ ಪ್ರಯೋಗಾಲಯದಲ್ಲಿ ಜುಲೈ 22 ರಂದು ಬೆಕ್ಕನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಮನೆಯಲ್ಲಿ ಯಾರಿಗೂ ಸೋಂಕು ತಗುಲದೇ ಇರುವಾಗ ಬೆಕ್ಕಿಗೆ ತಗುಲಿರುವುದು ಆತಂಕ ಹಾಗೂ ಅಚ್ಚರಿಯ ವಿಷಯವಾದರೂ, ಬೆಕ್ಕಿನಿಂದ ಮನೆಯವರಿಗೆ ವೈರಸ್‌ ತಗುಲಿಲ್ಲ ಎನ್ನುವುದು ಸಮಾಧಾನಕರ ಸಂಗತಿಯಾಗಿದೆ ಎಂದಿದ್ದಾರೆ.

    ಏಕೆಂದರೆ ಈ ಮನೆಯವರು ಬೆಕ್ಕನ್ನು ಅತಿ ಮುದ್ದು ಮಾಡುತ್ತಿದ್ದಾರೆ. ತಮ್ಮ ಜತೆಯಲ್ಲಿಯೇ ಆಹಾರಕ್ಕೆ ಅದನ್ನು ಕುಳ್ಳರಿಸಿಕೊಳ್ಳುವುದು, ಮುದ್ದು ಕೊಡುವುದು ಮಾಡುತ್ತಿರುವ ಕಾರಣ, ಅವರಲ್ಲಿಯೂ ಸೋಂಕು ಹರಡುವ ಭಯ ಇತ್ತು ಎಂದಿದ್ದಾರೆ.

    ವಿಶ್ವ ಆರೋಗ್ಯ ಸಂಸ್ಥೆ ಕೂಡ ಈ ನಿಟ್ಟಿನಲ್ಲಿ ಸಂಶೋಧನೆ ಕೈಗೊಳ್ಳಲು ಶುರುಮಾಡಿದೆ. ಇದೊಂದು ರೀತಿಯಲ್ಲಿ ನಮಗೂ ಸವಾಲಾಗಿದೆ ಎಂದಿದೆ ಸಂಸ್ಥೆ. (ಏಜೆನ್ಸೀಸ್‌)

    ನಿಗಮ- ಮಂಡಳಿಗೆ ಶಾಸಕರ ನೇಮಕ: ಇಲ್ಲಿದೆ ಡಿಟೇಲ್ಸ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts