More

    ಪಡಿತರ ಚೀಟಿ ರಾಜ್ಯ ಪೋರ್ಟಬಿಲಿಟಿ ಸಂಪೂರ್ಣ ಯಶಸ್ವಿ

    ಬೆಂಗಳೂರು: ರಾಜ್ಯದಲ್ಲಿ ಎಲ್ಲಿ ಬೇಕಾದರೂ ರೇಷನ್ ಪಡೆಯುವ ಸಲುವಾಗಿ ಎರಡು ವರ್ಷಗಳ ಹಿಂದೆ ಜಾರಿಗೆ ಬಂದಿರುವ ರಾಜ್ಯ ಪೋರ್ಟಬಿಲಿಟಿ ವ್ಯವಸ್ಥೆ ಸಂಪೂರ್ಣ ಯಶಸ್ವಿಯಾಗಿದೆ. ಪ್ರತಿ ತಿಂಗಳು ಆಂದಾಜು 7-8 ಲಕ್ಷ ಕಾರ್ಡ್‌ದಾರರು ಅನ್ನಭಾಗ್ಯ ಯೋಜನೆಯಡಿ ನ್ಯಾಯಬೆಲೆ ಅಂಗಡಿಗಳಲ್ಲಿ ರೇಷನ್ ಪಡೆಯುತ್ತಿದ್ದಾರೆ. ಇತರೆ ಜಿಲ್ಲೆಗಳಕ್ಕಿಂತ ಬೆಂಗಳೂರಲ್ಲೇ ಹೆಚ್ಚು ಅಂದರೆ 1,34,773 ಲಾನುಭವಿಗಳು ಪಡಿತರ ಪಡೆಯುತ್ತಿದ್ದಾರೆ. ಇಂಟಿಗ್ರೇಡೆಟ್ ಮ್ಯಾನೇಜ್‌ಮೆಂಟ್ ಪಬ್ಲಿಕ್ ಡಿಸ್ಟ್ರೀಬಿಷೇನ್ ಹಾಗೂ ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆಯಡಿ ನಮ್ಮ ರಾಜ್ಯದ 48 ಕಾರ್ಡ್‌ದಾರರು ಬೇರೆ ರಾಜ್ಯದಲ್ಲಿ ಹಾಗೂ ಬೇರೆ ರಾಜ್ಯದಿಂದ ನಮ್ಮ ರಾಜ್ಯದಲ್ಲಿ 80 ಲಾನುಭವಿಗಳು ರೇಷನ್ ಪಡೆಯುತ್ತಿದ್ದಾರೆ ಎಂದು ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಕಾರ್ಮಿಕರಿಗೆ ಅನುಕೂಲ: ಕೂಲಿ ಕೆಲಸಕ್ಕಾಗಿ ತಮ್ಮ ಜಿಲ್ಲೆ ಬಿಟ್ಟು ನಗರ ಪ್ರದೇಶಗಳಿಗೆ ವಲಸೆ ಬರುವ ಹಾಗೂ ಬೇರೆ ಜಿಲ್ಲೆಗಳಿಗೆ ಗುಳೆ ಹೋಗುವ ಕಾರ್ಮಿಕರಿಗೆ ಹಾಗೂ ಮನೆಗೆಲಸದವರಿಗೆ ಈ ವ್ಯವಸ್ಥೆಯಿಂದ ಅನುಕೂಲವಾಗಿದೆ. ಇಲ್ಲದಿದ್ದರೆ, ಪ್ರತಿ ತಿಂಗಳು ತಮ್ಮ ಊರಿಗೆ ತೆರಳಿ ರೇಷನ್ ಪಡೆಯಬೇಕಿತ್ತು. ನಾನಾ ಕಾರಣಗಳಿಂದ ಕೆಲ ಸಂದರ್ಭಗಳಲ್ಲಿ ರೇಷನ್ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಇಂತಹ ಸಮಸ್ಯೆ ನಿವಾರಿಸಲು ಇಲಾಖೆ ರಾಜ್ಯ ಪೋರ್ಟಬಿಲಿಟಿ ವ್ಯವಸ್ಥೆ ಜಾರಿಗೆ ತಂದಿತು.

    17 ರಾಜ್ಯಗಳಲ್ಲಿ ಅನುಷ್ಠಾನ: ಪಡಿತರ ಚೀಟಿ ಹೊಂದಿರುವವರು ದೇಶದ ಯಾವ ಭಾಗದಲ್ಲಿದರೂ ರೇಷನ್ ಪಡೆಯುವ ‘ಒಂದು ದೇಶ ಒಂದು ಪಡಿತರ ಚೀಟಿ(ಒನ್ ನೇಷನ್-ಒನ್ ರೇಷನ್ ಕಾರ್ಡ್) ಯೋಜನೆ ಕಳೆದ ಜ.1ರಿಂದ ಜಾರಿಗೆ ಬಂದಿದ್ದು, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್, ಮಹಾರಾಷ್ಟ್ರ, ಹರ್ಯಾಣ, ರಾಜಸ್ಥಾನ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಗೋವಾ, ಜಾರ್ಖಂಡ, ತ್ರಿಪುರ, ಬಿಹಾರ, ಪಂಜಾಬ್, ಉತ್ತರಪ್ರದೇಶ, ಹಿಮಾಚಲ ಪ್ರದೇಶ ಸೇರಿ 17 ರಾಜ್ಯಗಳಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಬಂದಿದೆ. ರಾಜ್ಯದಲ್ಲಿ ಕೇರಳ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ಸೇರಿ ಆಂದಾಜು 80 ಲಾನುಭವಿಗಳು ರಾಜ್ಯದಲ್ಲಿ ರೇಷನ್ ಪಡೆಯುತ್ತಿದ್ದಾರೆ. ಆಯಾ ರಾಜ್ಯದ ಪಡಿತರ ನಿಯಮ ಪ್ರಕಾರವೇ ಲಾನುಭವಿಗಳಿಗೆ ರೇಷನ್ ವಿತರಿಸಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ಪ್ರತಿ ಸದಸ್ಯರಿಗೆ ಉಚಿತವಾಗಿ 5ಕೆಜಿ ಅಕ್ಕಿ ನೀಡಿದರೆ ಬೇರೆ ರಾಜ್ಯದಲ್ಲಿ ಪ್ರತಿ ಸದಸ್ಯರಿಗೆ 5 ಕೆಜಿ ಅಕ್ಕಿಯನ್ನು ಪ್ರತಿ ಕೆಜಿಗೆ 3 ರೂ.ನಂತೆ ವಿತರಿಸಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts