More

    ದೇಶದ ಶ್ರೇಯಸ್ಸಿನ ಸಂಕೇತ: ಧರ್ಮದರ್ಶಿ ನಿ.ಬೀ. ವಿಜಯ ಬಲ್ಲಾಳ್

    ಉಡುಪಿ: ಶತಮಾನಗಳ ಹೋರಾಟ, ತ್ಯಾಗ, ಬಲಿದಾನಗಳ ಪ್ರತಿಲವಾಗಿ ಅಯೋಧ್ಯೆಯಲ್ಲಿ ಬಾಲರಾಮನಿಗೆ ಪ್ರಾಣ ಪ್ರತಿಷ್ಠೆ ಆಗುವಂತಾಗಿದೆ. ಇದು ದೇಶದ ಶ್ರೇಯಸ್ಸಿನ ಸಂಕೇತವಾಗಿದೆ. ಹೀಗಾಗಿ ರಾಮೋತ್ಸವ ಒಂದು ದಿನಕ್ಕೆ ಸೀಮಿತವಾಗಿದೆ ನಿತ್ಯವೂ ತನ-ಮನಗಳಲ್ಲಿ ರಾಮನ ಆರಾಧನೆ ಮಾಡುವಂತಾಗಲಿ ಎಂದು ಅಂಬಲಪಾಡಿಯ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ನಿ.ಬೀ. ವಿಜಯ ಬಲ್ಲಾಳ್ ಆಶಯ ವ್ಯಕ್ತಪಡಿಸಿದರು.

    ಅಂಬಲಪಾಡಿ ದೇಗುಲದಲ್ಲಿ ರಾಮೋತ್ಸವ ಉದ್ಘಾಟಿಸಿ ಮಾತನಾಡಿ, ಒಳ್ಳೆಯ ಪ್ರಜಾಪಾಲಕನಾಗಿ, ಮರ್ಯಾದಾ ಪುರುಷೋತ್ತಮನಾಗಿ, ಒಳ್ಳೆಯ ಪತಿ, ಸಹೋದರನಾಗಿ ರಾಜ್ಯಭಾರ ಮಾಡಿದ್ದ ರಾಮ ಸಾರ್ವಕಾಲಿಕ ಸತ್ಯನಾಗಿದ್ದಾನೆ. ಆತನ ಆದರ್ಶವನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳೋಣ ಎಂದರು.
    ಅಯೋಧ್ಯಾ ಕರಸೇವಕ ಉಮೇಶ್ ಶೆಟ್ಟಿಗಾರ್ ಅವರನ್ನು ಗೌರವಿಸಲಾಯಿತು.

    ರಾಮೋತ್ಸವದ ಹಿನ್ನೆಲೆಯಲ್ಲಿ ಶ್ರೀ ನಾಗರಾಜ ಮಹಿಳಾ ಭಜನಾ ಮಂಡಳಿಯಿಂದ ಭಜನೆ ನಡೆಯಿತು. 2 ಸಾವಿರಕ್ಕೂ ಅಧಿಕ ಜನರಿಗೆ ಅನ್ನಸಂತರ್ಪಣೆ ಮಾಡಲಾಯಿತು. ದಿನಪೂರ್ತಿ ಹನುಮಾನ ಚಾಲೀಸಾ ಹಾಗೂ ರಾಮರಕ್ಷಾ ಸ್ತೋತ್ರ ಪಠಣೆ, ಭಜನಾ ಕುಣಿತ, ಪಾಂಡುರಂಗ ಶ್ಯಾನುಭಾಗ್ ಅವರಿಂದ ಬೌದ್ಧಿಕ ನಡೆಯಿತು. ನಗರಸಭಾ ಸದಸ್ಯ ಹರೀಶ್ ಶೆಟ್ಟಿ, ಯೋಗೀಶ್ ಶೆಟ್ಟಿ ಅಂಬಲಪಾಡಿ, ಶಿವಕುಮಾರ್ ಅಂಬಲಪಾಡಿ, ರಾಜೇಂದ್ರ ಪಂಡುಬೆಟ್ಟು, ಹರೀಶ್ ಪಾಲನ್, ಮಂಜಪ್ಪ ಸುವರ್ಣ, ಜಗದೀಶ್ ಆಚಾರ್ಯ, ರಾಜೇಶ್ ಸುವರ್ಣ, ಮಹೇಂದ್ರ, ಭುವನೇಂದ್ರ, ಜಗದೀಶ್ ಶೆಟ್ಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts