More

    ಕರ್ನಾಟಕ, ತಮಿಳುನಾಡಿನ ಎರಡು ಸಹಕಾರಿ ಬ್ಯಾಂಕ್​ಗಳಿಗೆ 15 ಲಕ್ಷ ರೂಪಾಯಿ ದಂಡ

    ನವದೆಹಲಿ: ಬ್ಯಾಂಕಿಂಗ್ ನಿಯಮ ಉಲ್ಲಂಘಿಸಿದ ಕಾರಣ ಕರ್ನಾಟಕ ಮತ್ತು ತಮಿಳುನಾಡಿನ ಎರಡು ಸಹಕಾರಿ ಬ್ಯಾಂಕ್​ಗಳ ವಿರುದ್ಧ ಕ್ರಮ ತೆಗೆದುಕೊಂಡಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ), ಬುಧವಾರ ಅವುಗಳಿಗೆ 15 ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ.

    ದಾವಣಗೆರೆಯ ಮಿಲಾತ್ ಕೋ ಆಪರೇಟಿವ್ ಬ್ಯಾಂಕ್​ ಮತ್ತು ತೂತುಕುಡಿಯ ತಿರುವೈಕುಂಠಂ ಕೋ-ಆಪರೇಟಿವ್ ಅರ್ಬನ್ ಬ್ಯಾಂಕ್​ ಲಿಮಿಟೆಡ್​ ನಿಯಮ ಉಲ್ಲಂಘಿಸಿದ ಸಹಕಾರಿ ಬ್ಯಾಂಕುಗಳು. ಈ ಪೈಕಿ ಕರ್ನಾಟಕದ ಮಿಲಾತ್ ಬ್ಯಾಂಕ್​ಗೆ 10 ಲಕ್ಷ ರೂಪಾಯಿ ಮಾನೆಟರಿ ಪೆನಾಲ್ಟಿ ವಿಧಿಸಲಾಗಿದೆ. ಈ ಬ್ಯಾಂಕು ಆರ್​ಬಿಐ ವಿಧಿಸಿದ್ದ ನಿಯಮ, ನಿರ್ದೇಶನಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕ್ರಮ ಜರುಗಿಸಲಾಗಿದೆ ಎಂದು ಆರ್​ಬಿಐ ತಿಳಿಸಿದೆ.

    ಇದನ್ನೂ ಓದಿ: ಚುನಾವಣಾ ಸಿಬ್ಬಂದಿ ಜತೆಗೆ ಪೆನ್​ ವಿಚಾರಕ್ಕೆ ವಾಗ್ವಾದಕ್ಕಿಳಿದ್ರು ಮಾಜಿ ಶಾಸಕ ಕಾಶಪ್ಪನವರ

    ಇದೇ ರೀತಿ, ತಮಿಳುನಾಡಿನ ತಿರುವೈಕುಂಠಂ ಬ್ಯಾಂಕು ಆರ್​ಬಿಐ ನಿರ್ದೇಶನ ಉಲ್ಲಂಘಿಸಿ ಬ್ಯಾಂಕಿನ ನಿರ್ದೇಶಕರಿಗೆ ಸಾಲ ಮತ್ತು ಮುಂಗಡ ಪಾವತಿ ಮಾಡಿದ್ದಕ್ಕಾಗಿ 5 ಲಕ್ಷ ರೂಪಾಯಿ ಮಾನೆಟರಿ ಪೆನಾಲ್ಟಿಯನ್ನು ಆರ್​​ಬಿಐ ವಿಧಿಸಿದೆ. ಕಳೆದ ವರ್ಷ ಮಾರ್ಚ್​ 31ರ ಲೆಕ್ಕಪತ್ರಗಳ ಆಧಾರದ ಮೇಲೆ ಆರ್​ಬಿಐ ಈ ಕ್ರಮ ಜರುಗಿಸಿದೆ. (ಏಜೆನ್ಸೀಸ್)

    ದಾಖಲೆ ಮತದ ಗೆಲುವು ಪಡೆದ ಬಿಡೆನ್ – ಅಧ್ಯಕ್ಷೀಯ ಅಭ್ಯರ್ಥಿಯೊಬ್ಬರ ದಾಖಲೆ ಗೆಲುವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts