More

    ಜಾರಕಿಹೊಳಿ ಸೆಕ್ಸ್​ ಸಿಡಿ ಪ್ರಕರಣದ ಸಂತ್ರಸ್ತ ಯುವತಿಯ ಎಕ್ಸ್​ಕ್ಲೂಸಿವ್ ಮಾಹಿತಿ ಸ್ಫೋಟ

    ಬೆಂಗಳೂರು: ಮಾಜಿ ಸಚಿವ ರಮೇಶ್​ ಜಾರಕಿಹೊಳಿಯದ್ದು ಎನ್ನಲಾದ ಸೆಕ್ಸ್​ ವಿಡಿಯೋದಲ್ಲಿರುವ ಸಂತ್ರಸ್ತ ಯುವತಿ ಇದ್ದದ್ದು ಪಿಜಿ(ಪೇಯ್ಡ್ ಗೆಸ್ಟ್)ನಲ್ಲಿ ಅಲ್ಲ, ಬದಲಾಗಿ ಇಂಡಿಪೆಂಡೆಂಟ್ ರೂಂನಲ್ಲಿ ಎಂಬ ಮಾಹಿತಿ ಲಭ್ಯವಾಗಿದೆ.

    ಡ್ರೋನ್ ಕ್ಯಾಮರಾ ಮೂಲಕ ಡ್ಯಾಂಗಳ ಚಿತ್ರೀಕರಣ ಮಾಡಬೇಕು, ಅವಕಾಶ ಕೊಡಿ ಎಂದು ಜಲಸಂಪನ್ಮೂಲ ಸಚಿವರಾಗಿದ್ದ ರಮೇಶ್​ ಜಾರಕಿಹೊಳಿ ಬಳಿ ಹೋದ ಯುವತಿಗೆ ಕೆಪಿಟಿಸಿಎಲ್​ನಲ್ಲಿ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಸಚಿವರು ಕಾಮತೃಷೆಗೆ ಬಳಸಿಕೊಂಡು ವಂಚಿಸಿದ್ದಾರೆ. ಇದರ ಸತ್ಯಾಸತ್ಯತೆಯನ್ನ ಪರಿಶೀಲಿಸಿ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್​ ಕಲ್ಲಹಳ್ಳಿ ನಗರದ ಕಬ್ಬನ್​ ಪಾರ್ಕ್ ಪೊಲೀಸ್​ ಠಾಣೆಗೆ ದೂರು ನಿಡಿದ್ದರು. ಸಚಿವರದ್ದು ಎನ್ನಲಾದ ಸೆಕ್ಸ್​ ವಿಡಿಯೋ ರಿಲೀಸ್​ ರಾಜ್ಯದಲ್ಲಿ ಭಾರಿ ಕೋಲಾಹಲ ಎಬ್ಬಿಸಿದೆ. ಕೊನೆಗೆ ಆರೋಪಕ್ಕೊಳಗಾದ ರಮೇಶ್​ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನೂ ಕೊಟ್ಟಿದ್ದಾರೆ. ಈ ನಡುವೆ ಸಂತ್ರಸ್ತ ಯುವತಿ ಯಾರು? ಆಕೆ ಏಕೆ ದೂರು ಕೊಡಲು ಬಂದಿಲ್ಲ, ಇದು ಪಕ್ಕಾ ಪ್ಲಾನ್ಡ್​, ಹನಿಟ್ರ್ಯಾಪ್​, ರಾಜಕೀಯ ಷಡ್ಯಂತ್ರ… ಎಂಬ ಮಾತುಗಳು ದಟ್ಟವಾಗಿ ಕೇಳಿಬರುತ್ತಿವೆ. ಮಾ.2ರಂದು ಸಿಡಿ ಸ್ಫೋಟಗೊಂಡಾಗಿನಿಂದ ಇಂದಿನವರೆಗೂ ಸಂತ್ರಸ್ತ ಯುವತಿ ಎಲ್ಲಿದ್ದಾಳೆಂಬ ಮಾಹಿತಿ ಸಿಕ್ಕಿರಲಿಲ್ಲ. ಆದರೆ, ಆಕೆಗೆ ಸಂಬಂಧಿಸಿದ ಕೆಲ ಮಹತ್ವದ ಈಗ ಮಾಹಿತಿ ಸಿಕ್ಕಿದೆ. ಇದನ್ನೂ ಓದಿರಿ ಸಿಡಿ ಟೆನ್ಶನ್​: 26 ಜನಪ್ರತಿನಿಧಿಗಳು ಕೋರ್ಟ್​ಗೆ ಮೊರೆ!

    ಸಂತ್ರಸ್ತ ಯುವತಿ ಹೆಬ್ಬಾಳದ ಖಾಸಗಿ ಕಾಲೇಜ್​ನಲ್ಲಿ ಇಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಹೋಗ್ತಿದ್ದರು. ಅಲ್ಲದೆ ಜಾರಕಿಹೊಳಿಯದ್ದು ಎನ್ನಲಾದ ವಿಡಿಯೋದಲ್ಲಿ ಲೇಡಿಸ್​ ಪಿಜಿನಲ್ಲಿ ವಾಸವಿರುವುದಾಗಿ ಹೇಳಿರುವ ಧ್ವನಿ ಇದೆ. ಆದರೆ, ಆಕೆ ಸುರೇಶ್ ಕುಮಾರ್ ಎಂಬುವರಿಗೆ ಸೇರಿದ ಕಟ್ಟಡದ ಸಿಂಗಲ್‌ ರೂಂನಲ್ಲಿ ಬಾಡಿಗೆಗೆ ಇದ್ದರು.

    ಇದು ಪಿಜಿ ಅಲ್ಲ, ಈ ಕಟ್ಟದಲ್ಲಿ ಪ್ರತ್ಯೇಕ ನಾಲ್ಕು ರೂಂಗಳನ್ನು ಬಾಡಿಗೆಗೆ ಕೊಟ್ಟಿದ್ವಿ. ಆ ಪೈಕಿ ಮೊದಲ ಮಹಡಿಯ ಒಂದು ರೂಂನಲ್ಲಿ 2018ರಿಂದ ಇದೇ ರೂಂನಲ್ಲಿ ವಾಸವಿದ್ದ ಯುವತಿ, ಸಿಡಿ ಸ್ಫೋಟಗೊಳ್ಳುವ ಹಿಂದಿನ ದಿನದವರೆಗೂ ಅಂದರೆ ಮಾ.1ರಂದು ಕೂಡ ಇದೇ ರೂಂನಲ್ಲಿ ಇದ್ದರು. ಆ ನಂತರ ಎಲ್ಲಿಗೆ ಹೋಗಿದ್ದಾಳೆ ಎಂಬುದು ಗೊತ್ತಿಲ್ಲ ಎಂದು ಸುರೇಶ್ ಕುಮಾರ್ ‘ದಿಗ್ವಿಜಯ ನ್ಯೂಸ್​’ಗೆ ತಿಳಿಸಿದ್ದಾರೆ.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಸೆಕ್ಸ್​ ವಿಡಿಯೋದಲ್ಲಿ ರಮೇಶ್​ ಜಾರಕಿಹೊಳಿಯ ಮಚ್ಚೆ ಹುಡುಕಿದ ಮಹೇಶ್​ ಕುಮಟಳ್ಳಿ!

    ಅಕ್ಕನ ಕಣ್ಣೆದುರಲ್ಲೇ ಭಾವನ ಕಿವಿ ಕಚ್ಚಿ ತುಂಡರಿಸಿದ ಬಾಮೈದುನ!

    ನಮ್ಮ ವಿರುದ್ಧ ತೇಜೋವಧೆ ನಡೆಯುತ್ತಿದೆ.. 6 ಜನ ಮಾತ್ರವಲ್ಲ, ಎಲ್ಲ ಸಚಿವರೂ ಕೋರ್ಟ್​ ಹೋಗ್ತಾರೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts