More

    ರಣವೀರ್​ ಸಿಂಗ್​, ಪೋರ್ನ್​ ಸ್ಟಾರ್​ ಜಾನಿ ಸಿನ್ಸ್​ ಜಾಹೀರಾತು! ಟಿವಿ ಇಂಡಸ್ಟ್ರಿಗೆ ಮಾಡಿದ ಅವಮಾನವೆಂದು ಆಕ್ರೋಶ

    ನವದೆಹಲಿ: ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ಒಂದು ಹೆಸರು ಭಾರಿ ಟ್ರೆಂಡಿಂಗ್​ನಲ್ಲಿದೆ. ಆ ಹೆಸರು ಯಾವುದು ಅಂದರೆ, ಜಾನಿ ಸಿನ್ಸ್​. ಈತ ಅಮೆರಿಕ ಮೂಲದ ಪೋರ್ನ್​ ಸ್ಟಾರ್​. ಬಾಲಿವುಡ್​ ನಟ ರಣವೀರ್​ ಸಿಂಗ್ ಅವರು​ ಸೆಕ್ಸುವಲ್​ ವೆಲ್​ನೆಸ್​ ಬ್ರ್ಯಾಂಡ್​ ಒಂದರ ಜಾಹೀರಾತು ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಾಗಿನಿಂದ ಜಾನಿ ಸಿನ್ಸ್​ ಕೂಡ ಟ್ರೆಂಡಿಂಗ್​ನಲ್ಲಿದ್ದಾರೆ. ಏಕೆಂದರೆ ಈ ಜಾಹೀರಾತಿನಲ್ಲಿ ಜಾನಿ ಸಿನ್ಸ್​ ಕೂಡ ಇದ್ದಾರೆ. ಆದರೆ, ಜಾಹೀರಾತು ವಿಡಿಯೋ ಇದೀಗ ವಿವಾದದ ಬಿರುಗಾಳಿ ಎಬ್ಬಿಸಿದೆ.

    ಈ ಜಾಹೀರಾತು ಹಿಂದಿ ದೂರದರ್ಶನದ ಪ್ರಖ್ಯಾತ ‘ಸಾಸ್ ಬಹು’ ಕಾರ್ಯಕ್ರಮಗಳನ್ನು ವಿಡಂಬನೆ ಮಾಡಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಪೋರ್ನ್​ ಸ್ಟಾರ್​ ಜಾನಿ ಸಿನ್ಸ್​ ಭಾರತದ ಜಾಹೀರಾತಿನಲ್ಲಿ ನಟಿಸಿರುವುದು ಕೂಡ ಜನಾಕ್ರೋಶಕ್ಕೆ ಕಾರಣವಾಗಿದೆ. ಭಾರತದಲ್ಲಿ ಫೋರ್ನ್​ ಸಂಪೂರ್ಣವಾಗಿ ಬ್ಯಾನ್​ ಆಗಿರುವಾಗ ಫೋರ್ನ್​ ಸ್ಟಾರ್​ನನ್ನು ಅದು ಹೇಗೆ ಭಾರತೀಯ ಜಾಹೀರಾತುಗಳಲ್ಲಿ ನಟಿಸಲು ಅವಕಾಶ ನೀಡುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಜಾನಿ ಸಿನ್ಸ್​ ಜತೆ ನಟಿಸಿದ್ದಕ್ಕೆ ರಣವೀರ್​ಸಿಂಗ್​ರನ್ನು ಸಹ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

    ಜಾಹೀರಾತಿನಲ್ಲಿ ಜಾನಿ ಸಿನ್ಸ್ ನೋಡಿ​ ಖ್ಯಾತ ಕಿರುತೆರೆ ಕಲಾವಿದೆ ರಾಶಮಿ ದೇಸಾಯಿ ಅಸಮಾಧಾನ ಹೊರಹಾಕಿದ್ದಾರೆ. ಇದು ಟಿವಿ ಇಂಡಸ್ಟ್ರಿಗೆ ಮಾಡಿದ ಅವಮಾನ ಎಂದಿದ್ದಾರೆ. ನಾನು ಪ್ರಾದೇಶಿಕ ಚಿತ್ರೋದ್ಯಮದಿಂದ ನನ್ನ ಕೆಲಸವನ್ನು ಆರಂಭಿಸಿದೆ. ತದನಂತರ ಟಿವಿ ಇಂಡಸ್ಟ್ರಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ. ಜನರು ಇದನ್ನು ಸಣ್ಣ ಪರದೆ ಎಂದು ಕರೆಯುತ್ತಾರೆ. ಸಾಮಾನ್ಯ ಜನರು ಸುದ್ದಿ, ಕ್ರಿಕೆಟ್, ಎಲ್ಲ ಬಾಲಿವುಡ್ ಚಲನಚಿತ್ರಗಳು ಮತ್ತು ಅದಕ್ಕಿಂತ ಹೆಚ್ಚಿನದನ್ನು ಈ ಸಣ್ಣ ಪರದೆಯ ಮೇಲೆ ವೀಕ್ಷಿಸುತ್ತಾರೆ. ಈ ಜಾಹೀರಾತನ್ನು ನೋಡಿದ ನಂತರ, ಇದು ಅತ್ಯಂತ ಅನಿರೀಕ್ಷಿತವಾಗಿದೆ ಅನಿಸಿತು. ಇದು ಎಲ್ಲ ಟಿವಿ ಉದ್ಯಮಕ್ಕೆ ಮತ್ತು ದೂರದರ್ಶನದಲ್ಲಿ ಕೆಲಸ ಮಾಡುವ ಜನರಿಗೆ ಮಾಡಿದ ಅವಮಾನವಾಗಿದೆ ಎಂದು ನಾನು ಭಾವಿಸಿದ್ದೇನೆ ಎಂದಿದ್ದಾರೆ.

    Rasami

    ಬೋಲ್ಡ್ ಕೇರ್‌ನ ಸಹ-ಸಂಸ್ಥಾಪಕರಾಗಿರುವ ರಣವೀರ್ ಸಿಂಗ್, ಜಾಹೀರಾತಿನ ಕುರಿತು ಮಾತನಾಡುತ್ತಾ, ನನ್ನ ಖ್ಯಾತಿ ಅಥವಾ ಪ್ರಭಾವವನ್ನು ಜಾಗೃತಿ ಮೂಡಿಸಲು ಮತ್ತು ಸಕಾರಾತ್ಮಕ ಪರಿಣಾಮ ಬೀರಲು ನಾನು ಪ್ರಾಮಾಣಿಕ ಉದ್ದೇಶದಿಂದ ಬಳಸಿದ್ದೇನೆ. ಬೋಲ್ಡ್ ಕೇರ್ ಅಭಿಯಾನವು ಮಾತಿಗಿಂತ ಹೆಚ್ಚು ಮತ್ತು ನಾನು ಆಳವಾಗಿ ಸಂಪರ್ಕ ಹೊಂದಿರುವ ಒಂದು ಧ್ಯೇಯವಾಗಿದೆ ಮತ್ತು ಪುರುಷರ ಲೈಂಗಿಕ ಆರೋಗ್ಯವನ್ನು ಹೇಗೆ ಪರಿಹರಿಸುತ್ತೇವೆ ಎಂಬುದರಲ್ಲಿ ಬದಲಾವಣೆಯನ್ನು ತರಲು ನಾನು ಬಯಸಿದ್ದೇನೆ ಎಂದು ತಿಳಿಸಿದ್ದಾರೆ.

    ಅಂದಹಾಗೆ ಈ ವಿವಾದಾತ್ಮಕ ಜಾಹೀರಾತನ್ನು ತನ್ಮಯ್ ಭಟ್, ದೇವಯ್ಯ ಬೋಪಣ್ಣ ಮತ್ತು ಅವರ ತಂಡ ರಚಿಸಿದ್ದು, ಅಯಪ್ಪ ಕೆಎಂ ಎಂಬುವರು ನಿರ್ದೇಶಿಸಿದ್ದಾರೆ. (ಏಜೆನ್ಸೀಸ್​)

    ರನೌಟ್​ ಆಗಿದ್ರೂ ನಾಟೌಟ್​ ಎಂದು ತೀರ್ಪು! ಅಂಪೈರ್​ ಕೊಟ್ಟ ಕಾರಣ ಕೇಳಿದ್ರೆ ಹುಬ್ಬೇರಿಸ್ತೀರಿ…

    ಹೃದಯದ ಬಗ್ಗೆ ಕಾಳಜಿ ಇದ್ದರೆ ಈ ಆರು ಆರೋಗ್ಯಕರ ತಿಂಡಿಗಳನ್ನು ಸೇವಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts