More

    ನಟಿ ರಶ್ಮಿಕಾ ಮಂದಣ್ಣ ನಿವಾಸದ ಮೇಲೆ ಐಟಿ‌ ದಾಳಿ; ತಡರಾತ್ರಿ 2:30ರವರೆಗೂ ವಿಚಾರಣೆ, ಇಂದೂ ದಿನವಿಡೀ ಅಧಿಕಾರಿಗಳಿಂದ ಡ್ರಿಲ್​

    ಕೊಡಗು: ನಟಿ ರಶ್ಮಿಕಾ ಮಂದಣ್ಣ ನಿವಾಸದ ಮೇಲೆ ಗುರುವಾರ ಮುಂಜಾನೆ ನಡೆಸಿದ್ದ ಐಟಿ‌ ದಾಳಿ ತಡರಾತ್ರಿ 2:30ರವರೆಗೂ ವಿಚಾರಣೆ ನಡೆಯಿತು.

    ತಡರಾತ್ರಿವರೆಗೂ ವಿಚಾರಣೆ ಮಾಡಿ ತೆರಳಿರೋ ಐಟಿ ಅಧಿಕಾರಿಗಳು ಇಂದು ಮತ್ತೆ ತಮ್ಮ ಕಾರ್ಯಾಚರಣೆ ಮುಂದುವರಿಸಲಿದ್ದಾರೆ. ಐಟಿ ದಾಳಿಗೆ ನಟಿ ರಶ್ಮಿಕಾ ಮಂದಣ್ಣ ಕುಟುಂಬ ಬಸವಳಿದಿದೆ.

    ಇಡೀ ರಾತ್ರಿ ರಶ್ಮಿಕಾ ಮಂದಣ್ಣಗೆ ಅಧಿಕಾರಿಗಳು ಡ್ರಿಲ್​ ನಡೆಸಿದ್ದಾರೆ. ಮನೆಯಲ್ಲಿದ್ದ ದಾಖಲೆಗಳನ್ನ ವಶಕ್ಕೆ ಪಡೆದು ಅಧಿಕಾರಿಗಳು ತೆರಳಿದ್ದಾರೆ. ಸೆರೆನಿಟಿ ಹಾಲ್‌ನಲ್ಲಿ ವಾಸ್ತವ್ಯ ಹೂಡಿರುವ ಅಧಿಕಾರಿಗಳು. ಸೆರೆನಿಟಿ ಹಾಲ್ ರಶ್ಮಿಕಾ ಮಾಲೀಕತ್ವದ್ದು.

    ಇಂದು ಬೆಳಗ್ಗೆ 9 ಗಂಟೆಯಿಂದ ಮತ್ತೆ ಐಟಿ ಡ್ರಿಲ್ ಶುರುವಾಗಲಿದ್ದು, ದಿನವಿಡೀ ವಿಚಾರಣೆ ನಡೆಯಲಿದೆ. ಮನೆಯಲ್ಲೇ ಇರುವಂತೆ ರಶ್ಮಿಕಾ ಮತ್ತು ತಂದೆ ಮದನ್‌ಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ನಟಿ ರಶ್ಮಿಕಾ ಅವರು ಕುಕ್ಲೂರುವಿನಲ್ಲಿರುವ ಅವರ ಮನೆಯಲ್ಲಿ ತಂಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts