More

    ಕೊನೆಗೂ ರವಿ ಬೆಳಗೆರೆ ನಿರ್ದೇಶಕರಾಗಲೇ ಇಲ್ಲ …

    ಬೆಂಗಳೂರು: ಶುಕ್ರವಾರ ನಿಧನರಾದ ರವಿ ಬೆಳಗೆರೆ ಅವರು ಚಿತ್ರರಂಗದಲ್ಲಿ ಸಂಭಾಷಣೆಕಾರರಾಗಿ, ನಟರಾಗಿ ಗುರುತಿಸಿಕೊಂಡಿದ್ದರು. ಸಿನಿಮಾ ನಿರ್ದೇಶನ ಮಾಡಬೇಕೆಂಬ ಅವರ ಆಸೆಯಾಗಿತ್ತು ಮತ್ತು ಅವರೊಂದು ಚಿತ್ರವನ್ನೂ ಪ್ರಾರಂಭಿಸಿದ್ದರು. ಕಾರಣಾಂತರಗಳಿಂದ ಚಿತ್ರ ಮುಂದುವರೆಯಲಿಲ್ಲ.

    ಇದನ್ನೂ ಓದಿ: ನಮ್ಮ ಜತೆ ಇದ್ದ ರವಿ ಬೆಳಗೆರೆನೇ ಬೇರೆ: ಬಿಗ್​ಬಾಸ್​ ಕ್ಷಣಗಳನ್ನು ನೆನೆದು ಕಣ್ಣೀರಿಟ್ಟ ದೀಪಿಕಾ ದಾಸ್​

    ರವಿ ಬೆಳಗೆರೆ ಅವರಿಗೂ, ಚಿತ್ರರಂಗಕ್ಕೂ ಸುಮಾರು ಎರಡು ದಶಕಗಳ ನಂಟು. ‘ಹಾಯ್​ ಬೆಂಗಳೂರು’ ಪತ್ರಿಕೆ ಕೆಲವೇ ತಿಂಗಳುಗಳ ಅಂತರದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದ ಸಂದರ್ಭದಲ್ಲಿ, ಅದೇ ಹೆಸರಿನ ಚಿತ್ರವೊಂದು ನಿರ್ಮಾಣವಾಗಿತ್ತು. ಈ ಚಿತ್ರದಲ್ಲಿ ಶಶಿಕುಮಾರ್​, ಪತ್ರಕರ್ತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

    ಆ ನಂತರ ‘ಎನ್​ಕೌಂಟರ್​ ದಯಾನಾಯಕ್​’ ನಿರ್ಮಾಣವಾದ ಸಂದರ್ಭದಲ್ಲಿ, ಆ ಚಿತ್ರಕ್ಕೆ ಅವರು ಸಂಭಾಷಣೆ ರಚಿಸಿದ್ದರು. ಇದಾಗಿ ಒಂದೆರೆಡು ವರ್ಷಗಳಲ್ಲೇ ‘ಗಂಡ ಹೆಂಡತಿ’ ಚಿತ್ರದ ಮೂಲಕ ನಟರಾದರು. ಅದಾದ ಮೇಲೆ ‘ವಾರಸ್ದಾರ’ ಮತ್ತು ‘ಮಾದೇಶ’ ಚಿತ್ರಗಳಲ್ಲೂ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

    ಇದಲ್ಲದೆ ಕಿರುತೆರೆಯಲ್ಲಿ ಒಂದಿಷ್ಟು ಸಮಯ ಸಕ್ರಿಯವಾಗಿದ್ದ ಅವರು ಈಟಿವಿ ಕನ್ನಡ ಚಾನಲ್​ಗಾಗಿ ‘ಕ್ರೈಂಡೈರಿ’ ಕಾರ್ಯಕ್ರಮವನ್ನು ರೂಪಿಸುತ್ತಿದ್ದರು. ಇದಲ್ಲದೆ ಹಳೆಯ ಚಿತ್ರಗೀತೆಗಳನ್ನು ನೆನಪಿಸುವಂತಹ ‘ಎಂದೂ ಮರೆಯದ ಹಾಡು’ ಕಾರ್ಯಕ್ರಮವನ್ನು ಅವರು ನಡೆಸಿಕೊಟ್ಟಿದ್ದರು. ಜತೆಗೆ, ಟಿ.ಎನ್​. ಸೀತಾರಾಂ ಅವರ ‘ಮುಕ್ತ ಮುಕ್ತ’ ಧಾರಾವಾಹಿಯಲ್ಲಿ ನ್ಯಾಯಾಧೀಶರ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

    ಇದನ್ನೂ ಓದಿ: ಉಪ್ಪಿ ರಿಟರ್ನ್ಸ್ – 50ನೇ ಚಿತ್ರದ ಮೂಲಕ ನಿರ್ದೇಶನಕ್ಕೆ

    ಈ ಮಧ್ಯೆ, ರವಿ ಬೆಳಗೆರೆ ನಿರ್ದೇಶನಕ್ಕೆ ಕೈ ಹಾಕಿದರು. ‘ದುನಿಯಾ’ ವಿಜಯ್​, ಹರಿಪ್ರಿಯಾ ಅಭಿನಯದ ‘ಮುಖ್ಯಮಂತ್ರಿ ಐ ಲವ್​ ಯೂ’ ಎಂಬ ಚಿತ್ರವನ್ನು ಅವರು ಘೋಷಿಸಿದ್ದಷ್ಟೇ ಅಲ್ಲ, ಚಿತ್ರದ ಮುಹೂರ್ತ ಸಹ ಬೆಂಗಳೂರು ಪ್ರೆಸ್​ ಕ್ಲಬ್​ನಲ್ಲಿ ನೆರವೇರಿತ್ತು. ಆದರೆ, ಈ ಚಿತ್ರವು ಕಾರಣಾಂತರಗಳಿಂದ ಮುಂದುವರೆಯದಿದ್ದರಿಂದ, ನಿರ್ದೇಶಕರಾಗಬೇಕೆಂಬ ರವಿ ಬೆಳಗೆರೆ ಅವರ ಕನಸು, ಕನಸಾಗಿಯೇ ಉಳಿಯಿತು.

    ರವಿ ಬೆಳಗೆರೆ ನಿಧನಕ್ಕೆ ಕಂಬನಿ ಮಿಡಿದ ಸಿನಿಮಾ ಮಂದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts