More

    SRH ದಾಖಲೆಗೂ RCB ಆಟಗಾರರೇ ಬರಬೇಕಾಯ್ತು! ಬೆಂಗ್ಳೂರು ತಂಡಕ್ಕೆ ಅಂಟಿದ ಈ ಕಳಂಕಕ್ಕೆ ಕೊನೆ ಯಾವಾಗ?

    ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್‌ನಲ್ಲೇ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡವೆಂಬ ಹೆಗ್ಗಳಿಕೆ ಹೊಂದಿದೆ. ಐಪಿಎಲ್​ ಆರಂಭದಿಂದಲೂ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಆರ್​ಸಿಬಿ, ಇಲ್ಲಿಯವರೆಗೆ ಒಂದು ಬಾರಿಯು ಕಪ್​ ಗೆಲ್ಲಲು ಸಾಧ್ಯವಾಗಿಲ್ಲ. ವಿರಾಟ್ ಕೊಹ್ಲಿ, ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್, ಡೇಲ್ ಸ್ಟೇನ್ ಮತ್ತು ಮಿಚೆಲ್ ಸ್ಟಾರ್ಕ್ ಅವರಂತಹ ಆಟಗಾರರಿದ್ರೂ ತಂಡಕ್ಕೆ ಟ್ರೋಫಿ ಗೆಲ್ಲಿಸಿ ಕೊಡಲು ಸಾಧ್ಯವಾಗಲಿಲ್ಲ. ಆದರೆ, ಆರ್​ಸಿಬಿ ತಂಡಕ್ಕೆ ಒಂದು ಕಳಂಕವಿದೆ. ಅದೇನೆಂದರೆ, ಆರ್​ಸಿಬಿ ತಂಡವನ್ನು ತೊರೆದರೆ ಆ ಆಟಗಾರರು ಬೇರೆ ತಂಡದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದು ಅನೇಕ ಬಾರಿ ಸಾಬೀತು ಕೂಡ ಆಗಿದೆ. ಇದಕ್ಕೆ ತಾಜಾ ನಿದರ್ಶನ ಎಸ್​ಆರ್​ಎಚ್​ vs ಮುಂಬೈ ಪಂದ್ಯ.

    ಪ್ರಸ್ತುತ ಲಖನೌ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಕೂಡ ಒಮ್ಮೆ ಆರ್‌ಸಿಬಿ ಪರ ಆಡಿದ್ದರು. ಕಳೆದ ಎರಡು ಋತುಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ರನ್ ಗಳಿಸುತ್ತಿರುವ ಶಿವಂ ದುಬೆ ಕೂಡ ಆರ್​ಸಿಬಿ ಆಟಗಾರ. ಆದರೆ, ಪ್ರಸಕ್ತ ಐಪಿಎಲ್ ಸೀಸನ್​ನಲ್ಲಿ ಸನ್ ರೈಸರ್ಸ್ ತಂಡದಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರುವ ಈ ಇಬ್ಬರು ಆಟಗಾರರು ಈ ಹಿಂದೆ ಆರ್​ಸಿಬಿ ಪರ ಆಡಿರುವುದು ಚರ್ಚೆಗೆ ಗ್ರಾಸವಾಗಿದೆ. ಅವರು ಬೇರೆ ಯಾರೂ ಅಲ್ಲ, ದಕ್ಷಿಣ ಆಫ್ರಿಕಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಹೆನ್ಸಿಚ್ ಕ್ಲಾಸೆನ್ ಮತ್ತು ಏಕದಿನ ವಿಶ್ವಕಪ್ 2023ರ ಫೈನಲ್ ಹೀರೋ ಟ್ರಾವಿಸ್ ಹೆಡ್.

    ಹೌದು, ನೀವು ಕೇಳುತ್ತಿರುವುದು ನಿಜ. ಈ ಇಬ್ಬರು ಆಟಗಾರರು ಈ ಹಿಂದೆ ಆರ್​ಸಿಬಿ ಪರ ಆಡಿದ್ದರು. ಹೆನ್ರಿಚ್​ ಕ್ಲಾಸೆನ್ 2019ರ ಸೀಸನ್​ನಲ್ಲಿ ಆರ್​ಸಿಬಿ ಪರ ಆಡಿದ್ದರು. ಆ ಸೀಸನ್​​ನಲ್ಲಿ ಕ್ಲಾಸೆನ್ ಕೇವಲ ಮೂರು ಪಂದ್ಯಗಳನ್ನು ಆಡಿದರು. ಆದರೆ, ಕ್ಲಾಸೆನ್ ಮಾತ್ರ ಉತ್ತಮ ಪ್ರದರ್ಶನ ನೀಡಲಿಲ್ಲ. 3 ಪಂದ್ಯಗಳಲ್ಲಿ ಕೇವಲ 9 ರನ್ ಗಳಿಸಿದರು. ಪರಿಣಾಮವಾಗಿ ಆರ್​ಸಿಬಿ ಅವರನ್ನು ಮುಂದಿನ ಸೀಸನ್​ನಲ್ಲಿ ಮೊದಲು ಬಿಡುಗಡೆ ಮಾಡಿತು.

    ಏಕದಿನ ವಿಶ್ವಕಪ್ 2023ರ ಫೈನಲ್ ಹೀರೋ ಟ್ರಾವಿಸ್ ಹೆಡ್ ಕೂಡ ಮಾಜಿ ಆರ್​ಸಿಬಿ ಆಟಗಾರ. 2016 ಮತ್ತು 2017ರ ಸೀಸನ್​ನಲ್ಲಿ ಆರ್‌ಸಿಬಿ ಪರ 10 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಆಸೀಸ್ ತಂಡದ ಎಡಗೈ ಆಟಗಾರನಾಗಿರುವ ಹೆಡ್​, ಸಾಧಾರಣ ಪ್ರದರ್ಶನ ನೀಡಿದ್ದರು. 29ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ 205 ರನ್ ಗಳಿಸಿದರು. ಸ್ಟ್ರೈಕ್ ರೇಟ್ 139 ಇತ್ತು. ನಿರೀಕ್ಷಿತ ಪ್ರದರ್ಶನ ತೋರದ ಕಾರಣ ಅವರನ್ನು ತಂಡದಿಂದ ಕೈಬಿಡಲಾಗಿತ್ತು.

    ಇನ್ನೂ ಪ್ರಸಕ್ತ ಋತುವಿನಲ್ಲಿ, ಹೆನ್ರಿಚ್ ಕ್ಲಾಸೆನ್ ಮತ್ತು ಟ್ರಾವಿಸ್ ಹೆಡ್ ಕ್ರೀಡಾಂಗಣದಲ್ಲಿ ಧೂಳೆಬ್ಬಿಸುತ್ತಿದ್ದಾರೆ. ಸನ್ ರೈಸರ್ಸ್​ಗೆ ರನ್ ಗಳ ಮಹಾಪೂರವೇ ಹರಿದು ಬರುತ್ತಿದೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಸನ್ ರೈಸರ್ಸ್, ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ತಂಡವಾಗಿ ಹೊರಹೊಮ್ಮಲು ಇವರಿಬ್ಬರ ಪಾತ್ರ ಮಹತ್ವದ್ದು. ಈ ದಾಖಲೆ ಎಸ್​ಆರ್​ಎಚ್​ ತಂಡಕ್ಕೆ ಎಷ್ಟು ಖುಷಿಯಾಗಿದೆಯೋ ಆರ್​ಸಿಬಿಗೂ ಅಷ್ಟೇ ದುಃಖವಾಗಿದೆ. ಇದೀಗ ಆರ್‌ಸಿಬಿ ಟ್ರೋಲರ್‌ಗಳು ಹಳೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ. ಆರ್‌ಸಿಬಿಯಲ್ಲಿ ಇರುವಾಗ ಯಾಕೆ ಇಷ್ಟು ಚೆನ್ನಾಗಿ ಪ್ರದರ್ಶನ ನೀಡಲಿಲ್ಲ ಎಂದು ಕೆಲವರು ಮಾತನಾಡುತ್ತಿದ್ದಾರೆ. ಆರ್‌ಸಿಬಿಯಿಂದ ಬೇರೆ ಫ್ರಾಂಚೈಸಿಗಳಿಗೆ ತೆರಳಿ ಅಲ್ಲಿ ಮಿಂಚು ಹರಿಸಿದ ಆಟಗಾರರನ್ನು ನೆಟ್ಟಿಗರು ನೆನಪಿಸಿಕೊಂಡಿದ್ದಾರೆ.

    ಈ ಸೀಸನ್​ನಲ್ಲಿ ಆರ್​ಸಿಬಿ ಎರಡು ಪಂದ್ಯಗಳನ್ನು ಆಡಿದೆ. ಚೆನ್ನೈ ವಿರುದ್ಧ ಸೋತರೆ, ಪಂಜಾಬ್ ಕಿಂಗ್ಸ್ ವಿರುದ್ಧದ ಗೆಲುವು ಸಾಧಿಸಿದೆ. ಇಂದು (ಮಾರ್ಚ್​ 29) ಕೆಕೆಆರ್ ತಂಡವನ್ನು ಆರ್​ಸಿಬಿ ಎದುರಿಸಲಿದೆ.

    ಪಂದ್ಯದ ವಿಚಾರಕ್ಕೆ ಬಂದರೆ, ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ (ಮಾರ್ಚ್​ 27) ನಡೆದ ಪ್ರಸಕ್ತ ಐಪಿಎಲ್​ನ 8ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಮುಂಬೈ ಇಂಡಿಯನ್ಸ್‌ ತಂಡವನ್ನು 31 ರನ್​ಗಳಿಂದ ಮಣಿಸುವ ಮೂಲಕ ಭರ್ಜರಿ ಗೆಲುವು ಸಾಧಿಸಿತು. ಮೊದಲಿಗೆ ಬ್ಯಾಟ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ 3 ವಿಕೆಟ್‌ ಕಳೆದುಕೊಂಡು 277 ರನ್ ಗಳಿಸಿ ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ಸ್ಕೋರ್ ದಾಖಲಿಸಿತು. ಗೆಲ್ಲಲು 278 ರನ್‌ಗಳ ಕಠಿಣ ಗುರಿಯನ್ನು ಪಡೆದ ಮುಂಬೈ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 246 ರನ್‌ ಹೊಡೆದು ಸತತ ಎರಡನೇ ಸೋಲನ್ನು ಅನುಭವಿಸಿತು. (ಏಜೆನ್ಸೀಸ್​)

    ಸನ್​ ರೈಸರ್ಸ್​ ಹೈದರಾಬಾದ್​ ಅತ್ಯಧಿಕ ರನ್​ ದಾಖಲೆ ಬರೆಯಲು ರಜಿನಿಕಾಂತ್​ ಕಾರಣ! ಇಲ್ಲಿದೆ ವಿಡಿಯೋ ಸಾಕ್ಷಿ

    ಹಾರ್ದಿಕ್​​ ಪಾಂಡ್ಯಗೆ ಈ ಸ್ಥಿತಿ ಬರಬಾರದಿತ್ತು… ಉರಿಯುವ ಬೆಂಕಿಗೆ ತುಪ್ಪ ಸುರಿದ ಸೂರ್ಯಕುಮಾರ್​ ಯಾದವ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts