More

    ಆರ್​ಸಿಬಿ ತಂಡದ ವಿಕೆಟ್​ ಕೀಪಿಂಗ್​ ಜವಾಬ್ದಾರಿಗೆ ಎಬಿ ಡಿವಿಲಿಯರ್ಸ್ ಸಿದ್ಧ

    ದುಬೈ: ಎಬಿ ಡಿವಿಲಿಯರ್ಸ್​ ಮೂಲತಃ ವಿಕೆಟ್​ ಕೀಪರ್​ ಆಗಿದ್ದರೂ, ಬ್ಯಾಟಿಂಗ್​ ಕಡೆ ಹೆಚ್ಚಿನ ಗಮನ ಹರಿಸುವ ಸಲುವಾಗಿ ಕೀಪಿಂಗ್​ನಿಂದ ದೂರ ಉಳಿದಿದ್ದರು. ದಕ್ಷಿಣ ಆಫ್ರಿಕಾ ತಂಡವನ್ನು ಪ್ರತಿನಿಧಿಸುವಾಗಲೂ ಅವರು ವಿಕೆಟ್​ ಕೀಪಿಂಗ್​ನಿಂದ ದೂರ ಉಳಿದು ಬ್ಯಾಟ್ಸ್​ಮನ್​ ಆಗಿ ಆಡುತ್ತಿದ್ದರು. ಐಪಿಎಲ್​ನಲ್ಲಿ ಆರ್​ಸಿಬಿ ತಂಡದಲ್ಲೂ ಅವರು ಕಳೆದ ಕೆಲ ಆವೃತ್ತಿಗಳಿಂದ ಅವರು ಕೇವಲ ಬ್ಯಾಟ್ಸ್​ಮನ್​ ಆಗಿದ್ದರು. ಆದರೆ ಮುಂಬರುವ ಐಪಿಎಲ್​ನಲ್ಲಿ ಅವರು ಆರ್​ಸಿಬಿ ತಂಡದ ಸಮತೋಲನ ಮತ್ತು ಯಶಸ್ಸಿಗಾಗಿ ವಿಕೆಟ್​ ಕೀಪಿಂಗ್​ ಜವಾಬ್ದಾರಿ ಹೊರಲು ಸಿದ್ಧರಾಗಿದ್ದಾರೆ.

    ಆರ್​ಸಿಬಿ ತಂಡ ದುಬೈನ ಐಸಿಸಿ ಕ್ರಿಕೆಟ್​ ಅಕಾಡೆಮಿಯಲ್ಲಿ ಅಭ್ಯಾಸ ನಡೆಸುತ್ತಿರುವ ವೇಳೆ ಎಬಿ ಡಿವಿಲಿಯರ್ಸ್ ವಿಕೆಟ್​ ಕೀಪಿಂಗ್​ ಗ್ಲೌಸ್​ ತೊಟ್ಟು ಅಭ್ಯಾಸ ನಡೆಸಿರುವುದು ಕಂಡು ಬಂದಿದೆ. ತಂಡದ ಮುಖ್ಯ ಕೋಚ್​ ಸೈಮನ್​ ಕಾಟಿಚ್​ ಅವರು ಈಗಾಗಲೆ ತಂಡದ ವಿಕೆಟ್​ ಕೀಪರ್​ ಆಗಿ ಎಬಿ ಡಿವಿಲಿಯರ್ಸ್ ಆಡುವ ಬಗ್ಗೆ ಸ್ಪಷ್ಟ ಸುಳಿವು ನೀಡಿದ್ದಾರೆ.

    ‘ತಂಡ ಸಮತೋಲನದ ಬಗ್ಗೆ ನಾವು ಸಾಕಷ್ಟು ಚರ್ಚೆ ನಡೆಸಿದ್ದೇವೆ. ಈ ಹಿಂದೆ ದಕ್ಷಿಣ ಆಫ್ರಿಕಾ ಪರ ವಿಕೆಟ್​ ಕೀಪರ್​ ಆಗಿ ಆಡಿರುವ ಎಬಿ ಡಿವಿಲಿಯರ್ಸ್ ಅವರನ್ನು ಆರ್​ಸಿಬಿ ತಂಡದಲ್ಲೂ ಇದೇ ಜವಾಬ್ದಾರಿ ನಿಭಾಯಿಸಲು ಕೇಳಿಕೊಳ್ಳಬಹುದು. ಅವರು ನಮ್ಮ ತಂಡದಲ್ಲಿ ದೊಡ್ಡ ಪಾತ್ರವನ್ನು ನಿಭಾಯಿಸಲಿದ್ದಾರೆ’ ಎಂದು ಸೈಮನ್​ ಕಾಟಿಚ್​ ಹೇಳಿದ್ದಾರೆ.

    ಇದನ್ನೂ ಓದಿ: ಕರೊನಾ ಗೆದ್ದು ಬಾ, ದೀಪಕ್​ ಚಹರ್​ ಚೇತರಿಕೆಗೆ ಹಾರೈಸಿ ಅಕ್ಕ-ತಮ್ಮನಿಂದ ಭಾವನಾತ್ಮಕ ಸಂದೇಶ

    ಆರ್​ಸಿಬಿ ತಂಡದಲ್ಲಿ ಕಳೆದ ವರ್ಷ ಪಾರ್ಥಿವ್​ ಪಟೇಲ್​ ಪರಿಣತ ವಿಕೆಟ್​ ಕೀಪರ್​ ಆಗಿ ಆಡಿದ್ದರು. ಅವರನ್ನು ಬಿಟ್ಟರೆ ಎಬಿಡಿ ಮಾತ್ರ ತಂಡದಲ್ಲಿ ವಿಕೆಟ್​ ಕೀಪಿಂಗ್​ ನಿಭಾಯಿಸಬಲ್ಲ ಆಟಗಾರರಾಗಿದ್ದಾರೆ. ಇದೀಗ ಅವರು ವಿಕೆಟ್​ ಕೀಪಿಂಗ್​ ಅಭ್ಯಾಸ ನಡೆಸಿರುವುದು ಮುಂಬರುವ ಐಪಿಎಲ್​ನಲ್ಲಿ ಇದೇ ಪಾತ್ರವನ್ನು ನಿಭಾಯಿಸುವ ನಿರೀಕ್ಷೆಯನ್ನು ಹೆಚ್ಚಿಸಿದೆ.

    ಎಬಿಡಿ ವಿಕೆಟ್​ ಕೀಪಿಂಗ್​ ನಿರ್ವಹಿಸಿದರೆ ಆಗ ತಂಡದ ಸಮತೋಲನವೂ ಹೆಚ್ಚಲಿದೆ. ಪಾರ್ಥಿವ್​ ಪಟೇಲ್​ರನ್ನು ಆಡಿರುವ ಪ್ರಸಂಗ ಬಂದರೆ ಆಗ ಅವರು ಆರಂಭಿಕರಾಗಿಯೂ ಕಣಕ್ಕಿಳಿಯಬೇಕಾಗುತ್ತದೆ. ಈ ಬಾರಿ ತಂಡಕ್ಕೆ ಸೇರ್ಪಡೆಗೊಂಡಿರುವ ಆಸೀಸ್​ ನಾಯಕ ಆರನ್​ ಫಿಂಚ್​ ಜತೆಗೆ ಉತ್ತಮ ಫಾರ್ಮ್​ನಲ್ಲಿರುವ ಕರ್ನಾಟಕದ ಬ್ಯಾಟ್ಸ್​ಮನ್​ ದೇವದತ್​ ಪಡಿಕಲ್​ ಅವರನ್ನು ಕಣಕ್ಕಿಳಿಸುವ ಆರ್​ಸಿಬಿ ಯೋಜನೆ ಕೈಗೂಡಲು ಇದು ಅಡ್ಡಿಯಾಗುತ್ತದೆ. ಹೀಗಾಗಿ ಫಿಂಚ್​-ಪಡಿಕಲ್​ ಜೋಡಿ ಜತೆಯಾಗಲು ಎಬಿಡಿ ಕೀಪಿಂಗ್​ ನೆರವಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts