More

  ‘ಪಠಾಣ್’ ಬಾಯ್ಕಾಟ್ ವಿವಾದಕ್ಕೆ ನಟಿ ರಮ್ಯಾ ಆಕ್ರೋಶ; ದೀಪಿಕಾ ಪರ ಮೋಹಕ ತಾರೆ ಬ್ಯಾಟಿಂಗ್​

  ಬೆಂಗಳೂರು: ಶಾರುಖ್​ ಖಾನ್​ ಅಭಿನಯದ ‘ಪಠಾಣ್​’ ಚಿತ್ರದಲ್ಲಿನ ‘ಬೇಷರಮ್​ ದಿಲ್​’ ಹಾಡಿನಲ್ಲಿ ದೀಪಿಕಾ ಕೇಸರಿ ಬಣ್ಣದ ಬಿಕಿನಿ ತೊಟ್ಟಿದ್ದಿಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದ್ದು, ಸೋಷಿಯಲ್​ ಮೀಡಿಯಾದಲ್ಲಿ ‘ಬಾಯ್ಕಾಟ್ ಪಠಾಣ್’ ಎಂಬ ಅಭಿಯಾನ ಶುರುವಾಗಿದೆ. ಹೀಗೆ ದೀಪಿಕಾ ಬಗ್ಗೆ ಟ್ರೋಲ್​ ಮಾಡುತ್ತಿರುವವರ ವಿರುದ್ಧ ಸ್ಯಾಂಡಲ್​ವುಡ್​ ನಟಿ ರಮ್ಯಾ ಕಿಡಿ ಕಾರಿದ್ದಾರೆ.

  ಇದನ್ನೂ ಓದಿ: ಬಾಲಾಜಿ ಫೋಟೋ ಸ್ಟುಡಿಯೋದಿಂದ ‘ಪುಗಸಟ್ಟೆ’ ಹಾಡು ಬಂತು …

  ಈ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿರುವ ಅವರು, ‘ಸಮಂತಾ ಡಿವೋರ್ಸ್ ವಿಚಾರಕ್ಕಾಗಿ ಟ್ರೋಲ್ ಆದರು. ಸಾಯಿಪಲ್ಲವಿ ತಮ್ಮ ಅಭಿಪ್ರಾಯಕ್ಕೆ, ರಶ್ಮಿಕಾ ಸಂಬಂಧದಿಂದ ಹೊರಬಂದಿದ್ದಕ್ಕೆ, ದೀಪಿಕಾ ತಮ್ಮ ಬಟ್ಟೆಗೆ … ಹೀಗೆ ಪ್ರತಿಯೊಂದು ವಿಷಯಕ್ಕೂ ಮಹಿಳೆಯರನ್ನು ಧೂಷಿಸಲಾಗುತ್ತದೆ. ಸ್ವಾತಂತ್ರ್ಯ ನಮ್ಮ ಹಕ್ಕು. ಮಹಿಳೆಯರು ದುರ್ಗೆಯ ಸಾಕಾರ ರೂಪ. ಸ್ತ್ರೀದ್ವೇಷದ ವಿರುದ್ಧ ನಾವು ಹೋರಾಡಬೇಕಿದೆ’ ಎಂದು ಹೇಳಿಕೊಂಡಿದ್ದಾರೆ.

  ಇನ್ನು, ಈ ವಿಷಯವಾಗಿ ಕೋಲ್ಕತ್ತ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ (KIFF) ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿರುವ ಶಾರುಖ್ ಖಾನ್, ‘ಸೋಷಿಯಲ್​ ಮೀಡಿಯಾದಲ್ಲಿ ನಾವು ಮನುಷ್ಯನ ಸಂಕುಚಿತ ಮನೋಭಾವವನ್ನು ನೋಡಬಹುದು. ಈ ನೆಗೆಟಿವಿಟಿಯು ಸಾಮಾಜಿಕ ಮಾಧ್ಯಮ ಬಳಕೆಯನ್ನು ಹೆಚ್ಚಿಸುತ್ತದೆ ಮತ್ತು ಆ ಮೂಲಕ ಅದರ ವಾಣಿಜ್ಯ ಮೌಲ್ಯವನ್ನು ಹೆಚ್ಚಿಸುತ್ತದೆ. ಇದು ಸಮೂಹವನ್ನು ವಿಭಜಿಸುವುದರ ಜತೆಗೆ ಇನ್ನಷ್ಟು ವಿನಾಶಕಾರಿಯಾಗಿ ಮಾಡುತ್ತದೆ’ ಎಂದಿದ್ದಾರೆ.

  ಇದನ್ನೂ ಓದಿ: ಅಮಿತಾಭ್​ ಬಚ್ಚನ್​ಗೆ ‘ಭಾರತ ರತ್ನ’ ಪ್ರಶಸ್ತಿ ನೀಡಿ ಗೌರವಿಸಿ … ದೀದಿ ಮನವಿ

  ಬಹುಭಾಷಾ ನಟ ಪ್ರಕಾಶ್​ ರೈ ಸಹ ಈ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ‘ಕೇಸರಿ ಬಣ್ಣದವರು ರೇಪಿಸ್ಟ್​ಗಳಿಗೆ ಮಾಲೆ ಹಾಕುತ್ತಾರೆ. ದ್ವೇಷದ ಮಾತುಗಳನ್ನಾಡುತ್ತಾರೆ. ಕೇಸರಿ ಬಣ್ಣ ತೊಟ್ಟವರು ಮೈನರ್​ಗಳನ್ನು ರೇಪ್​ ಮಾಡುತ್ತಾರೆ. ಆದರೆ, ಚಿತ್ರದಲ್ಲಿ ಕೇಸರಿ ಬಟ್ಟೆ ತೊಟ್ಟರೆ ಸಹಿಸುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

  ‘ಬೇಷರಮ್ ರಂಗ್’ ವಿವಾದದ ಬಗ್ಗೆ ‘ಕಿಂಗ್​ ಖಾನ್​’ ಹೇಳಿದ್ದೇನು ಗೊತ್ತಾ? ಇಲ್ಲಿದೆ ಶಾರೂಖ್​ ಫಸ್ಟ್​ ರಿಯಾಕ್ಷನ್​

  ರಾಜ್ಯೋತ್ಸವ ರಸಪ್ರಶ್ನೆ - 25

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts