More

    ಫೇಸ್​ ಮಾಸ್ಕ್​ ಧರಿಸಲ್ಲ ಎಂದು ಅತ್ಯಾಚಾರ​ ಸಂತ್ರಸ್ತೆಯರ ಅಳಲು: ಇದರ ಹಿಂದಿದೆ ನೋವಿನ ಕಹಾನಿ!

    ನವದೆಹಲಿ: ಮಹಾಮಾರಿ ಕರೊನಾ ವೈರಸ್​ನಿಂದ ಪಾರಾಗಲು ಅನೇಕ ರಾಷ್ಟ್ರಗಳಲ್ಲಿ ಫೇಸ್​ ಮಾಸ್ಕ್​ ಕಡ್ಡಾಯವಾಗಿದೆ. ಹೀಗಿರುವಾಗ ಕೆಲ ಅತ್ಯಾಚಾರ ಸಂತ್ರಸ್ತೆಯರು ಮಾಸ್ಕ್​ ಧರಿಸಲು ಸಾಧ್ಯವಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

    ಮಾಸ್ಕ್​ ಧರಿಸುವುದರಿಂದ ಹಿಂದಿನ ಕಹಿ ಘಟನೆಗಳು ನೆನಪಾಗುತ್ತವೆ. ಒಂದು ವೇಳೆ ಮಾಸ್ಕ್​ ಧರಿಸದೇ ಇದ್ದರೆ ಅಪರಿಚಿತರು ನಮ್ಮನ್ನು ಟ್ರೋಲ್​ ಮಾಡುತ್ತಾರೆ. ನಾವೇನು ಮಾಡುವುದು ಎನ್ನುವ ಗೊಂದಲದಲ್ಲಿದ್ದೇವೆ. ಇದರಿಂದ ಮಾನಸಿಕ ಖಿನ್ನತೆ ಭಯ ಕಾಡುತ್ತಿರುವುದಾಗಿ ಅತ್ಯಾಚಾರ ಸಂತ್ರಸ್ತೆಯರು ನೋವನ್ನು ಹೊರಹಾಕಿದ್ದಾರೆ.

    ಇನ್ನೊಂದೆಡೆ ಕೆಲವೆಡೆ ಮಾಸ್ಕ್​ ಕ್ರೋಧ ಹೆಚ್ಚಾಗುತ್ತಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಅಥವಾ ಶಾಪ್​ಗಳಲ್ಲಿ ಮಾಸ್ಕ್​ ಧರಿಸದಿದ್ದಾರೆ ಅವಮಾನಿಸುತ್ತಾರೆ. ಹೀಗಾಗಿ ಹೋಗಲು ಇಚ್ಛಿಸುವ ಸ್ಥಳಕ್ಕೂ ಸಹ ನಮ್ಮಿಂದ ಹೋಗಲು ಆಗುತ್ತಿಲ್ಲ. ಎಲ್ಲಿ ಮಾಸ್ಕ್​ ಧರಿಸಿಲ್ಲ ಎಂದು ಅವಮಾನಿಸುತ್ತಾರೋ ಎಂದು ಮನೆಯಲ್ಲೇ ಕಾಲ ಕಳೆಯುವಂತಾಗಿದೆ ಎಂಬುದು ಅತ್ಯಾಚಾರ ಸಂತ್ರಸ್ತೆಯರು ಅಳಲು.

    ಅತ್ಯಾಚಾರ ಸಂತ್ರಸ್ತೆಯರ ಮೇಲಿನ ದಾಳಿಯ ವೇಳೆ ಬಾಯಿ ಹಾಗೂ ಮೂಗು ಮುಚ್ಚಿದ ಉಸಿರುಗಟ್ಟಿಸಿದ ಅನುಭವವೂ ಆಗಿರುತ್ತದೆ. ಹೀಗಾಗಿ ಮಾಸ್ಕ್​ನಿಂದ ಬಾಯಿ ಮತ್ತು ಮೂಗು ಮುಚ್ಚಿಕೊಳ್ಳುವುದರಿಂದಲೂ ಹಿಂದಿನ ಕಹಿ ಘಟನೆಗಳು ನೆನಪಾಗಿ, ಮಾನಸಿಕವಾಗಿ ಕಾಡುತ್ತವೆ. ಇದು ಖಿನ್ನತೆಗೂ ದೂಡುತ್ತದೆ ಎಂದು ಚಾರಿಟಿ ಸಂಸ್ಥೆಯೊಂದರ ವಕ್ತಾರೆ ಕೇಟ್​ ರಸೆಲ್​ ಎಂಬಾಕೆ ದಿ ಗಾರ್ಡಿಯನ್​ ಪತ್ರಿಕೆಗೆ ಹೇಳಿಕೆ ನೀಡಿದ್ದಾರೆ.

    ಇನ್ನು ಸಂತ್ರಸ್ತೆಯರಿಗೆ ಮಾಸ್ಕ್​ ಧರಿಸುವುದರಿಂದ ಕಾನೂನು ವಿನಾಯಿತಿ ನೀಡಿದ್ದರೂ ಸಹ ಅದನ್ನು ಪಾಲಿಸುವುದು ಕಷ್ಟವೇ ಸರಿ. ತಮ್ಮಲ್ಲಿನ ಪೂರ್ವಾಗ್ರಹ ಆಲೋಚನೆಗಳು ಸಹ ಅದಕ್ಕೆ ಇನ್ನಷ್ಟು ತೊಂದರೆಯಾಗುತ್ತದೆ ಎಂಬುದೇ ಅವರ ನೋವಾಗಿದೆ.

    ಇನ್ನು ಸಂತ್ರಸ್ತೆಯೊಬ್ಬಳು ಮಾತನಾಡಿ, ನನ್ನ ಮೇಲೆ ದಾಳಿಯಾದಾಗ ಅತ್ಯಾಚಾರಿಯ ಕೈ ನನ್ನ ಬಾಯಿ ಮೇಲಿತ್ತು. ಅದು ಆಮ್ಲಜನಕದ ಮಾಸ್ಕೇ ಆಗಿರಬಹುದು ನನ್ನ ಬಾಯಿಯ ಮೇಲೆ ಏನೇ ಇದ್ದರು ಅದು ನನ್ನ ಕಹಿ ಘಟನೆಯನ್ನು ನೆನಪಿಸುತ್ತದೆ. ತಕ್ಷಣ ನನ್ನನ್ನು ಖಿನ್ನತೆಗೆ ದೂಡುತ್ತದೆ ಎಂದಿದ್ದಾರೆ. (ಏಜೆನ್ಸೀಸ್​)

    ಗಾರೆ ಕೆಲಸ ಮಾಡುತ್ತ ಗುಡಿಸಲಿನಲ್ಲೇ ಓದಿ ಶೇ.98.5 ಫಲಿತಾಂಶ ಪಡೆದ ಮಹೇಶ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts