More

    ಹೈಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ನಿರಾಶ್ರಿತರ ಲೆಕ್ಕ ಹಾಕಲಿದೆ ಬಿಬಿಎಂಪಿ: ಸಹಾಯಕ ಕಂದಾಯ ಅಧಿಕಾರಿಗಳಿಗೆ ಹೊಣೆ

    ಬೆಂಗಳೂರು: ಲಾಕ್​ಡೌನ್​ನಿಂದ ಕಾರ್ವಿುಕರ ಜತೆಗೆ ಅತಿಹೆಚ್ಚು ಸಮಸ್ಯೆಗೊಳಗಾದ ವಸತಿರಹಿತರನ್ನು ಪತ್ತೆ ಮಾಡಿ ಲೆಕ್ಕಹಾಕಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ.

    ಕರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್​ಡೌನ್ ಮಾಡ ಲಾಗಿದೆ. ಹೀಗಾಗಿ ಕಾರ್ವಿುಕರು ಸೇರಿ ಹಲವರು ಸಮಸ್ಯೆಗೆ ಸಿಲುಕಿದ್ದಾರೆ. ಅದರಲ್ಲೂ ವಸತಿ ವ್ಯವಸ್ಥೆಯಿಲ್ಲದೆ, ಭಿಕ್ಷಾಟನೆ ಮಾಡಿಕೊಂಡು ಜೀವನ ಸಾಗಿಸುತ್ತಿರುವವರು ಸಂಕಷ್ಟಕ್ಕೆ ಎದುರಾಗಿದ್ದಾರೆ. ಹೀಗೆ ಸಂಕಷ್ಟದಲ್ಲಿರುವ ನಿರಾಶ್ರಿತರನ್ನು ಲೆಕ್ಕ ಹಾಕುವಂತೆ ಹೈಕೋರ್ಟ್ ಬಿಬಿಎಂಪಿಗೆ ಸೂಚಿಸಿದೆ. ಅದರಂತೆ ಕಾರ್ಯಪ್ರವೃತ್ತರಾಗಿರುವ ಬಿಬಿಎಂಪಿ ನಗರಾದ್ಯಂತ ಇರುವ ನಿರಾಶ್ರಿತರ ಲೆಕ್ಕಕ್ಕೆ ಮುಂದಾಗಿದ್ದು, ಅದರ ಹೊಣೆಯನ್ನು ಸಹಾಯಕ ಕಂದಾಯ ಅಧಿಕಾರಿಗಳಿಗೆ ನೀಡಿದ್ದಾರೆ.

    17 ಸಾವಿರ ನಿರಾಶ್ರಿತರು: ಬಿಬಿಎಂಪಿಯಲ್ಲಿರುವ ಮಾಹಿತಿಯಂತೆ ಬೆಂಗಳೂರಿನಲ್ಲಿ 3 ಸಾವಿರದಿಂದ 3,500 ಜನರು ವಸತಿ ರಹಿತರಾಗಿದ್ದಾರೆ. ಆದರೆ, ಕೆಲ ವರ್ಷಗಳ ಹಿಂದೆ ಖಾಸಗಿ ಸಂಸ್ಥೆಯೊಂದು (ಎನ್​ಜಿಒ) ಮಾಡಿರುವ ಸಮೀಕ್ಷೆ ಪ್ರಕಾರ ಬೆಂಗಳೂರಿನಲ್ಲಿ 17 ಸಾವಿರ ನಿರಾಶ್ರಿತರಿದ್ದಾರೆ.

    ಸೂಕ್ತ ವ್ಯವಸ್ಥೆಗೆ ಕ್ರಮ: ಲಾಕ್​ಡೌನ್ ನಂತರದಿಂದ ಬೆಂಗಳೂರಿನಲ್ಲಿ ನಿರಾಶ್ರಿತರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅಲ್ಲದೆ, ಈ ಹಿಂದೆ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿದ್ದ ನಿರಾಶ್ರಿತರು ಈಗ ಕಾಣಸಿಗುತ್ತಿಲ್ಲ. ಅಂತಹವರನ್ನು ಲೆಕ್ಕ ಹಾಕುವ ಹೊಣೆಗಾರಿಕೆ ಬಿಬಿಎಂಪಿ ಮೇಲಿದೆ. ಬಿಬಿಎಂಪಿಯಲ್ಲಿನ ಎಆರ್​ಒಗಳು ತಮ್ಮ ವ್ಯಾಪ್ತಿಯಲ್ಲಿರುವ ನಿರಾಶ್ರಿತರ ಲೆಕ್ಕ ಹಾಕಬೇಕಿದೆ. ಈ ಪ್ರಕ್ರಿಯೆ ನಂತರ ಅವರಿಗೆ ಯಾವ ರೀತಿ ವ್ಯವಸ್ಥೆ ಮಾಡಬೇಕು ಎಂಬುದರ ಬಗ್ಗೆ ಹಿರಿಯ ಅಧಿಕಾರಿಗಳು ರ್ಚಚಿಸಿ ಕ್ರಮ ಕೈಗೊಳ್ಳಲಿದ್ದಾರೆ.

    ಕಾರ್ವಿುಕರ ಎಣಿಕೆಗೂ ಕ್ರಮ: ನಿರಾಶ್ರಿತರ ಜತೆಗೆ ಬೆಂಗಳೂರಿನಲ್ಲಿನ ಕಾರ್ವಿುಕರ ಲೆಕ್ಕಕ್ಕೂ ಬಿಬಿಎಂಪಿ ಮುಂದಾಗಿದೆ. ರಸ್ತೆ, ಮೆಟ್ರೋ ಕಾಮಗಾರಿ ಸೇರಿ ಎಲ್ಲ ಬಗೆಯ ಕಾಮಗಾರಿಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ವಿುಕರನ್ನು ಪತ್ತೆ ಮಾಡಲಾಗುತ್ತಿದೆ. ಅವರು ಎಲ್ಲಿ ವಾಸಿಸುತ್ತಿದ್ದಾರೆ, ಊಟ ಸಿಗುತ್ತಿದೆಯೇ, ಗುತ್ತಿಗೆದಾರರು ಅವರಿಗೆ ಅಗತ್ಯ ವ್ಯವಸ್ಥೆ ಮಾಡಿದ್ದಾರೆಯೇ ಎಂಬಂತಹ ವಿವರವನ್ನು ಕಲೆ ಹಾಕಲಾಗುತ್ತಿದೆ.

    10 ಲಕ್ಷಕ್ಕೂ ಅಧಿಕ ಕಾರ್ವಿುಕರು: ಬೆಂಗಳೂರಿನಾದ್ಯಂತ ನಡೆಯುವ ವಿವಿಧ ಕಾಮಗಾರಿಗಳಲ್ಲಿ ಕೂಲಿ ಮಾಡಲು 20 ಲಕ್ಷಕ್ಕೂ ಹೆಚ್ಚಿನ ಕಾರ್ವಿುಕರಿದ್ದಾರೆ. ಅದರಲ್ಲಿ ಕಟ್ಟಡ ಕಾರ್ವಿುಕರೇ ಹೆಚ್ಚು. ನಂತರದ ಸ್ಥಾನದಲ್ಲಿ ಗಾರ್ವೆಂಟ್ಸ್ ಕಾರ್ವಿುಕರು ಇದ್ದಾರೆ. ಈ ಪೈಕಿ ಶೇ.40ಕ್ಕೂ ಹೆಚ್ಚಿನ ಕಾರ್ವಿುಕರು ಲಾಕ್​ಡೌನ್ ಘೋಷಣೆಯಾದ ಕೂಡಲೆ ತಮ್ಮ ಊರಿಗೆ ತೆರಳಿದ್ದಾರೆ. ಈಗಿರುವ ಕಾರ್ವಿುಕರಿಗೆ ಆದಾಯವಿಲ್ಲದೆ, ಸಮಸ್ಯೆ ಅನುಭವಿಸುವಂತಾಗಿದೆ.

    ಮೂಡಲಪಾಳ್ಯ ಹೆರಿಗೆ ಆಸ್ಪತ್ರೆ ಸೀಲ್​ಡೌನ್

    VIDEO: ನಿಯಮ ಉಲ್ಲಂಘಕರ ಕ್ವಾರಂಟೈನ್ ಹೋಮ್​ ಯಾವುದೆಂದು ತಿಳಿದರೆ ಬೆಚ್ಚಿ ಬೀಳೋದು ಗ್ಯಾರೆಂಟಿ !: ಸ್ಥಳೀಯ ರಾಜಕಾರಣಿಯೊಬ್ಬರ ಕ್ರಮ ಇದೀಗ ಜಗದ ಮನೆಮಾತು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts