More

    ವಿವಾಹ ನೋಂದಣಿಯಂತೆ ಮತಾಂತರಕ್ಕೂ ನೋಂದಣಿ; ಒಮ್ಮೆ ಮತಾಂತರವಾದರೆ ಇವೆಲ್ಲ ಬದಲಾಗಲಿವೆ!?

    ಚಿಕ್ಕನಾಯಕನಹಳ್ಳಿ: ರಾಜ್ಯದಲ್ಲಿ ಈಗ ಮತಾಂತರ ನಿಷೇಧ ಕಾಯ್ದೆ ಭಾರಿ ಸದ್ದು ಮಾಡುತ್ತಿದ್ದು, ಇದೇ ಚಳಿಗಾಲದ ಅಧಿವೇಶನದಲ್ಲಿ ಬೆಳಗಾವಿಯಲ್ಲೇ ಮತಾಂತರ ನಿಷೇಧ ಮಸೂದೆ ಪ್ರಸ್ತಾಪವಾಗಲಿದೆ ಎಂಬ ಸುದ್ದಿಗಳೂ ಹರಿದಾಡುತ್ತಿವೆ. ಇನ್ನು ಮತಾಂತರ ನಿಷೇಧ ಕಾಯ್ದೆ ಬಂದರೆ ಹೇಗಿರಬಹುದು ಎನ್ನುವುದಕ್ಕೂ ಒಂದು ಅಂದಾಜು ಸಿಗಲಾರಂಭಿಸಿದ್ದು, ಆ ಬಗ್ಗೆ ಕಾನೂನು ಸಚಿವರೇ ಒಂದಷ್ಟು ಮಾಹಿತಿ ಬಿಟ್ಟುಕೊಟ್ಟಿದ್ದಾರೆ.

    ವಿವಾಹ ನೋಂದಣಿ ಮಾಡುವಂತೆ ಮತಾಂತರವನ್ನು ಕೂಡ ನೋಂದಣಿ ಮಾಡುವಂಥ ಪದ್ಧತಿಯನ್ನು ಮತಾಂತರ ನಿಷೇಧ ಕಾಯ್ದೆಯಲ್ಲಿ ತರುವ ಚಿಂತನೆ ಇದೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ. ತುಮಕೂರು ಚಿಕ್ಕನಾಯಕನಹಳ್ಳಿಯ ಜೆ.ಸಿ.ಪುರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು ಈ ವಿಷಯ ತಿಳಿಸಿದರು.

    ಇದನ್ನೂ ಓದಿ: ರಾವತ್ ಸಾವನ್ನು ಸಂಭ್ರಮಿಸಿ ಪೋಸ್ಟ್ ಮಾಡಿದ್ದವನ ಸೆರೆ; ಇನ್ನುಳಿದವರಿಗೂ ಬಂಧನ ಭೀತಿ..

    ಮದುವೆ ನೋಂದಣಿ ಪ್ರಕ್ರಿಯೆಯಲ್ಲಿ ಹೇಗೆ ನೋಟಿಸ್ ಬೋರ್ಡ್​ಗೆ ವಿವಾಹಿತರ ವಿವರ ಹಾಕುತ್ತೇವೆಯೋ ಹಾಗೆಯೇ ಮತಾಂತರಗೊಂಡವರ ವಿವರವನ್ನೂ ನೋಟಿಸ್​ ಬೋರ್ಡ್​​ಗೆ ಹಾಕಿ ಆಕ್ಷೇಪಣೆಗೆ ಸಮಯಾವಕಾಶ ಕೊಡಲಾಗುತ್ತದೆ. ಯಾವುದೇ ಆಕ್ಷೇಪಣೆ ಇಲ್ಲದಿದ್ದರೆ ಅಂಥವರ ಅರ್ಜಿ ಪುರಸ್ಕರಿಸಲಾಗುತ್ತದೆ. ಅದೇ ರೀತಿ ಮತಾಂತರ ಪ್ರಕ್ರಿಯೆ ಕೂಡ ಬರುವಂತೆ ಮಾಡಲಾಗುವುದು ಎಂದು ಪ್ರತಿಕ್ರಿಯಿಸಿದ್ದಾರೆ.

    ಇದನ್ನೂ ಓದಿ: ಅವಳ ಮನೆಗೆ ಅವನು ಬಂದಾಗ ಹಿಡ್ಕೊಂಡ ಜನರು; ಇಬ್ಬರನ್ನೂ ಕಂಬಕ್ಕೆ ಕಟ್ಟಿ ಮನ ಬಂದಂತೆ ಹಲ್ಲೆ: ಅನೈತಿಕ ಸಂಬಂಧ ಹೊಂದಿದ್ದಕ್ಕೆ ಘೋರ ಶಿಕ್ಷೆ?

    ಯಾರಿಗೂ ನೋವು ಆಗದ, ಅಡಚಣೆ ಆಗದ ರೀತಿಯಲ್ಲಿ ಕಾಯ್ದೆ ಇರಬೇಕು ಎಂದು ಯೋಚಿಸಿದ್ದೇನೆ. ಆ ನಿಟ್ಟಿನಲ್ಲಿ ಪರಾಮರ್ಶೆ ನಡೆದಿದೆ. ಬಲವಂತ ಹಾಗೂ ಆಮಿಷವೊಡ್ಡಿ ಮಾಡುವ ಮತಾಂತರ ಈಗಾಗಲೇ ನಿಷೇಧ ಇದ್ದು ಮತಾಂತರ ಮಾಡಿದವರಿಗೆ ಯಾವ ರೀತಿಯ ಶಿಕ್ಷೆ ಆಗಬೇಕು ಎನ್ನುವುದು ಚರ್ಚೆ ನಡೆಯಬೇಕಿದೆ. ಸ್ವಯಂಪ್ರೇರಿತ ಮತಾಂತರಕ್ಕೂ ರೂಪುರೇಷೆ ಸಿದ್ಧಗೊಳ್ಳುತ್ತಿದ್ದು, ಮತಾಂತರ ಆಗುವವನೂ ಅರ್ಜಿ ಸಲ್ಲಿಸುವ ವ್ಯವಸ್ಥೆ ಜಾರಿಯಾಗಲಿದೆ. ಬಲವಂತದ ಮತಾಂತರ ಅಲ್ಲ ಎಂದು ತಿಳಿದ ಮೇಲೆ ಜಿಲ್ಲಾಧಿಕಾರಿಗಳು ಮತಾಂತರದ ಅರ್ಜಿ ಪುರಸ್ಕರಿಸಬಹುದು ಎಂದು ಅವರು ತಿಳಿಸಿದ್ದಾರೆ.

    ಇದನ್ನೂ ಓದಿ: ಎಚ್ಚರ.. ಎಚ್ಚರ.. ಹೊರಗೆಲ್ಲೂ ಹೋಗದವರಿಗೂ, ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡವರಿಗೂ ಬಂದಿದೆ ಒಮಿಕ್ರಾನ್​!

    ಜತೆಗೆ, ಒಮ್ಮೆ ಮತಾಂತರಗೊಂಡ ವ್ಯಕ್ತಿ ಮೂಲ ಜಾತಿ,-ಧರ್ಮವನ್ನು ಕಳೆದುಕೊಳ್ಳುತ್ತಾನೆ. ಪರಿಶಿಷ್ಟ ಜಾತಿಯ ವ್ಯಕ್ತಿ ಕ್ರಿಶ್ಚಿಯನ್​ಗೆ ಮತಾಂತರಗೊಂಡರೆ ಆತ ಅಲ್ಪಸಂಖ್ಯಾತ ಎಂದಾಗುತ್ತಾನೆ‌. ಮತಾಂತರಗೊಂಡ ಬಳಿಕ ಆತನ ಮೂಲ ಜಾತಿ ಪ್ರಮಾಣಪತ್ರ ಬದಲಾಗುತ್ತದೆ ಎಂದು ಮಾಧುಸ್ವಾಮಿ ಸ್ಪಷ್ಟಪಡಿಸಿದರು.

    ಈತನ ಹುಟ್ಟೇ ಗಿನ್ನೆಸ್​ ವರ್ಲ್ಡ್​ ರೆಕಾರ್ಡ್​; ತಾಯಿ ಗರ್ಭದಿಂದ ಇವನಿಗಿಂತಲೂ ಬೇಗ ಬಂದು ಇನ್ನೂ ಬದುಕಿರುವವರೇ ಇಲ್ಲ!

    ಸೇನಾ ಮುಖ್ಯಸ್ಥರ ಸಾವಿಗೆ ಕೆಲವರು ಸಂಭ್ರಮಿಸಿದ್ದನ್ನು ನೋಡಿ ಬೇಸತ್ತ ಖ್ಯಾತ ನಿರ್ದೇಶಕ, ಇಸ್ಲಾಂ ಧರ್ಮ ಬಿಟ್ಟು ಹಿಂದು ಧರ್ಮಕ್ಕೆ ಸೇರ್ಪಡೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts