More

    ನಾಳೆ ಬೆಂಗಳೂರಿಗೆ ಬರಲಿದೆ RRR ಚಿತ್ರತಂಡ; ರಾಮ್​​ ಚರಣ್, ಜೂ.ಎನ್​ಟಿಆರ್ ಜೊತೆ ಆಲಿಯಾ ಭಟ್ ಆಗಮನ

    ಬೆಂಗಳೂರು: ಇಡೀ ಭಾರತೀಯ ಚಿತ್ರರಂಗ ಕಾತುರದಿಂದ ಕಾಯುತ್ತಿರುವ ಬಹು ನಿರೀಕ್ಷಿತ ಪ್ಯಾನ್​ ಇಂಡಿಯಾ ಚಿತ್ರ ಆರ್​​ಆರ್​ಆರ್​ (RRR) ಜನವರಿ 07 2022 ರಂದು ತೆರೆಕಾಣಲಿದೆ. ಈಗಿನಿಂದಲೇ ಸಿನಿಮಾ ತಂಡ ಪ್ರಮೋಷನ್​ ಮಾಡುತ್ತಿದೆ. ಅದರಂತೆ ನಾಳೆ (10) ಬೆಂಗಳೂರಿಗೆ ಇಡೀ ಆರ್​ಆರ್​ಆರ್ ಸಿನಿಮಾ ತಂಡ ಆಗಮಿಸಲಿದೆ.

    ನಿರ್ದೇಶಕ ರಾಜಮೌಳಿ, ತೆಲುಗು ಸಿನಿಮಾ ರಂಗದ ಇಬ್ಬರು ಸೂಪರ್​ ಸ್ಟಾರ್​ ಮೊದಲ ಬಾರಿಗೆ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ರಾಮ್​​ ಚರಣ್ ಹಾಗೂ ಜೂ.ಎನ್​ಟಿಆರ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾ ಅನೌನ್ಸ್​ ಆದಾಗಿನಿಂದಲೂ ಸಿನಿಮಾ ಮೇಲಿರುವ ಕುತೂಹಲ ಹೆಚ್ಚುತ್ತಲೇ ಇದೆ.

    ಒರಾಯನ್ ಮಾಲ್​ನಲ್ಲಿ ಪತ್ರಿಕಾಗೋಷ್ಠಿ:

    ದಿನಾಂಕ: 10-12-2021 ಶುಕ್ರವಾರ ಬೆಳಗ್ಗೆ 10:30ಕ್ಕೆ RRR ಸಿನಿಮಾದ ಪತ್ರಿಕಾಗೋಷ್ಠಿ ಪ್ರಾರಂಭವಾಗಲಿದೆ. ನಿರ್ದೇಶಕ ರಾಜಮೌಳಿ, ಜೂನಿಯರ್ ಎನ್ ಟಿ ಆರ್, ರಾಮ್ ಚರಣ್, ಆಲಿಯಾ ಭಟ್ ಕೂಡ ಆಗಮಿಸಲಿದ್ದಾರೆ. ರಾಜಾಜಿನಗರದ ಒರಾಯನ್ ಮಾಲ್​ನಲ್ಲಿ ಪತ್ರಿಕಾಗೋಷ್ಠಿ ನಡೆಯಲಿದೆ ಎಂಬ ಮಾಹಿತಿಯನ್ನು ಚಿತ್ರತಂಡ ಹೊರಹಾಕಿದೆ.

    ಶಾಲೆಗಳಲ್ಲಿ ಮೊಟ್ಟೆ ವಿತರಣೆಗೆ ಪೇಜಾವರ ಶ್ರೀಗಳ ತೀವ್ರ ವಿರೋಧ: ಇದು ಜೀವನಶೈಲಿ ಬದಲಿಸುವ ಕೃತ್ಯ ಎಂದ ಸ್ವಾಮೀಜಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts