More

    ಎಬಿ ಡಿವಿಲಿಯರ್ಸ್‌ ಸಿಡಿಲು, ಆರ್‌ಸಿಬಿ ತಂಡಕ್ಕೆ ಡೆಲ್ಲಿ ಎದುರು ರೋಚಕ ಜಯ

    ಅಹಮದಾಬಾದ್: ಕಡೇ ಎಸೆತದವರೆಗೂ ಕುತೂಹಲ ಕಾಯ್ದುಕೊಂಡ ಕದನದಲ್ಲಿ ಮೇಲುಗೈ ಸಾಧಿಸಿದ ಆರ್‌ಸಿಬಿ ತಂಡ ಐಪಿಎಲ್-14ರ ತನ್ನ 6ನೇ ಪಂದ್ಯದಲ್ಲಿ 1 ರನ್‌ನಿಂದ ಡೆಲ್ಲಿ ಕ್ಯಾಪಿಟಲ್ಸ್ ಎದುರು ರೋಚಕ ಜಯ ದಾಖಲಿಸಿತು. ಇದರೊಂದಿಗೆ ಆರ್‌ಸಿಬಿ ಲೀಗ್‌ನ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಲಗ್ಗೆಯಿಟ್ಟಿತು. ಹ್ಯಾಟ್ರಿಕ್ ಗೆಲುವಿನಿಂದ ಬೀಗಿದ್ದ ಡೆಲ್ಲಿ ವೀರೋಚಿತ ಸೋಲು ಕಂಡಿತು.

    ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವಿರಾಟ್ ಕೊಹ್ಲಿ ಬಳಗ ಆರಂಭಿಕ ವೈಫಲ್ಯದ ನಡುವೆಯೂ 5 ವಿಕೆಟ್‌ಗೆ 171 ರನ್ ಪೇರಿಸಿತು. ಪ್ರತಿಯಾಗಿ ಡೆಲ್ಲಿ ತಂಡ ರಿಷಭ್ ಪಂತ್ (58*ರನ್, 48 ಎಸೆತ, 6 ಬೌಂಡರಿ) ಹಾಗೂ ಶಿಮ್ರೋನ್ ಹೆಟ್ಮೆಯರ್ (53*ರನ್, 25 ಎಸೆತ, 2 ಬೌಂಡರಿ, 4 ಸಿಕ್ಸರ್) ಪ್ರತಿಹೋರಾಟದ ನಡುವೆಯೂ 4 ವಿಕೆಟ್‌ಗೆ 170 ರನ್‌ಕಲೆಹಾಕಿ, ನಿರಾಸೆ ಅನುಭವಿಸಿತು.

    ಆರ್‌ಸಿಬಿ: 5 ವಿಕೆಟ್‌ಗೆ 171 (ಎಬಿ ಡಿವಿಲಿಯರ್ಸ್‌ 75*, ಗ್ಲೆನ್ ಮ್ಯಾಕ್ಸ್‌ವೆಲ್ 25, ರಜತ್ ಪಟಿದಾರ್ 31, ಇಶಾಂತ್ ಶರ್ಮ 26ಕ್ಕೆ 1, ಕಗಿಸೊ ರಬಾಡ 38ಕ್ಕೆ 1, ಅವೇಶ್ ಖಾನ್ 24ಕ್ಕೆ 1, ಅಮಿತ್ ಮಿಶ್ರಾ 27ಕ್ಕೆ 1, ಅಕ್ಷರ್ ಪಟೇಲ್ 33ಕ್ಕೆ 1), ಡೆಲ್ಲಿ ಕ್ಯಾಪಿಟಲ್ಸ್: 4 ವಿಕೆಟ್‌ಗೆ 170 (ರಿಷಭ್ ಪಂತ್ 58*, ಶಿಮ್ರೋಣ್ ಹೆಟ್ಮೆಯರ್ 53*, ಮಾರ್ಕಸ್ ಸ್ಟೊಯಿನಿಸ್ 22, ಪೃಥ್ವಿ ಷಾ 21, ಹರ್ಷಲ್ ಪಟೇಲ್ 37ಕ್ಕೆ 2, ಕೈಲ್ ಜೇಮಿಸನ್ 32ಕ್ಕೆ 1, ಸಿರಾಜ್ 44ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts