More

    ಬೆತ್ತಲೆ ಫೋಟೋಗಾಗಿ ಎಡಕ್ಕೆ ಸ್ವೈಪ್​ ಮಾಡಿ ಎಂದ ರೆಜಿನಾ: ಫ್ಯಾನ್ಸ್​ಗೆ ಸೂರ್ಯಕಾಂತಿ ಬೆಡಗಿಯ ಶಾಕ್​!

    ಹೈದರಾಬಾದ್​: ನಟ ಚೇತನ್​ ಅಭಿನಯ ಸೂರ್ಯಕಾಂತಿ ಚಿತ್ರದಲ್ಲಿ ನಟಿಸಿ ಕನ್ನಡಿಗರಿಗೂ ಪರಿಚಿತವಾಗಿರುವ ಕಾಲಿವುಡ್​ ಬೆಡಗಿ ರೆಜಿನಾ ಕ್ಯಾಸ್ಸಂದ್ರ ಹೆಚ್ಚಾಗಿ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಡಿ. 13ರಂದು 30ನೇ ಹುಟ್ಟುಹಬ್ಬ ಆಚರಿಸಿಕೊಂಡ ರಜಿನಾಗೆ ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ. ಆದರೆ, ಅಷ್ಟೇ ನಿರಾಸೆಯನ್ನು ಮಾಡಿದ್ದಾರೆ. ಅದಕ್ಕೆ ಕಾರಣ ಅವರು ಮಾಡಿದ ಒಂದು ಇನ್​ಸ್ಟಾಗ್ರಾಂ ಪೋಸ್ಟ್​.

    ಹುಟ್ಟುಹಬ್ಬ ಆಚರಣೆಯ ಬಳಿಕ ರಜಿನಾ ಒಂದು ಪೋಸ್ಟ್​ ಮಾಡಿದ್ದರು. ಸುಂದರ ತಾಣವೊಂದಲ್ಲಿ ತುಂಡುಡುಗೆ ಧರಿಸಿದ ಫೋಟೋವನ್ನು ಹರಿಬಿಟ್ಟು, ಬರ್ತಡೇಗೆ ಶುಭಕೋರಿದ ಎಲ್ಲರಿಗೂ ಧನ್ಯವಾದ ಹೇಳಿದ್ದರು. ಅಲ್ಲದೆ, ಫೋಟೋದಲ್ಲಿ ಟ್ವಿಸ್ಟ್​ ಒಂದನ್ನು ನೀಡಿದ್ದ ರೆಜಿನಾ ನನ್ನ ಬೆತ್ತಲೆ ಫೋಟೋಗಳನ್ನು ನೋಡಲು ಎಡಕ್ಕೆ ಸ್ವೈಪ್​ ಮಾಡಿ ಎಂದಿದ್ದರು.

    ಇದನ್ನೂ ಓದಿ: ಕಾರ್ ಕಳಿಸ್ತೀನಿ ಪ್ಲೀಸ್ ಬನ್ನಿ: ಮುಳ್ಳಿನಬೇಲಿ ಹಾಕಿದ್ದವರಿಂದಲೇ ಸ್ವಾಗತ | ಮತಕ್ಕಾಗಿ ಡಿಮಾಂಡ್

    ಲಡ್ಡು ಬಂದು ಬಾಯಿಗೆ ಬಿತ್ತು ಎಂಬಂತೆ ಅನೇಕ ನೆಟ್ಟಿಗರು ರೆಜಿನಾ ಹೇಳಿದಂತೆ ಎಡಕ್ಕೆ ಸ್ವೈಪ್​ ಮಾಡಿ ನೋಡಿದ್ದಾರೆ. ಅವರು ಹೇಳಿದಂತೆ ಬೆತ್ತಲೆ ಫೋಟೋಗಳನ್ನು ಪೋಸ್ಟ್​ ಮಾಡಿದ್ದರು. ಆದರೆ, ರೆಜಿನಾ ಕೊಟ್ಟ ಟ್ವಿಸ್ಟ್​ ಎಂಥದ್ದು ಅಂದರೆ ಆ ಬೆತ್ತಲೆ ಫೋಟೋಗಳು ತಾವು ಮಗುವಾಗಿದ್ದಾಗ ತೆಗಿಸಿದಂತದ್ದು, ಬಾತ್​ಟಬ್​ನಲ್ಲಿ ಬೆತ್ತಲೆ ಕುಳಿತು ಸ್ನಾನ ಮಾಡುವ ಫೋಟೋಗಳನ್ನು ಹರಿಬಿಟ್ಟು ರೆಜಿನಾ ಅಭಿಮಾನಿಗಳಿಗೆ ಶಾಕ್​ ನೀಡಿದ್ದಾರೆ.

     

    View this post on Instagram

     

    A post shared by Regina Cassandra (@reginaacassandraa)

    ಇದರ ಬೆನ್ನಲ್ಲೇ ರೆಜಿನಾ ನಮಗೆ ಮೋಸ ಮಾಡಿದರು ಎಂದು ಅನೇಕ ಮೀಮ್ಸ್​ಗಳ ಸಹ ಹರಿದಾಡಿದ್ದು, ಅವುಗಳನ್ನು ರೆಜಿನಾ ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಬೆತ್ತಲೆ ಫೋಟೋ ಎಂದು ಬಹಳ ಆಸೆ ಇಟ್ಟುಕೊಂಡಿದ್ದ ಅಭಿಮಾನಿಗಳ ಪಾಲಿಗಂತೂ ನಿರಾಸೆಯಾಗಿದೆ. ಸಿನಿಮಾ ವಿಚಾರಕ್ಕೆ ಬರುವುದಾದರೆ ತಮಿಳು ಚಿತ್ರರಂಗದಲ್ಲಿ ಬಿಜಿಯಾಗಿದ್ದಾರೆ. (ಏಜೆನ್ಸೀಸ್​)

    ಇದನ್ನೂ ಓದಿ: ಸೆಕ್ಸ್​, ಬೆತ್ತಲೆ ಫೋಟೋ ಕದ್ದುಮುಚ್ಚಿ ನೋಡ್ತೀರಿ, ನನ್ನ ದೇಹಕ್ಕೆ ವಿವಾದ ಯಾಕೆ ಎಂದ ಮಿಲಿಂದ್​

    ಬೆತ್ತಲೆ ಫೋಟೋಗಾಗಿ ಎಡಕ್ಕೆ ಸ್ವೈಪ್​ ಮಾಡಿ ಎಂದ ರೆಜಿನಾ: ಫ್ಯಾನ್ಸ್​ಗೆ ಸೂರ್ಯಕಾಂತಿ ಬೆಡಗಿಯ ಶಾಕ್​!

    ಶಾಪಿಂಗ್​ ಮಾಲ್​ಗೆ ಹೋದ ಮಲಯಾಳಂ ನಟಿಗೆ ಲೈಂಗಿಕ ಕಿರುಕುಳ: ಕರಾಳ ಘಟನೆ ಬಿಚ್ಚಿಟ್ಟ ನಟಿ!

    ಮದುವೆಯಾಗಿ 2 ತಿಂಗಳಲ್ಲೇ ಹೊಟ್ಟೆಹಿಡಿದುಕೊಂಡು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ ನೇಹಾ

    ಪೊಲೀಸ್​ ದಂಪತಿ ಆತ್ಮಹತ್ಯೆಗೆ ಶರಣು: ಡಿವೈಎಸ್ಪಿ ಪ್ರಕರಣ ಬೆನ್ನಲ್ಲೇ ಪೊಲೀಸ್​ ಇಲಾಖೆಗೆ ಮತ್ತೊಂದು ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts