More

    ರಾವತ್ ಸಾವನ್ನು ಸಂಭ್ರಮಿಸಿ ಪೋಸ್ಟ್ ಮಾಡಿದ್ದವನ ಸೆರೆ; ಇನ್ನುಳಿದವರಿಗೂ ಬಂಧನ ಭೀತಿ..

    ಬೆಂಗಳೂರು: ಹೆಲಿಕಾಪ್ಟರ್​ ದುರಂತದಲ್ಲಿ ಸಾವಿಗೀಡಾದ ಸಿಡಿಎಸ್​ ಬಿಪಿನ್ ರಾವತ್ ಅವರ ಸಾವನ್ನು ಸಂಭ್ರಮಿಸಿ ದೇಶಾದ್ಯಂತ ಕೆಲವರು ಪೋಸ್ಟ್ ಮಾಡುವ ಮೂಲಕ ಸೇನಾ ಮುಖ್ಯಸ್ಥರ ಸಾವಿಗೆ ಅಗೌರವ ಸೂಚಿಸಿದ್ದರು. ಆ ಪೈಕಿ ದೇಶದಲ್ಲಿ ಈಗಾಗಲೇ ಇಬ್ಬರನ್ನು ಬಂಧಿಸಲಾಗಿದ್ದು, ಇದೀಗ ಕರ್ನಾಟಕದಲ್ಲೂ ಒಬ್ಬನ ಬಂಧನವಾಗಿದೆ.

    ರಾವತ್ ಅವರನ್ನು ಸಾವಿನ ಕುರಿತು ಆಕ್ಷೇಪಾರ್ಹ ಸ್ಟೇಟಸ್ ಪೋಸ್ಟ್ ಮಾಡಿದ್ದವರ ಪೈಕಿ ನಿನ್ನೆ ಮಧ್ಯಪ್ರದೇಶ ಮತ್ತು ಗುಜರಾತ್​ನಲ್ಲಿ ತಲಾ ಒಬ್ಬರನ್ನು ಬಂಧಿಸಲಾಗಿತ್ತು. ಹಾಗೆಯೇ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಕರ್ನಾಟಕದ ಟಿ.ಕೆ. ವಸಂತಕುಮಾರ್, ಸುಬ್ಬರಾವ್ ರವಿಕುಮಾರ್ ಅವರು ರಾವತ್ ವಿರುದ್ಧ ಹಾಗೂ ಶ್ರೀನಿವಾಸ ಕಾರ್ಕಳ ರಾವತ್ ಮತ್ತು ರಾಷ್ಟ್ರೀಯ ಭದ್ರತಾ ಸಲಹಾಗಾರ ಅಜಿತ್ ದೋವಲ್ ವಿರುದ್ಧ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದು, ಇವರೆಲ್ಲರ ವಿರುದ್ಧ ದೂರು ದಾಖಲಾಗಿತ್ತು.

    ಇದನ್ನೂ ಓದಿ: ಈತನ ಹುಟ್ಟೇ ಗಿನ್ನೆಸ್​ ವರ್ಲ್ಡ್​ ರೆಕಾರ್ಡ್​; ತಾಯಿ ಗರ್ಭದಿಂದ ಇವನಿಗಿಂತಲೂ ಬೇಗ ಬಂದು ಇನ್ನೂ ಬದುಕಿರುವವರೇ ಇಲ್ಲ!

    ಆ ಪೈಕಿ ಟಿ.ಕೆ. ವಸಂತಕುಮಾರ್ (40) ಎಂಬಾತನನ್ನು ಬೆಂಗಳೂರಿನ ವಿಧಾನಸೌಧ ಪೊಲೀಸರು ಬಂಧಿಸಿದ್ದು, ಎಫ್​ಐಆರ್ ದಾಖಲಿಸಿದ್ದಾರೆ. ಮೈಸೂರು ಮೂಲದ ವಸಂತಕುಮಾರ್ ಖಾಸಗಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ.

    ಇದನ್ನೂ ಓದಿ: ಜೀವಾವಧಿ ಶಿಕ್ಷೆಗೊಳಗಾಗಿದ್ದವ ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ಪರಾರಿ; 3 ವರ್ಷಗಳ ಕಾಲ ಸಿಗದೇ ಇರಲು ಹೀಗೆ ಮಾಡಿದ್ದ…

    ಈತ ‘ಬಿಪಿನ್ ರಾವತ್, ಮೋದಿ ಗುಲಾಮತನದ ಒಂದು ತಲೆಮಾರು’, ‘ಚೀನಾ ಭಾರತ ಗಡಿಯಲ್ಲಿ ಬಂದು ಹಳ್ಳಿಗಳನ್ನ‌ ನಿರ್ಮಿಸಿದಾಗ ಮೋದಿಯಂತೆ ಬುಡಬುಡಿಕೆ ಹೇಳಿಕೆ ಕೊಟ್ಟ ವ್ಯಕ್ತಿ’, ರಾವತ್ ಸಾವಿನಿಂದ ದೇಶವಂತೂ ಪಾರಾಗಿದೆ ಎಂದು ಫೇಸ್​ಬುಕ್​​ನಲ್ಲಿ ಪೋಸ್ಟ್​ ಮಾಡಿದ್ದ.

    ಇದನ್ನೂ ಓದಿ: ತಂದೆಯ ಕಣ್ಣೆದುರೇ ಸಾವಿಗೀಡಾದ ಮಗಳು; ಲಾರಿ-ಬೈಕ್​ ಅಪಘಾತ, ಚಾಲಕ ಪರಾರಿ..

    ಇದರ ವಿರುದ್ಧ ಕಮಿಷನರ್ ಕಚೇರಿಯಲ್ಲಿ ಸೋಷಿಯಲ್ ಮೀಡಿಯಾ ವಿಂಗ್​ನಲ್ಲಿ ಕರ್ತವ್ಯದಲ್ಲಿದ್ದ ಪಿಎಸ್​ಐ ವಿಧಾನಸೌಧ ಠಾಣೆಗೆ ದೂರು ನೀಡಿದ್ದರು. ವಿಧಾನಸೌಧ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ, ಸದ್ಯ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ.

    ಸೇನಾ ಮುಖ್ಯಸ್ಥರ ಸಾವಿಗೆ ಕೆಲವರು ಸಂಭ್ರಮಿಸಿದ್ದನ್ನು ನೋಡಿ ಬೇಸತ್ತ ಖ್ಯಾತ ನಿರ್ದೇಶಕ, ಇಸ್ಲಾಂ ಧರ್ಮ ಬಿಟ್ಟು ಹಿಂದು ಧರ್ಮಕ್ಕೆ ಸೇರ್ಪಡೆ..

    ಒಂದಲ್ಲ, ಎರಡಲ್ಲ, ಮೂರು ಮಕ್ಕಳಿಗೆ ಜನ್ಮವಿತ್ತ ಮಹಿಳೆ; ಈ ದಂಪತಿಗೆ ತ್ರಿವಳಿ ಹೆಣ್ಣುಮಕ್ಕಳು..

    ಕೋವಿಡ್ ಪರೀಕ್ಷೆಗೆ ಇಷ್ಟೇ ಹಣ ತೆಗೆದುಕೊಳ್ಳಬೇಕು; ಇದಕ್ಕಿಂತ ಜಾಸ್ತಿ ಪಡೆಯುವಂತಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts