More

    ನನ್ನ ಚಿತ್ರದಲ್ಲಿನ ಸೆಕ್ಸ್ ದೃಶ್ಯಗಳಿಂದ ರೇಪ್​ಗಳಾಗುತ್ತಿಲ್ಲ; ನೆಟ್ಟಿಗನಿಗೆ ಸ್ವರಾ ತರಾಟೆ

    ಮುಂಬೈ: ಹಾಥರಸ್​ ಅತ್ಯಾಚಾರ ಸಂತ್ರಸ್ತೆಗೆ ನ್ಯಾಯ ಸಿಗಬೇಕು ಎಂಬ ಕಾರಣಕ್ಕೆ ಹಮ್ಮಿಕೊಂಡಿದ್ದ ರ್ಯಾಲಿಯಲ್ಲಿ ಬಾಲಿವುಡ್​ ನಟಿ ಸ್ವರಾ ಭಾಸ್ಕರ್​ ಭಾಗವಹಿಸಿದ್ದ ಬೆನ್ನಲ್ಲೇ ನೆಟ್ಟಿಗನೋರ್ವ ನಟಿಯ ಸಿನಿಮಾ ವೃತ್ತಾಂತವನ್ನು ಖಂಡಿಸಿದ್ದಾನೆ.

    ಇದನ್ನೂ ನೋಡಿ: ಮತ್ತೆ ಶುರುವಾಯ್ತು ‘ಆರ್​ಆರ್​ಆರ್​’ ಶೂಟಿಂಗ್​ … ಹಾಗಂತ ಖುಷಿಪಡಬೇಡಿ

    ‘ಇಡೀ ದೇಶ ಇದೀಗ ತಲೆತಗ್ಗಿಸುವಂತಾಗಿದೆ. ಆದರೆ ಈ ನಟಿ ಸ್ವರಾ ಭಾಸ್ಕರ್ ರಸ್​ಬರಿ ಚಿತ್ರದ ಮೂಲಕ ಸೆಕ್ಸ್ ಮತ್ತು ಕಾಮ ಪ್ರಚೋದಕ ರೀತಿಯಲ್ಲಿ ಕಾಣಿಸಿಕೊಂಡು ಅತ್ಯಾಚಾರ ಹೆಚ್ಚಾಗಲು ಕಾರಣರಾಗಿದ್ದಾರೆ’ ಎಂದು ಟ್ವೀಟ್​ ಮಾಡಿದ್ದ.

    ನೆಟ್ಟಿಗನ ಆ ಮಾತಿಗೆ ಪ್ರತಿಕ್ರಿಯಿಸಿರುವ ಸ್ವರಾ, ‘ಈ ನಿಮ್ಮ ಯೋಚನೆ ತಪ್ಪು. ಸಹಮತದ ಸೆಕ್ಸ್ ಬಗ್ಗೆ ನಾನಿಲ್ಲಿ ಮಾತನಾಡುತ್ತಿಲ್ಲ. ಅದು ಅತ್ಯಂತ ನೈಸರ್ಗಿಕ ವಿಚಾರ. ನೀವು ಹುಟ್ಟಿದ್ದೂ ಹೀಗೆ. ಆದರೆ, ಅತ್ಯಾಚಾರ ಹಾಗಲ್ಲ. ದುರುಪಯೋಗ ಮತ್ತು ಬಲವಂತದಿಂದ ಕೂಡಿದೆ. ಅಲ್ಲಿ ಸಹಮತ ಇರುವುದಿಲ್ಲ. ಈ ಎರಡರ ವ್ಯತ್ಯಾಸವನ್ನು ಅರ್ಥ ಮಾಡಿಕೊಳ್ಳಿ’ ಎಂದಿದ್ದಾರೆ.

    ಇದನ್ನೂ ನೋಡಿ: ಸಂಭಾವನೆ ಕಡಿಮೆ ಮಾಡಿಕೊಂಡ ಶಾಹೀದ್​ … ಹೊಸ ಸಂಭಾವನೆ ಎಷ್ಟು?

    ‘ಅತ್ಯಾಚಾರಗಳು ಹೆಚ್ಚಾಗುವುದಕ್ಕೆ ನಾನು ಮಾಡಿದ ಪಾತ್ರಗಳು ಕಾರಣವಲ್ಲ. ನಿಮ್ಮ ಮನಸ್ಥಿತಿ ಮತ್ತು ಚಿಂತನೆ ಕಾರಣ. ವಿಚಾರ ಮಾಡಿ ಮಾತನಾಡಿ’ ಎಂದೂ ಸ್ವರಾ ಹೇಳಿದ್ದಾರೆ. (ಏಜೆನ್ಸೀಸ್​)

    ಅತ್ಯಂತ ಹಿತವಾದ ಜಾಗ ಯಾವುದು ಗೊತ್ತಾ? ಕಂಗನಾ ಹೇಳ್ತಾರೆ ಕೇಳಿ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts