More

    ‘ಬೇಷರಮ್ ರಂಗ್’ ವಿವಾದದ ಬಗ್ಗೆ ‘ಕಿಂಗ್​ ಖಾನ್​’ ಹೇಳಿದ್ದೇನು ಗೊತ್ತಾ? ಇಲ್ಲಿದೆ ಶಾರೂಖ್​ ಫಸ್ಟ್​ ರಿಯಾಕ್ಷನ್​

    ಮುಂಬೈ: ಶಾರುಖ್​ ಖಾನ್​ ಅಭಿನಯದ ‘ಪಠಾಣ್​’ ಚಿತ್ರವು ಜನವರಿಯಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಮಧ್ಯೆ, ಚಿತ್ರದ ಹಾಡೊಂದರಲ್ಲಿ ನಟಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ತೊಟ್ಟಿದ್ದು ವಿವಾದಕ್ಕೆ ಸಾಕಷ್ಟು ಕಾರಣವಾಗಿದೆ. ಅಷ್ಟೇ ಅಲ್ಲ, ಸೋಷಿಯಲ್​ ಮೀಡಿಯಾದಲ್ಲಿ ‘ಬಾಯ್ಕಾಟ್ ಪಠಾಣ್’ ಎಂಬ ಅಭಿಯಾನವೂ ಶುರುವಾಗಿದೆ. ಇದುವರೆಗೂ ಮೌನವಾಗಿದ್ದ ಶಾರೂಖ್​, ಇದೇ ಮೊದಲ ಬಾರಿಗೆ ಶಾರೂಖ್​ ಖಾನ್​ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

    ಇದನ್ನೂ ಓದಿ:

    ಕೋಲ್ಕತ್ತ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ (KIFF) ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿರುವ ಶಾರುಖ್ ಖಾನ್, ‘ನಮ್ಮ ಸುತ್ತಲೂ ಏನೇ ನಡೆಯಲಿ, ನಮ್ಮಂತಹ ಜನರು ಪಾಸಿಟಿವ್ ಆಗಿರುತ್ತೇವೆ. ವಿವಿಧ ಬಣ್ಣಗಳು ಧರ್ಮಗಳನ್ನು ಪರಸ್ಪರ ಅರಿತುಕೊಳ್ಳಲು ಸಿನಿಮಾ ಉತ್ತಮ ವೇದಿಕೆಯಾಗಿದೆ’ ಎಂದು ಹೇಳಿದ್ದಾರೆ.

    ‘ಈ ಕಾಲಘಟ್ಟದ ಬಹಳಷ್ಟು ನಂಬಿಕೆಗಳು ಸಾಮಾಜಿಕ ಮಾಧ್ಯಮದಿಂದ ರೂಪುಗೊಂಡಿವೆ. ಸಾಮಾಜಿಕ ಮಾಧ್ಯಮಗಳು, ಸಿನಿಮಾದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬ ನಂಬಿಕೆ ಇದೆ. ಅದಕ್ಕೆ ವ್ಯತಿರಿಕ್ತವಾಗಿ, ಚಲನಚಿತ್ರಕ್ಕೆ ಇನ್ನೂ ಗುರುತರ ಜವಾಬ್ದಾರಿ ಇದೆ ಮತ್ತು ಈಗಿನ ಕಾಲಘಟ್ಟದಲ್ಲಿ ಇನ್ನೂ ಹೆಚ್ಚು ಪ್ರಮುಖ ಪಾತ್ರ ವಹಿಸುತ್ತದೆ ಎಂಬ ನಂಬಿಕೆ ನನ್ನದು. ಸೋಷಿಯಲ್​ ಮೀಡಿಯಾದಲ್ಲಿ ಸಂಕುಚಿತ ಮನೋಭಾವ ಹೆಚ್ಚಾಗುತ್ತಿದೆ. ಈ ನೆಗೆಟಿವಿಟಿಯು ಸಾಮಾಜಿಕ ಮಾಧ್ಯಮ ಬಳಕೆಯನ್ನು ಹೆಚ್ಚಿಸುತ್ತದೆ ಮತ್ತು ಆ ಮೂಲಕ ಅದರ ವಾಣಿಜ್ಯ ಮೌಲ್ಯವನ್ನು ಹೆಚ್ಚಿಸುತ್ತದೆ. ಇದು ಸಮೂಹವನ್ನು ವಿಭಜಿಸುವುದರ ಜತೆಗೆ ಇನ್ನಷ್ಟು ವಿನಾಶಕಾರಿಯಾಗಿ ಮಾಡುತ್ತದೆ’ ಎಂದಿದ್ದಾರೆ.

    ಇದಕ್ಕೂ ಮುನ್ನ ಬಹುಭಾಷಾ ನಟ ಪ್ರಕಾಶ್​ ರೈ, ಶಾರೂಖ್​ ಖಾನ್​ ಮತ್ತು ‘ಪಠಾಣ್​’ ಬೆಂಬಲಕ್ಕೆ ನಿಲ್ಲುವುದರ ಜತೆಗೆ, ಇದನ್ನೆಲ್ಲ ಎಷ್ಟು ದಿನ ಸಹಿಸಿಕೊಳ್ಳಬೇಕು ಎಂದು ಪ್ರಶ್ನಿಸಿದ್ದಾರೆ.ಇದಕ್ಕೂ ಮುನ್ನ ಬಹುಭಾಷಾ ನಟ ಪ್ರಕಾಶ್​ ರೈ, ಶಾರೂಖ್​ ಖಾನ್​ ಮತ್ತು ‘ಪಠಾಣ್​’ ಬೆಂಬಲಕ್ಕೆ ನಿಲ್ಲುವುದರ ಜತೆಗೆ, ಇದನ್ನೆಲ್ಲ ಎಷ್ಟು ದಿನ ಸಹಿಸಿಕೊಳ್ಳಬೇಕು ಎಂದು ಪ್ರಶ್ನಿಸಿದ್ದಾರೆ.

    ಇದನ್ನೂ ಓದಿ:

    ಈ ಹಾಡಿನ ಕುರಿತು ಆಕ್ಷೇಪ ವ್ಯಕ್ತಪಡಿಸುತ್ತಿರುವವರಿಗೆ ಮತ್ತು ಶಾರೂಖ್​ ಖಾನ್​ ಅವರ ಪ್ರತಿಕೃತಿಯನ್ನು ದಹಿಸವವರನ್ನು ನಾಚಿಕೆ ಇಲ್ಲದ ಮತಾಂಧರು ಎಂದಿರುವ ಪ್ರಕಾಶ್​ ರೈ, ‘ಕೇಸರಿ ಬಣ್ಣದವರು ರೇಪಿಸ್ಟ್​ಗಳಿಗೆ ಮಾಲೆ ಹಾಕುತ್ತಾರೆ. ದ್ವೇಷದ ಮಾತುಗಳನ್ನಾಡುತ್ತಾರೆ. ಕೇಸರಿ ಬಣ್ಣ ತೊಟ್ಟವರು ಮೈನರ್​ಗಳನ್ನು ರೇಪ್​ ಮಾಡುತ್ತಾರೆ. ಆದರೆ, ಚಿತ್ರದಲ್ಲಿ ಕೇಸರಿ ಬಟ್ಟೆ ತೊಟ್ಟರೆ ಸಹಿಸುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ‘ಕಾಂತಾರ’ ಚಿತ್ರಕ್ಕೆ ರಿಷಭ್​ ಶೆಟ್ಟಿ ಪಡೆದ ಸಂಭಾವನೆ ಎಷ್ಟು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts