More

    ನೆಟ್​ಫ್ಲಿಕ್ಸ್​ ಕಾರ್ಯಕ್ರಮದಲ್ಲಿ ಬೇರ್​ ಗ್ರಿಲ್ಸ್​ ಜತೆಗೆ ರಣವೀರ್​ ಸಿಂಗ್​!

    ಮುಂಬೈ: ಬಾಲಿವುಡ್​ ನಟ ರಣವೀರ್​ ಸಿಂಗ್​ ಯಾವಾಗ ಓಟಿಟಿಗೆ ಎಂಟ್ರಿ ಕೊಡುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇತ್ತು. ಏಕೆಂದರೆ, ಅವರ ಸೀನಿಯರ್​ ಮತ್ತು ಜ್ಯೂನಿಯರ್​ಗಳೆಲ್ಲ ಓಟಿಟಿಯಲ್ಲಿ ಗುರುತಿಸಿಕೊಂಡಿದ್ದರೂ, ರಣವೀರ್​ ಸಿಂಗ್​ ಮಾತ್ರ ಇದುವರೆಗೂ ಯಾವುದೇ ವೆಬ್​ಸೀರೀಸ್​ ಅಥವಾ ಕಾರ್ಯಕ್ರಮದಲ್ಲೂ ಕಾಣಿಸಿಕೊಂಡಿರಲಿಲ್ಲ.

    ಇದನ್ನೂ ಓದಿ: ಪ್ರಜ್ವಲ್ ಹುಟ್ಟುಹಬ್ಬಕ್ಕೆ PD 35 ಫಸ್ಟ್ ಲುಕ್ ಹಾಗೂ ಶೀರ್ಷಿಕೆ ಅನಾವರಣ …

    ಈಗ ಅದಕ್ಕೂ ಮುಹೂರ್ತ ಬಂದಿದೆ. ನೆಟ್​ಫ್ಲಿಕ್ಸ್​ಗಾಗಿ ಬೇರ್​ ಗ್ರಿಲ್ಸ್​ ನಡೆಸಿಕೊಡುತ್ತಿರುವ ಒಂದು ವಿಶೇಷ ಕಾರ್ಯಕ್ರಮದಲ್ಲಿ ರಣವೀರ್​ ಭಾಗವಹಿಸಲಿದ್ದಾರೆ. ಜುಲೈ ಮತ್ತು ಆಗಸ್ಟ್​ನಲ್ಲಿ ಸೈಬೀರಿಯಾದಲ್ಲಿ ನಡೆಯುವ ಈ ನಾನ್​-ಫಿಕ್ಷನ್​ ಕಾರ್ಯಕ್ರಮದ ಚಿತ್ರೀಕರಣದಲ್ಲಿ ರಣವೀರ್​ ಭಾಗವಹಿಸಲಿದ್ದಾರೆ ಎಂಬ ಸುದ್ದಿಯೊಂದು ಬಂದಿದೆ.

    ಈ ಬೇರ್​ ಗ್ರಿಲ್ಸ್​ ಯಾರು ಗೊತ್ತಲ್ಲ? ಮೂಲತಃ ಬ್ರಿಟಿಷ್​ ಸಾಹಸಿಯಾಗಿರುವ ಗ್ರಿಲ್ಸ್​​, ಕಾಡುಮನುಷ್ಯನೆಂದೇ ಜನಪ್ರಿಯ. ಜಗತ್ತಿನ ಅಭಯಾರಣ್ಯಗಳಿಗೆ ಭೇಟಿ ಕೊಡುವ ಗ್ರಿಲ್ಸ್​ ಅಲ್ಲಿ ಅಪರೂಪದ ಕಾರ್ಯಕ್ರಮಗಳನ್ನು ಮಾಡುತ್ತಿರುತ್ತಾರೆ. ಹಲವು ಪ್ರಾಣಿ-ಪಕ್ಷಿಗಳನ್ನು ಪರಿಚಯಿಸುತ್ತಿರುತ್ತಾರೆ. ಅವರ ‘ಇನ್​ಟು ದಿ ವೈಲ್ಡ್​’ ಕಾರ್ಯಕ್ರಮವು ಬಹಳ ಜನಪ್ರಿಯವಾಗಿದ್ದು, ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಜನಿಕಾಂತ್​, ಅಕ್ಷಯ್​ ಕುಮಾರ್​ ಮುಂತಾದವರು ಕಾಣಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಮಂದಿರಾ ಬೇಡಿ ಪತಿ ರಾಜ್​ ಕೌಶಲ್​ ಹೃದಯಾಘಾತದಿಂದ ನಿಧನ

    ಈಗ ಗ್ರಿಲ್ಸ್​ ಇನ್ನೊಂದು ಹೊಸ ಕಾರ್ಯಕ್ರಮ ರೂಪಿಸಿದ್ದು, ನೆಟ್​ಫ್ಲಿಕ್ಸ್​ಗಾಗಿ ಅದನ್ನು ಮಾಡಿಕೊಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ರಣವೀರ್ ಸಿಂಗ್​ ಸರಿ ಎಂದು ಪರಿಗಣಿಸಲಾಗಿದ್ದು, ಅವರು ಸಹ ಒಪ್ಪಿಕೊಂಡಿದ್ದಾರೆ. ಈಗಾಗಲೇ ಚಿತ್ರೀಕರಣಕ್ಕೆ ಸಿದ್ಧತೆ ನಡೆದಿದ್ದು, ಜುಲೈನಿಂದ ಅಧಿಕೃತವಾಗಿ ಚಿತ್ರೀಕರಣ ನಡೆಯಲಿದೆ.

    ‘ಸಂಜು’ ಚಿತ್ರದಲ್ಲಿ ಸುನೀಲ್​ ದತ್​ ಪಾತ್ರ ಮಾಡಬೇಕಿತ್ತಂತೆ ಆಮೀರ್​ ಖಾನ್​ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts