More

  ಮುಂಡರಗಿಯಲ್ಲಿ ರಾಘವೇಂದ್ರಸ್ವಾಮಿಗಳ ರಥೋತ್ಸವ

  ಮುಂಡರಗಿ: ಪಟ್ಟಣದ ನಂಜನಗೂಡ ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಭಾನುವಾರ ಶ್ರೀರಾಘವೇಂದ್ರ ಸ್ವಾಮಿಗಳವರ 428ನೇ ವರ್ಧಂತಿ ಉತ್ಸವ ನಿಮಿತ್ತ ವಿವಿಧ ಧಾರ್ವಿುಕ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.

  ವರ್ಧಂತಿ ಉತ್ಸವದಂಗವಾಗಿ ರಾಯರ ವೃಂದಾವನವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. ಮಠದಲ್ಲಿ ಬೆಳಗ್ಗೆ ಅಷ್ಟೋತ್ತರ ಪಠಣ, ರಾಘವೇಂದ್ರ ಅಷ್ಟೋತ್ತರ ಹೋಮ ಮೊದಲಾದ ಪೂಜಾ ಕಾರ್ಯಗಳು ನಡೆದವು. ಮಧ್ಯಾಹ್ನ ಶ್ರೀಮಠದಲ್ಲಿ ರಥೋತ್ಸವ ಜರುಗಿತು.

  ಶ್ರೀಮಠದ ಗೌರವ ವಿಚಾರಣಾಕರ್ತ ನಾರಾಯಣ ಇಲ್ಲೂರ ಹಾಗೂ ಶಮಂತಕಮಣಿ ಇಲ್ಲೂರ ಅವರು ರಥೋತ್ಸವಕ್ಕೆ ಹಾಗೂ ಪ್ರಹ್ಲಾದ್ ರಾಯರ ಮೂರ್ತಿ ಮತ್ತು ಶ್ರೀ ರಾಘವೇಂದ್ರಸ್ವಾಮಿಗಳ ಭಾವಚಿತ್ರದ ಮೆರವಣಿಗೆಗೆ ಪುಷ್ಪ ಅರ್ಪಿಸುವ ಮೂಲಕ ಚಾಲನೆ ನೀಡಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts