More

    ರನೌಟ್​ ಆಗಿದ್ರೂ ನಾಟೌಟ್​ ಎಂದು ತೀರ್ಪು! ಅಂಪೈರ್​ ಕೊಟ್ಟ ಕಾರಣ ಕೇಳಿದ್ರೆ ಹುಬ್ಬೇರಿಸ್ತೀರಿ…

    ನವದೆಹಲಿ: ಕ್ರಿಕೆಟ್‌ನಲ್ಲಿ ಪ್ರತಿ ಆಟಗಾರರು ಎದುರಾಳಿ ಆಟಗಾರನ ವಿಕೆಟ್‌ ಕಬಳಿಸಲು ಸಾಕಷ್ಟು ಶ್ರಮಿಸುತ್ತಾರೆ. ಯಾವುದೇ ಸಣ್ಣ ಅವಕಾಶ ಸಿಕ್ಕರೂ ವಿಕೆಟ್ ಪಡೆಯಲು ನೋಡುತ್ತಾರೆ. ಹೀಗಿರುವಾಗ ಕ್ರಿಕೆಟ್ ಇತಿಹಾಸದಲ್ಲೇ ಇತ್ತೀಚೆಗೆ ನಡೆದ ಒಂದು ಘಟನೆಯನ್ನು ಮಾತ್ರ ಈವರೆಗೆ ಯಾರೂ ಕಂಡಿರಲಿಲ್ಲ.

    ಹೌದು, ಈ ಒಂದು ಘಟನೆಯಲ್ಲಿ ಬ್ಯಾಟರ್ ರನ್ ಔಟ್ ಆಗಿರುವು ಸ್ಪಷ್ಟವಾಗಿದೆ. ದೊಡ್ಡ ಪರದೆಯ ಮೇಲೆಯೂ ಇದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಆದರೆ, ಅಂಪೈರ್ ಮಾತ್ರ ಔಟ್ ನೀಡಲಿಲ್ಲ. ಬದಲಾಗಿ ನಾಟೌಟ್ ಎಂದು ತೀರ್ಪು ನೀಡಿದರು. ಇದರಿಂದ ಫೀಲ್ಡಿಂಗ್ ತಂಡ ಒಂದು ಕ್ಷಣ ಶಾಕ್​ ಆಯಿತು. ಈ ಘಟನೆ ಯಾವುದೋ ಗಲ್ಲಿ ಕ್ರಿಕೆಟ್‌ನಲ್ಲಿ ನಡೆದಿದೆ ಎಂದು ನೀವು ಭಾವಿಸಿದರೆ ಅದು ತಪ್ಪು. ಏಕೆಂದರೆ ಈ ಘಟನೆ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವೊಂದರಲ್ಲಿ ನಡೆದಿದೆ. ಇದು ಕೆಲವು ಸಣ್ಣ ತಂಡಗಳ ನಡುವಿನ ಪಂದ್ಯವೂ ಅಲ್ಲ. ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್​ನಂತಹ ದೈತ್ಯ ತಂಡಗಳ ನಡುವೆ ಅಡಿಲೇಡ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಈ ವಿಚಿತ್ರ ಹಾಗೂ ವಿನೂತನ ಘಟನೆ ನಡೆದಿದೆ.

    ಅಡಿಲೇಡ್​ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ನಿಗದಿತ 20 ಓವರ್​ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 241 ರನ್ ಗಳಿಸಿತು. ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ (120) ಸ್ಫೋಟಕ ಶತಕ ಸಿಡಿಸಿದರು. ಟಿಮ್ ಡೇವಿಡ್ (ಅಜೇಯ 31) ಮತ್ತು ಮಿಚೆಲ್ ಮಾರ್ಷ್ (29) ಮಿಂಚಿದರು. ವೆಸ್ಟ್ ಇಂಡೀಸ್ ಬೌಲರ್‌ಗಳಲ್ಲಿ ಜೇಸನ್ ಹೋಲ್ಡರ್ ಎರಡು ವಿಕೆಟ್ ಪಡೆದರೆ, ಅಲ್ಜಾರಿ ಜೋಸೆಶ್ ಮತ್ತು ರೊಮಾರಿಯೋ ಶೆಫರ್ಡ್ ತಲಾ ಒಂದು ವಿಕೆಟ್ ಪಡೆದರು.

    ಬಳಿಕ ವೆಸ್ಟ್ ಇಂಡೀಸ್ ತಂಡ ನಿಗದಿತ 20 ಓವರ್​ಗಳಲ್ಲಿ ಒಂಬತ್ತು ವಿಕೆಟ್ ಕಳೆದುಕೊಂಡು 207 ರನ್ ಗಳಿಸಿತು. ಈ ಮೂಲಕ 34 ರನ್‌ಗಳಿಂದ ಸೋಲು ಕಂಡಿತು. ವೆಸ್ಟ್ ಇಂಡೀಸ್ ಪರ ರೋಮನ್ ಪೊವೆಲ್ (63) ಅರ್ಧಶತಕ ಗಳಿಸಿದರು. ಆಸೀಸ್ ಬೌಲರ್‌ಗಳ ಪೈಕಿ ಮಾರ್ಕಸ್ ಸ್ಟೊಯಿನಿಸ್ ಮೂರು ವಿಕೆಟ್ ಪಡೆದರೆ, ಜೋಶ್ ಹ್ಯಾಜಲ್‌ವುಡ್ ಮತ್ತು ಸ್ಪೆನ್ಸರ್ ಜಾನ್ಸನ್ ತಲಾ ಎರಡು ವಿಕೆಟ್ ಪಡೆದರು. ಜೇಸನ್ ಬೆಹ್ರೆಂಡಾರ್ಫ್ ಮತ್ತು ಆಡಮ್ ಜಂಪ್ ತಲಾ ಒಂದು ವಿಕೆಟ್ ಪಡೆದರು.

    ನಡೆದಿದ್ದೇನು?
    ಆಸಿಸ್​ ನೀಡಿದ ಗುರಿಯನ್ನು ವಿಂಡೀಸ್ ಬೆನ್ನಟ್ಟಿದಾಗ ಇನ್ನಿಂಗ್ಸ್‌ನ 19ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. 19ನೇ ಓವರ್ ಅನ್ನು ಸ್ಪೆನ್ಸರ್ ಜಾನ್ಸನ್ ಎಸೆದರು. ಈ ಓವರ್‌ನ ಮೂರನೇ ಎಸೆತವನ್ನು ಬಾರಿಸಿದ ವಿಂಡೀಸ್ ಬ್ಯಾಟ್ಸ್‌ಮನ್ ಅಲ್ಜಾರಿ ಜೋಸೆಫ್, ರನ್ ಗಳಿಸಲು ಪ್ರಯತ್ನಿಸಿದರು. ಕವರ್‌ ವಿಭಾಗದಲ್ಲಿ ಚೆಂಡನ್ನು ಹಿಡಿದ ಟಿಮ್ ಡೇವಿಡ್, ನಾನ್ ಸ್ಟ್ರೈಕರ್‌ ವಿಭಾಗದಲ್ಲಿದ್ದ ಬೌಲರ್ ಸ್ಪೆನ್ಸರ್ ಜಾನ್ಸನ್‌ ಕೈಗೆ ಎಸೆದರು. ಫೀಲ್ಡರ್‌ನಿಂದ ಚೆಂಡು ಹಿಡಿದ ಜಾನ್ಸನ್ ಬೇಗನೆ ವಿಕೆಟ್​ಗೆ ತಾಗಿಸಿದರು. ಆಗ ಅಲ್ಜಾರಿ ಜೋಸೆಫ್ ಇನ್ನೂ ಕ್ರೀಸ್ ತಲುಪಿರಲಿಲ್ಲ.

    ಆಸೀಸ್ ಆಟಗಾರರು ಜಾನ್ಸನ್ ಔಟಾಗಿದೆ ಎಂದು ಭಾವಿಸಿ ಸಂಭ್ರಮಾಚರಣೆ ಆರಂಭಿಸಿದರು. ಈ ಸಂತೋಷದಲ್ಲಿ ಅವರು ಮನವಿ ಮಾಡುವುದನ್ನು ಸಹ ಮರೆತರು. ಇದರೊಂದಿಗೆ ಫೀಲ್ಡ್ ಅಂಪೈರ್ ಪರಿಶೀಲನೆ ನಡೆಸಿ ಯಾವುದೇ ನಿರ್ಧಾರ ಪ್ರಕಟಿಸಲಿಲ್ಲ. ಇದರಿಂದ ಆಸೀಸ್ ಆಟಗಾರರು ಬೆಚ್ಚಿಬಿದ್ದರು. ಏನಾಯಿತು ಎಂದು ಅವರು ಅಂಪೈರ್‌ ಬಳಿ ಕೇಳಿದರು. ಅಲ್ಲದೆ, ನಾನು ಮೇಲ್ಮನವಿ ಸಲ್ಲಿಸಿದ್ದೇನೆ ಎಂದು ಟೀಮ್​ ಡೇವಿಡ್​ ಹೇಳಿದರು. ಆದರೆ, ಮರುಪರಿಶೀಲನೆ ಮಾಡಿದ ಅಂಪೈರ್​, ಯಾರೊಬ್ಬರು ಕೂಡ ಮೇಲ್ಮನವಿ ಸಲ್ಲಿಸಿಲ್ಲ ಎಂದು ಹೇಳಿ, ನಾಟೌಟ್​ ನೀಡಿದರು. ಆಸಿಸ್​ ಆಟಗಾರರು ಏನು ಮಾಡಲಾಗದೇ ನಗುತ್ತಾ ಸುಮ್ಮನಾದರು. ಆ ವೇಳೆಗೆ ಆಸೀಸ್ ಗೆಲುವು ಖಚಿತವಾಗಿತ್ತು. ಈ ಕ್ರಮಾಂಕದಲ್ಲಿ ಅಲ್ಜಾರಿ ಜೋಸೆಫ್ ಔಟಾಗದೆ ಬ್ಯಾಟಿಂಗ್ ಮಾಡಿದರು.

    ಅಂದಹಾಗೆ ಜೋಸೆಫ್ ಅವರು ಔಟಾಗಿದ್ದರೂ ಯಾವುದೇ ಮನವಿಯಿಲ್ಲದ ಕಾರಣ ಔಟಾಗದೇ ಉಳಿದುಕೊಂಡ ಆಟಗಾರನಾಗಿ ಕ್ರಿಕೆಟ್ ಇತಿಹಾಸದಲ್ಲಿ ದಾಖಲಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಸೀಸ್ ಆಟಗಾರರ ಕಡೆ ಗೆಲುವು ಮೊದಲೇ ವಾಲಿದ್ದರಿಂದ ಇದು ವಿವಾದವಾಗಲಿಲ್ಲ. ಒಂದು ವೇಳೆ ವಿಂಡೀಸ್​ ಗೆದ್ದಿದ್ದರೆ ಇದು ದೊಡ್ಡ ವಿವಾದವೇ ಆಗುತ್ತಿತ್ತು ಎಂದು ನೆಟ್ಟಿಗರು ಕಾಮೆಂಟ್​ ಮೂಲಕ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

    ಐಸಿಸಿ ನಿಯಮ ಸೆಕ್ಷನ್ 31.1 ರ ಪ್ರಕಾರ, ಅಂಪೈರ್‌ಗಳು ಮೇಲ್ಮನವಿ ಇಲ್ಲದೆ ಬ್ಯಾಟರ್ ಅನ್ನು ಔಟ್ ಎಂದು ಘೋಷಿಸಲು ಸಾಧ್ಯವಿಲ್ಲ. (ಏಜೆನ್ಸೀಸ್​)

    ಮೊದಲ ರಾತ್ರಿ ಕಾಮೋತ್ತೇಜಕ ಮಾತ್ರೆ ಸೇವಿಸಿದ ಗಂಡ! ನಂತರ ನಡೆದಿದ್ದು ಘೋರ ದುರಂತ

    ಲೋಕ ಸಮರ 2024: ಗಡಿನಾಡಲ್ಲಿ ಶುರುವಾಗಿದೆ ಹೈವೋಲ್ಟೇಜ್ ಪಾಲಿಟಿಕ್ಸ್! ಕುಂದಾನಗರಿಯ ಸಿಹಿ ಯಾರಿಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts