ಲಖನೌ ಸೂಪರ್‌ಜೈಂಟ್ಸ್ ಲಾಂಛನ ಅನಾವರಣ, ಏನಿದರ ವಿಶೇಷತೆ?

ನವದೆಹಲಿ: ಐಪಿಎಲ್‌ಗೆ ಹೊಸದಾಗಿ ಸೇರ್ಪಡೆಗೊಂಡಿರುವ ಲಖನೌ ಸೂಪರ್‌ಜೈಂಟ್ಸ್ ತಂಡದ ಲಾಂಛನವನ್ನು ಸೋಮವಾರ ಅನಾವರಣಗೊಳಿಸಲಾಯಿತು. ಕನ್ನಡಿಗ ಕೆಎಲ್ ರಾಹುಲ್ ‘ಎಲ್‌ಎಸ್‌ಜಿ’ ತಂಡವನ್ನು ಮುನ್ನಡೆಸಲಿದ್ದಾರೆ. ಪೌರಾಣಿಕ ಪಕ್ಷಿ ಗರುಡ ಸ್ಫೂರ್ತಿಯಿಂದ ತಂಡದ ಲಾಂಛನವನ್ನು ರೆಕ್ಕೆ ಬಿಡಿಸಿಕೊಂಡ ಮಾದರಿಯಲ್ಲಿ ರೂಪಿಸಲಾಗಿದೆ. ರಕ್ಷಕ ಮತ್ತು ಕ್ಷಿಪ್ರವಾಗಿ ಚಲಿಸುವ ಅದರ ಶಕ್ತಿಯಿಂದಾಗಿ ಗರುಡದ ರೀತಿಯಲ್ಲೇ ಲಾಂಛನ ರೂಪಿಸಲಾಗಿದೆ. ತಂಡದ ಪಾನ್ ಇಂಡಿಯಾ ಸೂಚಕವಾಗಿ ರೆಕ್ಕೆಗೆ ತ್ರಿವರ್ಣದ ಬಣ್ಣ ನೀಡಲಾಗಿದೆ. ಪಕ್ಷಿಯ ದೇಹದ ಭಾಗಕ್ಕೆ ನೀಲಿ ಬಣ್ಣದ ಬ್ಯಾಟ್ ವಿನ್ಯಾಸಗೊಳಿಸಲಾಗಿದೆ. ಇದು ಕ್ರಿಕೆಟ್ ಆಟದ ಪ್ರತೀಕ. … Continue reading ಲಖನೌ ಸೂಪರ್‌ಜೈಂಟ್ಸ್ ಲಾಂಛನ ಅನಾವರಣ, ಏನಿದರ ವಿಶೇಷತೆ?