More

    ಯುವ ಜನೋತ್ಸವಕ್ಕೆ ಯುವ ಜನೋತ್ಸಾಹ: ಮೋದಿ ಉದ್ಘಾಟಿಸಲಿರುವ ಕಾರ್ಯಕ್ರಮಕ್ಕೆ ಭಾರಿ ನೋಂದಣಿ

    ಧಾರವಾಡ: ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ಹುಬ್ಬಳ್ಳಿ-ಧಾರವಾಡಲ್ಲಿ ಸರ್ಕಾರಿಂದ ಹಮ್ಮಿಕೊಳ್ಳಲಾಗಿರುವ ಯುವ ಜನೋತ್ಸವ ಕಾರ್ಯಕ್ರಮಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಲಿದ್ದು, ಈಗಾಗಲೇ ಯುವ ಜನೋತ್ಸಾಹ ಕಂಡುಬಂದಿದೆ. ಅಂದರೆ ಪ್ರಧಾನಿಯಿಂದ ಉದ್ಘಾಟನೆ ಆಗಲಿರುವ ಈ ಯುವ ಜನೋತ್ಸವಕ್ಕೆ ಈಗಾಗಲೇ ಭಾರಿ ನೋಂದಣಿ ಆಗಿದೆ.

    26ನೇ ರಾಷ್ಟ್ರೀಯ ಯುವ ಜನೋತ್ಸವದ ಉದ್ಘಾಟನೆ ಸಲುವಾಗಿ ಪ್ರಧಾನಿ ಮೋದಿ ನಾಳೆ ಹುಬ್ಬಳ್ಳಿಗೆ ಆಗಮಿಸಲಿದ್ದು, ಈ ಕಾರ್ಯಕ್ರಮಕ್ಕೆ ನಿರೀಕ್ಷೆಗೂ‌ ಮೀರಿ ನೋಂದಣಿ ನಡೆದಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಯುವ ಸಮುದಾಯಕ್ಕೆ ನೋಂದಣಿ ಕಡ್ಡಾಯ ಮಾಡಿದ್ದರಿಂದ ಇಲ್ಲಿಯವರೆಗೆ 50 ಸಾವಿರ ಯುವಕ/ಯುವತಿಯರ ನೋಂದಣಿ ಆಗಿದೆ.

    ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಈ ಮೈದಾನದಲ್ಲಿ ಅವಕಾಶ ಇರುವುದೇ 25 ಸಾವಿರ ಮಂದಿಗೆ. ಆದರೆ ಈಗಾಗಲೇ ನೋಂದಣಿಯೇ ಅದರ ದುಪ್ಪಟ್ಟಿನಷ್ಟು ಆಗಿದೆ. ಹೀಗಾಗಿ ಮೊದಲು ಬಂದವರಿಗೆ ಮಾತ್ರ ಆಸನ ಸಿಗಲಿದ್ದು, ಉಳಿದವರಿಗೆ ಅಕ್ಕಪಕ್ಕದ ಮೈದಾನದಲ್ಲಿ ಎಲ್‌ಇಡಿ ಸ್ಕ್ರೀನ್ ಅಳವಡಿಸಲು ನಿರ್ಧರಿಸಲಾಗಿದೆ ಎಂದು ಧಾರವಾಡ‌ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದ್ದಾರೆ.

    ಎಲ್ಲರಿಗೂ ಮಧ್ಯಾಹ್ನ 2 ಗಂಟೆಯೊಳಗೆ ಬರಲು ಹೇಳಿದ್ದೇವೆ. ಮೊದಲು ಬರುವ 25 ಸಾವಿರ ಜನರಿಗೆ ಆದ್ಯತೆ ಇರುತ್ತದೆ. ಪ್ರಧಾನಿ ಕಾರ್ಯಕ್ರಮಕ್ಕೆ ಅದರದೇ ಆದ ಭದ್ರತೆ ಇರುತ್ತದೆ. ಹೀಗಾಗಿ ನಿಗದಿಗಿಂತ ಹೆಚ್ಚು ‌ಜನರಿಗೆ ಅವಕಾಶ ಇರುವುದಿಲ್ಲ. ಜಿಮ್ಖಾನಾ ಸೇರಿ ಬೇರೆ ಬೇರೆ ಮೈದಾನಗಳಲ್ಲಿ ಎಲ್‌ಇಡಿ ಸ್ಕ್ರೀನ್ ಅಳವಡಿಸಲಾಗುವುದು, ಅಲ್ಲಿ ಕಾರ್ಯಕ್ರಮದ ನೇರಪ್ರಸಾರ ನೋಡಬಹುದು ಎಂದು ಅವರು ತಿಳಿಸಿದ್ದಾರೆ.

    6 ತಿಂಗಳ ಕಾಲ ಒಂದೊಂದಾಗಿ ಕಾಣೆಯಾಗಿದ್ದವು ಮನೆಯೊಳಗಿದ್ದ ಆಭರಣಗಳು!; ಕೊನೆಗೂ ಬಯಲಾಯ್ತು ಅಸಲಿಯತ್ತು

    ‘ನಾನು ಯೂಟ್ಯೂಬರ್ ಆಗಿದ್ದು ಯಾಕೆ?’ ಅಂತ ಖುದ್ದು ಡಾ.ಬ್ರೋ ಅವರೇ ಹಂಚಿಕೊಂಡಿದ್ದಾರೆ ಇಲ್ಲಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts