More

    ರಣಜಿ ಟ್ರೋಫಿ ಪರಿಷ್ಕೃತ ವೇಳಾಪಟ್ಟಿ ಸಿದ್ಧ, ಸ್ವರೂಪವನ್ನೂ ಬದಲಾಯಿಸಿದ ಬಿಸಿಸಿಐ

    ನವದೆಹಲಿ: ಕರೊನಾ ಹಾವಳಿಯಿಂದಾಗಿ ಮುಂದೂಡಲ್ಪಟ್ಟಿದ್ದ 2021-22ರ ಸಾಲಿನ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಫೆಬ್ರವರಿ 6ರಿಂದ ಮಾರ್ಚ್ 5ರವರೆಗೆ ನಡೆಯಲಿವೆ.

    ಪರಿಷ್ಕೃತ ವೇಳಾಪಟ್ಟಿಯ ಅನ್ವಯ 38 ತಂಡಗಳ ಟೂರ್ನಿಯ ಲೀಗ್ ಹಂತದ ಪಂದ್ಯಗಳು 9 ತಾಣಗಳಾದ ಅಹಮದಾಬಾದ್, ಕೋಲ್ಕತ, ತಿರುವನಂತಪುರ, ಕಟಕ್, ಚೆನ್ನೈ, ಗುವಾಹಟಿ, ಹೈದರಾಬಾದ್, ಬರೋಡ ಮತ್ತು ರಾಜ್‌ಕೋಟ್‌ನಲ್ಲಿ ನಡೆಯುವ ನಿರೀಕ್ಷೆಗಳಿವೆ. ನಾಕೌಟ್ ಪಂದ್ಯಗಳು ಜೂನ್‌ನಲ್ಲಿ ನಡೆಯಲಿವೆ.

    ಈ ಮೊದಲಿನ ವೇಳಾಪಟ್ಟಿ ಪ್ರಕಾರ ರಣಜಿ ಟ್ರೋಫಿ ಜನವರಿ 13ರಂದು ಆರಂಭಗೊಳ್ಳಬೇಕಿತ್ತು. ಆದರೆ ಕರೊನಾ 3ನೇ ಅಲೆಯ ಭೀತಿಯಿಂದಾಗಿ ಮುಂಡೂಲ್ಪಟ್ಟಿತ್ತು. 2020ರ ಮಾರ್ಚ್‌ನಲ್ಲಿ ನಡೆದ ರಣಜಿ ಟ್ರೋಫಿ ಫೈನಲ್ ಬಳಿಕ ದೇಶದಲ್ಲಿ ಯಾವುದೇ ದೇಶೀಯ ರೆಡ್ ಬಾಲ್ ಪಂದ್ಯಗಳು ನಡೆದಿಲ್ಲ. ಕರೊನಾ ಭೀತಿಯಿಂದಾಗಿ ಕಳೆದ ವರ್ಷದ ರಣಜಿ ಟ್ರೋಫಿ ರದ್ದುಗೊಂಡಿತ್ತು ಮತ್ತು ಆಟಗಾರರಿಗೆ ಪಂದ್ಯ ಸಂಭಾವನೆಯ ಶೇ. 50 ಮೊತ್ತವನ್ನು ಪರಿಹಾರ ನೀಡಲಾಗಿತ್ತು.

    ಟೂರ್ನಿ ಸ್ವರೂಪ ಬದಲು
    ರಣಜಿ ಟ್ರೋಫಿಯ ಸ್ವರೂಪವನ್ನೂ ಈ ಬಾರಿ ಬದಲಾಯಿಸಲಾಗಿದ್ದು, ಎಲೈಟ್ ವಿಭಾಗದಲ್ಲಿ ತಲಾ 4 ತಂಡಗಳ 8 ಗುಂಪುಗಳು ಇರಲಿವೆ. ಉಳಿದ 6 ತಂಡಗಳು ಪ್ಲೇಟ್ ಗುಂಪಿನಲ್ಲಿ ಆಡಲಿವೆ. ತಂಡಗಳಿಗೆ ಕನಿಷ್ಠ 3 ಪಂದ್ಯ ಸಿಗಲಿದ್ದು, ಫೈನಲ್‌ಗೇರುವ ತಂಡಕ್ಕೆ ಗರಿಷ್ಠ 8 ಪಂದ್ಯ ಆಡುವ ಅವಕಾಶ ಸಿಗಲಿದೆ.

    ಸೂಪರ್ ಲೀಗ್-ಪ್ರಿ ಕ್ವಾರ್ಟರ್ಸ್‌?
    ಟೂರ್ನಿ 2ನೇ ಹಂತದಲ್ಲಿ ಸೂಪರ್ ಲೀಗ್ ಅಥವಾ ಪ್ರಿ ಕ್ವಾರ್ಟರ್​ಫೈನಲ್ಸ್‌ನಿಂದ ನಾಕೌಟ್ ಹಣಾಹಣಿ ಆರಂಭಿಸಲು ಬಿಸಿಸಿಐ ಚಿಂತಿಸಿದೆ. ಸೂಪರ್ ಲೀಗ್ ನಡೆಸಿದರೆ, ಪ್ರತಿ ಎಲೈಟ್ ಗುಂಪಿನ ಅಗ್ರ ತಂಡಗಳು ಮೇಲೇರಲಿವೆ. ಸೂಪರ್ ಲೀಗ್‌ನಲ್ಲಿ ತಲಾ 4 ತಂಡಗಳ 2 ಗುಂಪಿನಲ್ಲಿ ಪಂದ್ಯ ನಡೆದು, ಅಗ್ರ 2 ತಂಡಗಳು ಸೆಮಿೈನಲ್‌ಗೇರಲಿವೆ. ಪ್ರಿ ಕ್ವಾರ್ಟರ್ಸ್‌ ನಡೆಸಿದರೆ, ಪ್ರತಿ ಎಲೈಟ್ ಗುಂಪಿನ ಅಗ್ರ 2 ತಂಡಗಳು ನಾಕೌಟ್ ಹಂತಕ್ಕೇರಲಿವೆ.

    ಲಖನೌ ಸೂಪರ್‌ಜೈಂಟ್ಸ್ ಲಾಂಛನ ಅನಾವರಣ, ಏನಿದರ ವಿಶೇಷತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts