More

    ಉಪ್ಪಿ ರಿಟರ್ನ್ಸ್ – 50ನೇ ಚಿತ್ರದ ಮೂಲಕ ನಿರ್ದೇಶನಕ್ಕೆ

    ಬೆಂಗಳೂರು : ಉಪೇಂದ್ರ ಅವರು ಚಿತ್ರ ನಿರ್ದೇಶನ ಮಾಡಿದರೆ ಅದೇ ತಮಗೆ ದೊಡ್ಡ ಗಿಫ್ಟ್ ಎಂದು ಪ್ರಿಯಾಂಕಾ ಹೇಳಿಕೊಂಡಿದ್ದಾರೆ. ಇನ್ನು ಅಭಿಮಾನಿಗಳಂತೂ ಈ ಮಾತನ್ನು ಹೇಳುತ್ತಲೇ ಇರುತ್ತಾರೆ. ಇದೆಲ್ಲದರಿಂದ ಉಪೇಂದ್ರ ಸಹ ನಿರ್ದೇಶನ ಮಾಡುವ ಮನಸ್ಸು ಮಾಡಿದ್ದು, ಮುಂದಿನ ವರ್ಷ ಅವರ ನಿರ್ದೇಶನದ ಚಿತ್ರ ಸೆಟ್ಟೇರಲಿದೆ. ವಿಶೇಷವೆಂದರೆ, ಇದು ಅವರ 50ನೇ ಚಿತ್ರವಾಗಲಿದೆ.

    ರೇಸ್​ನಲ್ಲಿ ಓಡಬೇಡ

    ಸೂಪರ್​ಸ್ಟಾರ್’ ಚಿತ್ರದ ಸಮಾರಂಭದಲ್ಲಿ ಉಪೇಂದ್ರ ಅವರ ಮಗ ಆಯುಷ್ ಮಾತನಾಡುತ್ತಾ, ತನ್ನಪ್ಪ ತನ್ನನ್ನು ಹೀರೋ ಮಾಡುತ್ತಾರೆ ಎಂದಿದ್ದ. ಈ ಕುರಿತು ಮಾತನಾಡುವ ಉಪೇಂದ್ರ, ‘ನಾನ್ಯಾವತ್ತೂ ಅವನು ಅದಾಗಬೇಕು, ಇದಾಗಬೇಕು ಎಂದು ಯೋಚಿಸಿಲ್ಲ. ಸಂತೋಷವಾಗಿರಪ್ಪ, ರೇಸ್​ನಲ್ಲಿ ಓಡಬೇಡ ಅಂದಷ್ಟೇ ಹೇಳುತ್ತೇನೆ. ಏಕೆಂದರೆ, ಯಶಸ್ಸು ಮತ್ತು ಸೋಲು ಎನ್ನುವುದು ಸಮಾಜ ಹೇಳೋದಲ್ಲ. ಅದು ನಮ್ಮಲ್ಲೇ ಇರಬೇಕು. ಅವನು ಏನೋ ಬೇರೆ ಮಾಡೋಕೆ ಹುಟ್ಟಿರಬಹುದು. ನಾವು ಸುಮ್ಮನೆ ಅವನನ್ನು ಸಿನಿಮಾಗೆ ಬಾ ಎಂದು ನೂಕಬಾರದು. ಅವನು ಹೀರೋ ಆಗುತ್ತಾನೋ ಇಲ್ಲವೋ ಎನ್ನುವುದು ನಮ್ಮ ಕೈಯಲ್ಲಿಲ್ಲ. ಅವನು ಹೀರೋ ಆಗಬೇಕೆಂದರೆ, ಯಾರೋ ಮಾಡಬಹುದು’ ಎನ್ನುತ್ತಾರೆ ಉಪ್ಪಿ.

    ಈ ಮುನ್ನ ಮಂಜು ಮಾಂಡವ್ಯ ನಿರ್ದೇಶನದ ಚಿತ್ರವು ಉಪೇಂದ್ರ ಅಭಿನಯದ 50ನೇ ಚಿತ್ರವಾಗಬೇಕಿತ್ತು. ಆದರೆ, ಅದರಲ್ಲಿ ಸ್ವಲ್ಪ ಏರುಪೇರಾಗಿದೆ. ‘ತೆಲುಗು ಚಿತ್ರಗಳನ್ನು ಸೇರಿಸಿದರೆ ಈಗಾಗಲೇ 50 ಚಿತ್ರಗಳಾಗಿವೆ. ಕನ್ನಡದಲ್ಲಿ 50ನೇ ಚಿತ್ರ ವಿಶೇಷವಾಗಿರಬೇಕು ಎಂಬುದು ಎಲ್ಲರ ಆಸೆ. ಆ ಚಿತ್ರವನ್ನು ನಾನೇ ನಿರ್ದೇಶನ ಮಾಡುತ್ತೇನೆ. ಈಗಾಗಲೇ ಸ್ಕ್ರಿಪ್ಟ್ ಕೆಲಸ ಪ್ರಾರಂಭವಾಗಿದೆ. ಈಗ ಒಪ್ಪಿರುವ ಕೆಲವು ಚಿತ್ರಗಳನ್ನು ಮುಗಿಸಿ, ಈ ಚಿತ್ರ ಶುರುಮಾಡುತ್ತೇನೆ’ ಎನ್ನುತ್ತಾರೆ ಉಪೇಂದ್ರ.

    ಮನರಂಜನೆ ಕೊನೆಯ ಆಯ್ಕೆ: ಕರೊನಾ ಮತ್ತು ಲಾಕ್​ಡೌನ್​ನಿಂದ ಜನರ ಆಯ್ಕೆ ಮತ್ತು ಅಭಿರುಚಿಗಳು ಸಾಕಷ್ಟು ಬದಲಾಗಿದ್ದು, ಅದರ ಪ್ರಕಾರ ಚಿತ್ರ ಮಾಡಬೇಕಿದೆ ಎನ್ನುತ್ತಾರೆ ಉಪೇಂದ್ರ. ‘ಜನರ ಬದುಕು ಕತ್ತಲಾಗಿದೆ. ಹೀಗಿರುವಾಗ ಮನರಂಜನೆ ಎನ್ನುವುದು ಅವರ ಕೊನೆಯ ಆಯ್ಕೆಯಾಗಿದೆ. ಇದೆಲ್ಲ ಸರಿಹೋಗಬೇಕೆಂದರೆ ಇನ್ನೂ ಸಮಯ ಬೇಕು. ಇಲ್ಲಿ ಸಮಯ ಬಹಳ ಪ್ರಮುಖ ಪಾತ್ರ ವಹಿಸುತ್ತಿದೆ. ಲಾಕ್​ಡೌನ್​ನಿಂದ ಬರೀ ಚಿತ್ರರಂಗಕ್ಕಷ್ಟೇ ಅಲ್ಲ, ಎಲ್ಲ ಉದ್ಯಮಗಳಿಗೂ ಪೆಟ್ಟು ಬಿದ್ದಿದೆ’ ಎನ್ನುತ್ತಾರೆ ಉಪೇಂದ್ರ.

    ಇದು ಪ್ರಕೃತಿಯ ಸೇಡು: ಮನುಷ್ಯನನ್ನು ಕಟ್ಟಿ ಹಾಕೋಕೆ ಈ ತರಹ ಆಗಿದೆ ಎನ್ನುವ ಅವರು, ‘ನನ್ನ ಪ್ರಕಾರ ಪ್ರಪಂಚವೇ ಯೂಟರ್ನ್ ತೆಗೆದುಕೊಳ್ಳುತ್ತಿದೆ. ಮನುಷ್ಯನನ್ನು ಕಟ್ಟಿಹಾಕೋಕೆ ಈ ತರಹದ ಆಗಿದೆ. ಬೆಳವಣಿಗೆ ಹೆಸರಲ್ಲಿ ಎಷ್ಟು ಕಟ್ಟಡಗಳನ್ನು, ಎಷ್ಟು ರೋಡ್​ಗಳನ್ನು ಕಟ್ಟೋಕೆ ಸಾಧ್ಯ? ಈ ಬೆಳವಣಿಗೆ ವಿಪರೀತವಾಗಿತ್ತು. ಅದಕ್ಕೆ ಪ್ರಕೃತಿ ಈ ರೀತಿ ಸೇಡು ತೀರಿಸಿಕೊಳ್ಳುತ್ತಿದೆ. ಮೊದಲಿಗೆ ನಾವೆಲ್ಲ ಸಾಕಷ್ಟು ಬದಲಾಗಬೇಕು ಮತ್ತು ಸರಳವಾಗಿ ಬದುಕುವುದಕ್ಕೆ ಕಲಿಯಬೇಕು’ ಎಂಬುದು ಅವರ ಅಭಿಪ್ರಾಯ.

    ರಸಗೊಬ್ಬರಕ್ಕೆ ಸಹಾಯಧನ ನೀಡುವುದಕ್ಕಾಗಿ 65,000 ಕೋಟಿ ರೂಪಾಯಿ ಘೋಷಿಸಿದ ಕೇಂದ್ರ ಸರ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts