More

  ಗಂಗೂಬಾಯಿ ಜತೆಯಾದ ರಣವೀರ್

  ಸಂಜಯ್ ಲೀಲಾ ಬನ್ಸಾಲಿ ಅವರ ಮಹತ್ವಾಕಾಂಕ್ಷೆಯ ಚಿತ್ರ `ಗಂಗೂಬಾಯಿ ಕತಿಯಾವಾಡಿ’ಯ ಚಿತ್ರೀಕರಣ ಇಷ್ಟರಲ್ಲಾಗಲೇ ಮುಗಿದಿರಬೇಕಿತ್ತು. ಆದಷ್ಟು ಬೇಗ ಚಿತ್ರೀಕರಣ ಮುಗಿಸಿ, ಸೆಪ್ಟೆಂಬರ್‍ನಲ್ಲಿ ಚಿತ್ರ ಬಿಡುಗಡೆ ಮಾಡುವುದು ಬನ್ಸಾಲಿ ಪ್ಲಾನ್ ಆಗಿತ್ತು. ಆದರೆ, ಲಾಕ್‍ಡೌನ್‍ನಿಂದಾಗಿ ಅವರ ಯೋಜನೆಗಳೆಲ್ಲಾ ತಲೆಕೆಳಗಾಗಿವೆ.

  ಇದನ್ನೂ ಓದಿ: ಕಂಗನಾ ವಿಷಯದಲ್ಲಿ ಉಲ್ಟಾ ಹೊಡೆದ ಅಧ್ಯಯನ್ …

  ಈ ಮಧ್ಯೆ, `ಗಂಗೂಬಾಯಿ ಕತಿಯಾವಾಡಿ’ ಚಿತ್ರದಿಂದ ಒಂದು ಮಹತ್ವದ ಸುದ್ದಿ ಬಂದಿದೆ. ಇಷ್ಟು ದಿನ ಚಿತ್ರದಲ್ಲಿ ಆಲಿಯಾ ಭಟ್ ಮಾತ್ರ ನಟಿಸುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಇದೀಗ ರಣವೀರ್ ಸಹ ಒಂದು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸುದ್ದಿಯಾಗಿದೆ. ರಣವೀರ್ ಅವರ ಪಾತ್ರ ಚಿಕ್ಕದಾದರೂ, ಬಹಹಳ ಪ್ರಮುಖವಾಗಿದೆ ಎಂದು ಹೇಳಲಾಗುತ್ತಿದೆ.

  ಚಿತ್ರದಲ್ಲಿ ಇಂಥದ್ದೊಂದು ಪಾತ್ರವಿದೆ ಎಂದು ಬನ್ಸಾಲಿ ಅವರು ಫೋನ್ ಮಾಡಿ ಹೇಳಿದಾಗ, ರಣವೀರ್ ತಕ್ಷಣ ಒಪ್ಪಿಕೊಂಡಿದ್ದಾರೆ. ಕಾರಣ, ರಣವೀರ್‍ರ ಇವತ್ತಿನ ಸ್ಥಿತಿಗೆ ಮತ್ತು ಅವರು ಚಿತ್ರಂಗದಲ್ಲಿ ದೊಡ್ಡ ಬ್ರೇಕ್ ಪಡೆಯುವುದಕ್ಕೆ ಕಾರಣವೇ ಬನ್ಸಾಲಿ. ಈ ಹಿಂದೆ ಬನ್ಸಾಲಿ ನಿರ್ದೇಶನದ `ರಾಮ್-ಲೀಲಾ’, `ಪದ್ಮಾವತ್’ ಮತ್ತು `ಬಾಜಿರಾವ್ ಮಸ್ತಾನಿ’ ಚಿತ್ರಗಳಲ್ಲಿ ನಟಿಸಿದ್ದ ರಣವೀರ್, ಆ ಮೂರೂ ಚಿತ್ರಗಳಿಂದ ಯಶಸ್ಸು ಮತ್ತು ಜನಪ್ರಿಯತೆ ಗಳಿಸಿದ್ದರು. ಹಾಗಾಗಿ ಬನ್ಸಾಲಿ ಹೇಳಿದರೆ ರಣವೀರ್ ಇಲ್ಲಾ ಎನ್ನುತ್ತಾರೆಯೇ? ತಕ್ಷಣ ಒಪ್ಪಿಕೊಂಡಿದ್ದಾರೆ.

  ಇನ್ನು ಎರಡನೆಯ ಕಾರಣ ಆಲಿಯಾ ಭಟ್. ಇದಕ್ಕೂ ಮುನ್ನ ಕಳೆದ ವರ್ಷ ಬಿಡುಗಡೆಯಾದ `ಗಲ್ಲಿ ಬಾಯ್’ ಚಿತ್ರದಲ್ಲೂ ರಣವೀರ್ ಮತ್ತು ಆಲಿಯಾ ಜತೆಯಾಗಿ ನಟಿಸಿದ್ದರು. ಅಷ್ಟೇ ಅಲ್ಲ, ಕರಣ್ ಜೋಹರ್ ನಿರ್ಮಾಣದ `ತಖ್ತ್’ ಎಂಬ ಚಿತ್ರದಲ್ಲೂ ಜತೆಯಾಗಿ ನಟಿಸುತ್ತಿದ್ದಾರೆ. ಈಗ `ಗಂಗೂಬಾಯಿ ಕತಿಯಾವಾಡಿ’ ಚಿತ್ರದಲ್ಲಿ ಮತ್ತೆ ಇಬ್ಬರೂ ಜತೆಯಾಗಿ ನಟಿಸಲಿದ್ದಾರೆ.

  ಇದನ್ನೂ ಓದಿ: VIDEO| ವಿಡಿಯೋ ಕಾಲ್​ ಮೂಲಕ ಅಭಿಮಾನಿಗೆ ಧೈರ್ಯ ತುಂಬಿದ ಮಾಣಿಕ್ಯ!

  `ಗಂಗೂಬಾಯಿ ಕತಿಯಾವಾಡಿ’ ಚಿತ್ರವು ಜನಪ್ರಿಯ ಪತ್ರಕರ್ತ ಹುಸೈನ್ ಜೈದಿ ಅವರ `ಮಾಫಿಯಾ ಕ್ವೀನ್ಸ್ ಆಫ್ ಮುಂಬೈ’ನಿಂದ ಆಧರಿಸಿದ್ದು, ಬನ್ಸಾಲಿ ಚಿತ್ರಕಥೆ ಬರೆಯುವುದರ ಜತೆಗೆ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಅರ್ಧ ಭಾಗದ ಚಿತ್ರೀಕರಣವಾಗಿದ್ದು, ಕರೊನಾ ಹಾವಳಿ ಕಡಿಮೆಯಾಗುತ್ತಿದ್ದಂತೆಯೇ ಚಿತ್ರೀಕರಣ ಮುಂದುವರೆಯಲಿದೆ.

  ಆ್ಯಕ್ಷನ್​ ಸಿನಿಮಾ ‘ಧಾಕಡ್​’ಗೆ ಕಂಗನಾ ಹೇಗೆ ರೆಡಿಯಾಗ್ತಿದ್ದಾರೆ ನೋಡಿ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts