More

    ಮುಂಬರುವ ಐಪಿಎಲ್​ ಟೂರ್ನಿಗೂ ಮುನ್ನವೇ ಎಲ್ಲ ಬ್ಯಾಟ್ಸ್​ಮನ್​ಗಳಿಗೂ ಎಚ್ಚರಿಕೆ ಸಂದೇಶ ರವಾನಿಸಿದ ಆರ್​.ಅಶ್ವಿನ್​!

    ನವದೆಹಲಿ: ಮುಂಬರುವ 2020ನೇ ಸಾಲಿನ ಹಾಗೂ 13ನೇ ಆವೃತ್ತಿಯ ಐಪಿಎಲ್​ ಟೂರ್ನಿಯ ಆರಂಭಕ್ಕೂ ಮುನ್ನವೇ ಟೀಮ್​ ಇಂಡಿಯಾದ ಸ್ಪಿನ್​ ಮಾಂತ್ರಿಕ ರವಿಚಂದ್ರನ್​ ಅಶ್ವಿನ್​ ಎಲ್ಲ ಬ್ಯಾಟ್ಸ್​ಮನ್​ಗಳಿಗೂ ಎಚ್ಚರಿಕೆ ಸಂದೇಶವೊಂದನ್ನು ರವಾನಿಸಿದ್ದಾರೆ.

    ಎಚ್ಚರಿಕೆಯ ಸಂದೇಶ ಯಾವುದೆಂದರೆ… ಮುಂಬರುವ ಐಪಿಎಲ್​ ಆವೃತ್ತಿಯಲ್ಲಿ ಯಾವುದೇ ಬ್ಯಾಟ್ಸ್​ಮನ್​ ಬಾಲ್​ ಮಾಡುವ ಮುನ್ನವೇ ಕ್ರೀಸ್​ ಬಿಟ್ಟರೆ ಮಂಕಡಿಂಗ್ ರನೌಟ್ ಮಾಡುವುದಾಗಿ ಅಶ್ವಿನ್​ ಎಚ್ಚರಿಸಿದ್ದಾರೆ.

    ಅಭಿಮಾನಿಳೊಂದಿಗೆ ಟ್ವಿಟರ್​ನಲ್ಲಿ ಸಂವಹನ ನಡೆಸುವಾಗ ನೆಟ್ಟಿಗನೊಬ್ಬ ಕೇಳಿದ ಪ್ರಶ್ನೆಗೆ ಉತ್ತರಿಸಲು ಹೋಗಿ ಎಚ್ಚರಿಕೆ ನೀಡುವ ಸನ್ನಿವೇಶ ಸೃಷ್ಟಿಯಾಯಿತು. ಈ ಬಾರಿಯ ಐಪಿಎಲ್​ ನೀವು ಮಂಕಡಿಂಗ್ ರನೌಟ್ ಮಾಡುವ ಸಂಭವನೀಯ ಆಟಗಾರ ಯಾರಿರಬಹುದು ಎಂದು ಅಭಿಮಾನಿಯೊಬ್ಬ ಅಶ್ವಿನ್​ರನ್ನು ಪ್ರಶ್ನಿಸಿದ. ಇದಕ್ಕೆ ಉತ್ತರಿಸಿದ ಅಶ್ವಿನ್ ಬಾಲ್​ ಮಾಡುವ ಮುನ್ನ​ ಕ್ರೀಸ್​ನಿಂದ ಯಾರೇ ಹೊರಗೆ ಹೋದರು ಅವರನ್ನು ಮಂಕಡಿಂಗ್ ರನೌಟ್ ಮಾಡುತ್ತೇನೆ ಎಂದಿದ್ದಾರೆ.​

    ಕಳೆದ ಆವೃತ್ತಿಯ ವಿವಾದ ಎಬ್ಬಿಸಿದ ಮಂಕಡಿಂಗ್​
    2019ನೇ ಸಾಲಿನ 12ನೇ ಆವೃತ್ತಿಯಲ್ಲಿ ಪಂಜಾಬ್​ ಪರ ಆಡುವಾಗ ಜಾಸ್​ ಬಟ್ಲರ್​ರನ್ನು ಮಂಕಡಿಂಗ್ ರನೌಟ್ ಮಾಡಿದ್ದರು. 2019 ಮಾರ್ಚ್​ 25ರಂದು ನಡೆದ ಐಪಿಎಲ್​ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​​ ಆರಂಭಿಸಿದ ಪಂಜಾಬ್​ ತಂಡ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 184ರನ್​ ಕಲೆಹಾಕಿತ್ತು. ಇದನ್ನು ಬೆನ್ನತ್ತಿದ ರಾಜಸ್ಥಾನ ತಂಡ ಉತ್ತಮ ಆರಂಭವನ್ನೇ ಕಂಡಿತು. ಬಿರುಸಿನ ಆಟವಾಡುತ್ತಿದ್ದ ಜಾಸ್​​ ಬಟ್ಲರ್​ (69 ರನ್, 43 ಎಸೆತ, 10 ಬೌಂಡರಿ, 2 ಸಿಕ್ಸರ್) ಪಂಜಾಬ್ ತಂಡದಿಂದ ಗೆಲುವನ್ನು ಕಸಿದುಕೊಳ್ಳುತ್ತಿದ್ದ ಹಂತದಲ್ಲಿ ಆರ್.ಅಶ್ವಿನ್ ಮಾಡಿದ ಐಪಿಎಲ್ ಇತಿಹಾಸದ ಮೊಟ್ಟಮೊದಲ ವಿವಾದಿತ ಮಂಕಡಿಂಗ್ ರನೌಟ್ ತಂಡದ ಗೆಲುವಿನ ಟರ್ನಿಂಗ್ ಪಾಯಿಂಟ್ ಎನಿಸಿತು. ಕೊನೆಯಲ್ಲಿ ಎರ್ರಾಬಿರ್ರಿ ಆಡಲು ಹೋಗಿ ಬೇಗ ವಿಕೆಟ್​ ಕಳೆದುಕೊಂಡು ರಾಜಸ್ಥಾನ ಸೋಲನ್ನು ಅನುಭವಿಸಿತು.

    ವಿವಾದಿತ ರನೌಟ್​ ಕ್ರಿಕೆಟ್​ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿ ಅಶ್ವಿನ್​ ವಿರುದ್ಧ ಪರ-ವಿರೋಧದ ಮಾತುಗಳು ಕೇಳಿಬಂದಿದ್ದವು. ಕಳೆದ ಆವೃತ್ತಿಯಲ್ಲಿ ಪಂಜಾಬ್​ ತಂಡದ ನಾಯಕರಾಗಿದ್ದ ಅಶ್ವಿನ್​, ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನು ಸೇರಿಕೊಂಡಿದ್ದಾರೆ.

    ಮಂಕಡಿಂಗ್ ರನೌಟ್ ಅಂದರೆ ಏನು?
    ಬೌಲರ್ ಚೆಂಡು ಎಸೆಯುವ ಮುನ್ನವೇ, ನಾನ್​ಸ್ಟ್ರೈಕರ್​ಎಂಡ್​ನಲ್ಲಿದ್ದ ಬ್ಯಾಟ್ಸ್​ಮನ್ ಕ್ರೀಸ್ ಬಿಟ್ಟಾಗ, ಬೌಲರ್ ಚೆಂಡನ್ನು ಎಸೆಯದೇ ಬೇಲ್ಸ್​ಅನ್ನು ಎಗರಿಸಿ ಔಟ್​ಗೆ ಅಪೀಲ್ ಮಾಡುವುದನ್ನು ಮಂಕಡಿಂಗ್ ಎನ್ನಲಾಗುತ್ತದೆ. ಎಂಸಿಸಿಯ ಕ್ರಿಕೆಟ್ ನಿಯಮದಲ್ಲೂ ಮಂಕಡಿಂಗ್ ಔಟ್ ಮಾನ್ಯತೆ ಪಡೆದಿದೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಈವರೆಗೂ 10 ಬಾರಿ ಮಂಕಡಿಂಗ್ ರನೌಟ್​ಗಳು ನಡೆದಿದ್ದು, ಟಿ20 ಮಾದರಿಯಲ್ಲಿ ಇದು 2ನೇ ಬಾರಿ. 2014ರಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯದಲ್ಲಿ ಬಟ್ಲರ್​ರನ್ನು ಸಚಿತ್ರ ಸೇನನಾಯಕೆ ಮಂಕಡಿಂಗ್ ಮಾಡಿದ್ದರು. (ಏಜೆನ್ಸೀಸ್​)

    ವಿವಾದಿತ ಔಟ್​ ಮಾಡಿದ ಅಶ್ವಿನ್​ ನಡೆಗೆ ಭಾರಿ ವಿರೋಧ: ಪಂಜಾಬ್​ ನಾಯಕ ಕೊಟ್ಟ ಪಂಚ್​ ಹೀಗಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts