More

    ಸಂಶಯದಿಂದ ಭಾರಿ ಗಾತ್ರದ ಮೊಸಳೆ ಹಿಡಿದು ಹೊಟ್ಟೆ ಬಗೆದ ರಕ್ಷಣಾ ತಂಡಕ್ಕೆ ಕಾದಿತ್ತು ಶಾಕ್​!

    ಕೌಲಾಲಂಪುರ್: ಆರು ದಿನಗಳಿಂದ ನಾಪತ್ತೆಯಾಗಿದ್ದ ಹದಿನಾಲ್ಕು ವರ್ಷದ ಬಾಲಕನ ಅವಶೇಷಗಳು 14 ಅಡಿ ಉದ್ದದ ಬೃಹತ್​ ಮೊಸಳೆಯೊಂದರಲ್ಲಿ ಪತ್ತೆಯಾಗಿರುವ ಘಟನೆ ಮಲೇಶಿಯಾದಲ್ಲಿ ನಡೆದಿದೆ.

    ಸಂತ್ರಸ್ತ ಬಾಲಕನ ಹೆಸರನ್ನು ರಿಕ್ಕಿ ಗನ್ಯಾ ಎಂದು ಗುರುತಿಸಲಾಗಿದೆ. ಮಲೇಶಿಯಾದ ತಂಜುಂಗ್​ ಮನಿಶ್ ಪ್ರಾಂತ್ಯದ ರುಮಾಹ್​ ದಡತ್​ನಲ್ಲಿರುವ ನದಿಯೊಂದರ ಬಳಿ ಬಸವನ ಹುಳು ಹಿಡಿಯಲು ಬಾಲಕ ಹೋಗಿದ್ದ ವೇಳೆ ಮೊಸಳೆ ದಾಳಿ ಮಾಡಿ, ನೀರಿನೊಳಕ್ಕೆ ಎಳೆದೊಯ್ದು ಬಾಲಕನ ಕಾಲಿನವರೆಗೂ ಮೊಸಳೆ ತಿಂದು ಹಾಕಿದೆ.

    ಇದನ್ನೂ ಓದಿ: 3 ವಾರ ಕಷ್ಟಪಟ್ಟು ಒಬ್ಬಳೇ 35 ಅಡಿ ಉದ್ದದ ಸುರಂಗ ಕೊರೆದ ಮಹಿಳೆ: ಕಾರಣ ಕೇಳಿದ್ರೆ ಅಚ್ಚರಿ ಖಂಡಿತ!

    ಬಾಲಕನನ್ನು ಹುಡುಕಾಡುವಾಗ ನಾಪತ್ತೆಯಾದ ಜಟ್ಟಿ ಸ್ಥಳದಿಂದ ಸುಮಾರು ಎರಡು ಮೈಲಿ ದೂರದಲ್ಲಿ 14 ಅಡಿ ಉದ್ದದ ಉಪ್ಪುನೀರಿನ ಮೊಸಳೆಯು ರಕ್ಷಣಾ ತಂಡದ ಕೈಗೆ ಸಿಕ್ಕಿಬಿದ್ದಿದೆ. ಇದಕ್ಕೂ ಮುನ್ನ ಬಾಲಕ ಕಾಣೆಯಾಗಿರುವ ಬಗ್ಗೆ ಜುಲೈ 26ರಲ್ಲಿ ಕುಟುಂಬದ ದೂರು ನೀಡಿತ್ತು. ಮೊಸಳೆಯು ನೀರಿನೊಳಕ್ಕೆ ಬಾಲಕನನ್ನು ಎಳೆದೊಯ್ದಿದ್ದರ ಬಗ್ಗೆ ಬಾಲಕನ ಆಂಟಿ ಪೊಲೀಸರಿಗೆ ತಿಳಿಸಿದ್ದರು.

    ತಕ್ಷಣ ರಕ್ಷಣಾ ತಂಡದೊಂದಿಗೆ ಮೊಸಳೆ ಕಾರ್ಯಾಚರಣೆಗೆ ಇಳಿದ ಪೊಲೀಸ್​ ಅಧಿಕಾರಿಗಳು ಜುಲೈ 31ರಂದು ಮೊಸಳೆ ಪತ್ತೆಹಚ್ಚಿ, ಅದನ್ನು ಹಿಡಿದು ಬಾಲಕನ ಕುಟುಂಬದ ಎದುರಲ್ಲೇ ಮೊಸಳೆ ಹೊಟ್ಟೆಯನ್ನು ಕೂಯ್ದುದಿದ್ದರು. ಮೊಸಳೆಯ ಉದರದಲ್ಲಿ ಬಟ್ಟೆ ಹಾಗೂ ಮಾನವ ದೇಹದ ಅನೇಕ ಅಂಗಗಳು ಪತ್ತೆಯಾಗಿದ್ದವು. ವು ಬಾಲಕನದ್ದೇ ಎಂಬುದು ಮರಣೋತ್ತರ ವರದಿಯಲ್ಲಿ ಗೊತ್ತಾಗಿ, ದೇಹದ ಅಂಗಾಗಳನ್ನು ಬಾಲಕನ ಕುಟುಂಬಕ್ಕೆ ಒಪ್ಪಿಸಲಾಯಿತು. ದುಃಖದೊಂದಿಗೆ ಬಾಲಕನ ಅಂತ್ಯಕ್ರಿಯೆಯನ್ನು ಕುಟುಂಬದವರು ನಡೆಸಿದ್ದಾರೆ.

    ಇದನ್ನೂ ಓದಿ: ಎಂಥಾ ಅದೃಷ್ಟ: ರಾತ್ರೋರಾತ್ರಿ 25 ಕೋಟಿ ಒಡೆಯನಾಗಿದ್ದ ಗಣಿಕೆಲಸಗಾರನಿಗೆ ಮತ್ತೆ 15 ಕೋಟಿ ಬಂಪರ್​!

    ಅಂದಹಾಗೆ ಚಿಕನ್​ ನೀಡುವ ಮೂಲಕ ಮೊಸಳೆಯನ್ನು ರಕ್ಷಣಾ ತಂಡ ಸೆರೆಹಿಡಿದು ಬಾಲಕನ ದೇಹವನ್ನು ಪತ್ತೆಹಚ್ಚಿದ್ದರು. (ಏಜೆನ್ಸೀಸ್​)

    ಸುಶಾಂತ್​-ರಿಯಾ ಪ್ರಕರಣದ ಪರಿಣಾಮ; ಹೆಚ್ಚಾಯಿತು ಬಂಗಾಳಿ ಮಹಿಳೆಯರ ನಿಂದನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts