More

    ಆ ಎರಡು ಮುಖಗಳು; ‘ರಣವ್ಯೂಹ’ ಚಿತ್ರದ ಟ್ರೇಲರ್ ಬಿಡುಗಡೆ

    ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಈ ಹಿಂದೆ ’ಚಕ್ರವ್ಯೂಹ’ ಮತ್ತು ’ಪದ್ಮವ್ಯೂಹ’ ಚಿತ್ರಗಳು ಬಿಡುಗಡೆಯಾಗಿವೆ. ಈಗ ’ರಣವ್ಯೂಹ’ ಎಂಬ ಇನ್ನೊಂದು ಚಿತ್ರವು ಸದ್ದಿಲ್ಲದೆ ನಿರ್ಮಾಣವಾಗಿದ್ದು, ಇತ್ತೀಚೆಗೆ ಟ್ರೇಲರ್ ಹಾಗೂ ಹಾಡುಗಳು ಬಿಡುಗಡೆಯಾಗಿವೆ.

    ಇದನ್ನೂ ಓದಿ: ಅದೃಷ್ಟ ಕೈಕೊಟ್ಟಿತ್ತು!; ಅಬ್ಬರಿಸಲು ರೆಡಿಯಾದ ಲೇಖಚಂದ್ರ!

    ‘ರಣವ್ಯೂಹ’ ಚಿತ್ರದ ಟ್ರೇಲರ್​ ಮತ್ತು ಹಾಡುಗಳನ್ನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ.ಹರೀಶ್ ಬಿಡುಗಡೆ ಮಾಡಿದರು. ಶ್ರೀ ಶಿರಡಿ ಸಾಯಿ ಮೂವೀಸ್ ಬ್ಯಾನರ್ ಅಡಿಯಲ್ಲಿ ವೇಣುಕುಮಾರ್.ಎಂ.ಜಿ ಬಂಡವಾಳ ಹೂಡಿದ್ದು, ಎಸ್.ಎಸ್.ಶಂಕರ್‌ನಾಗ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

    ಈ ಚಿತ್ರದ ಕುರಿತು ಮಾತನಾಡುವ ಅವರು, ‘ಒಬ್ಬ ಮನುಷ್ಯನನ್ನು ಮೇಲ್ನೋಟಕ್ಕೆ ಒಳ್ಳೆಯವನು, ಕೆಟ್ಟವನು ಅಂತ ಹೇಳಲಾಗುವುದಿಲ್ಲ. ಹೊರಗೆ ಒಂದು ಮುಖ ಇರುತ್ತದೆ. ಒಳಗೆ ಇನ್ನೊಂದು ಮುಖವಿರುತ್ತದೆ. ಆಳವಾಗಿ ನೋಡಿದಾಗಲಷ್ಟೇ ನಿಜವಾದ ಮುಖ ಗೋಚರಿಸುತ್ತದೆ. ಈ ವಿಷಯವನ್ನು ಕಮರ್ಷಿಯಲ್​ ಶೈಲಿಯಲ್ಲಿ, ಸೆಸ್ಪೆನ್ಸ್, ಥ್ರಿಲ್ಲರ್ ಮಾದರಿಯಲ್ಲಿ ತೋರಿಸಲಾಗಿದೆ’ ಎನ್ನುತ್ತಾರೆ ಶಂಕರ್​ ನಾಗ್​.

    ಈ ಹಿಂದೆ ‘ಮಜಾಭಾರತ’ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದ ಮತ್ತು ಜ್ಯೂನಿಯರ್​ ದರ್ಶನ್​ ಎಂದೇ ಜನಪ್ರಿಯರಾಗಿದ್ದ ಅವಿನಾಶ್​ ಈ ಚಿತ್ರದ ಮೂಲಕ ಹೀರೋ ಆಗಿದ್ದಾರೆ. ಅವರಿಗೆ ನಾಯಕಿಯಾಗಿ ಯಶಾ ಅಭಿನಯಿಸಿದ್ದಾರೆ. ನಿರ್ಮಾಪಕರ ಪತ್ನಿ ಸ್ಮಿತಾ ತನಿಖಾಧಿಕಾರಿಯಾಗಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಅವೀನ್, ಅಕ್ಷತ್, ವಿಸ್ಮಿತ್‌ರಾಜ್, ರಾಜ್‌ಮಂಜು, ಪ್ರೇಮ್‌ಕನ್ನಡರಾಜು, ರಾಜ್‌ಪ್ರತೀಕ್, ಯರ್ರಾಬಿರ್ರಿ ರಂಗರಾಜ್ ಮುಂತಾದವರು ನಟಿಸಿದ್ದಾರೆ.

    ಇದನ್ನೂ ಓದಿ: ಕಾಶಿಯಾತ್ರೆಗೆ ಪ್ರಮೋದ್ ಶೆಟ್ಟಿ; ಶಿಕಾರಿ ಬಳಿಕ ಮತ್ತೆ ಹೀರೋ..

    ‘ರಣವ್ಯೂಹ’ ಚಿತ್ರದ ಮೂರು ಹಾಡುಗಳಿಗೆ ಕಾರ್ತಿಕ್‌ ವೆಂಕಟೇಶ್ ಸಂಗೀತ ಸಂಯೋಜಿಸಿದ್ದಾರೆ. ಕೃಷ್ಣನಾಯ್ಕರ್ ಛಾಯಾಗ್ರಹಣ, ಪ್ರವೀಣ್‌ರಾಜ್ ಸಂಕಲನ ಈ ಚಿತ್ರಕ್ಕಿದ್ದು, ಬೆಂಗಳೂರು, ಉಡುಪಿ,ಮಂಗಳೂರು ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ.

    ರಿಷಬ್​ ಶೆಟ್ಟಿ ನಿರ್ದೇಶನದ ‘ಕಾಂತಾರ’ ಟ್ರೇಲರ್​ಗೆ ಮೆಚ್ಚುಗೆ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts