More

    ಹೈಕೋರ್ಟ್​ ನ್ಯಾಯಾಧೀಶರಿಗೆ ಪತ್ರ ಬರೆದ ಸಿಡಿ ಲೇಡಿ: ಡಿವೈಎಸ್​ಪಿ ಹೆಸರು ಉಲ್ಲೇಖ, ಪ್ರಕರಣಕ್ಕೆ ಹೊಸ ಟ್ವಿಸ್ಟ್!​

    ಬೆಂಗಳೂರು: ಎಸ್​ಐಟಿಯಿಂದ ಸಿಡಿ ಯುವತಿ ಪೋಷಕರ ವಿಚಾರಣೆ ಪ್ರಕರಣ ಸಂಬಂಧ ಸಿಡಿ ಲೇಡಿ ಹೈಕೋರ್ಟ್​ ನ್ಯಾಯಾಧೀಶರಿಗೆ ಪತ್ರ ಬರೆದಿರುವುದು ಬೆಳಕಿಗೆ ಬಂದಿದೆ.

    ಮೇಲ್ ಮೂಲಕ ನ್ಯಾಯಾಧೀಶರಿಗೆ ಪತ್ರ ಕಳಿಸಿರುವ ಸಿಡಿ ಲೇಡಿ, ನಿಮ್ಮ ಮೇಲುಸ್ತುವಾರಿಯಲ್ಲಿ ಎಸ್​ಐಟಿ ತನಿಖೆಯಾಗಬೇಕು ಎಂದು ಮನವಿ ಮಾಡಿಕೊಂಡಿದ್ದಾಳೆ.

    ಪ್ರಕರಣದಲ್ಲಿ ನನ್ನ ತಂದೆ ತಾಯಿಯಿಂದ ಬಲವಂತವಾಗಿ ಹೇಳಿಕೆ ಕೊಡಿಸಿಕೊಳ್ಳಲಾಗಿದೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರಭಾವಿ ವ್ಯಕ್ತಿಯಾಗಿದ್ದು, ಸಾರ್ವಜನಿಕವಾಗಿ ಜೀವ ಬೆದರಿಕೆ ಹಾಕಿದ್ದಾರೆ. ಈ ಕೇಸ್​ನಲ್ಲಿ ನನಗೆ ಮತ್ತು ನನ್ನ ಪೋಷಕರಿಗೆ ರಕ್ಷಣೆ ನೀಡಬೇಕೆಂದು ಮನವಿ ಮಾಡಿ ಪತ್ರ ಬರೆದಿದ್ದಾಳೆ.

    ಇದನ್ನೂ ಓದಿರಿ: ಬಿಟ್ಟು ಹೋದೆಯಾ ಅಮ್ಮ..? ಸತ್ತು‌ ಹೋದವು ಕಂದಮ್ಮ! ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಮನಕಲಕುವ ಘಟನೆ

    ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ಸಹ ನಾಶ ಮಾಡಲಾಗುತ್ತಿದೆ. ರಮೇಶ್ ಜಾರಕಿಹೊಳಿ ತುಂಬಾ ಪ್ರಭಾವಿಯಾಗಿದ್ದು, ಸರ್ಕಾರ ಹಾಗು ಎಸ್​ಐಟಿಯನ್ನು ತನ್ನಿಷ್ಟದ ಹಾಗೇ ಬಳಸಿಕೊಳ್ಳುತ್ತಿದ್ದಾರೆ. ಈಗಾಗಲೇ ಮಾಧ್ಯಮದ ಮೂಲಕ ಹೇಳಿಕೆ ನೀಡಿರುವ ಜಾರಕಿಹೊಳಿ ಯಾವುದೇ ಕಾರಣಕ್ಕೂ ನಮ್ನನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾರೆ. ಈ ಹಿನ್ನಲೆಯಲ್ಲಿ ನ್ಯಾಯಾಲಯ ನನಗೆ ಸೂಕ್ತ ಭದ್ರತೆ ನೀಡಬೇಕೆಂದು ಕೋರಿದ್ದಾಳೆ.

    ಎಸ್​ಐಟಿ ತನಿಖೆ ಮುಖ್ಯನ್ಯಾಯಮೂರ್ತಿಗಳ ಮೇಲ್ವಿಚರಣೆಯಲ್ಲಿ ನಡೆಯಬೇಕು. ನಮ್ಮ ಪೋಷಕರಿಗೆ ಡಿವೈಎಸ್​ಪಿ ಕಟ್ಟಿಮನಿ ಎಂಬುವರು ಒತ್ತಡ ಹಾಕಿ ಜಾರಕಿಹೊಳಿ ಪರ ಹೇಳಿಕೆ ನೀಡುವಂತೆ ಬೆದರಿಕೆ ಸಹ ಹಾಕಿರುತ್ತಾರೆ ಎಂದು ಆರೋಪಿಸಿ ಮೇಲ್ ಮೂಲಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ಸಿಡಿ ಲೇಡಿ ಪತ್ರ ಬರೆದಿದ್ದಾಳೆ.

    ನಿನ್ನೆಯೇ ಪತ್ರವನ್ನ ನ್ಯಾಯಾಧೀಶರಿಗೆ ಮೇಲ್ ಮೂಲಕ ರವಾನೆ ಮಾಡಿರುವ ಯುವತಿ, ಪತ್ರವನ್ನು ಹೈಕೋರ್ಟ್ ಪಿಐಎಲ್ ಅರ್ಜಿಯಾಗಿ ಪರಿಗಣಿಸುವ ಸಾಧ್ಯತೆ ಇದೆ. ಇಂದೇ ಪತ್ರದ ವಿಚಾರಣೆ ನಡೆಸುವ ಸಾದ್ಯತೆಯು ಇದೆ. (ದಿಗ್ವಿಜಯ ನ್ಯೂಸ್​)

    ನಾನು ನೀವು ಹೋಗಿ ಅವರ ಬಟ್ಟೆ ಬಿಚ್ಚಿದ್ವಾ? ಆ ಯಪ್ಪ ಎದುರಿಗೆ ಸಿಕ್ಕಾಗ ಏನು ಹೇಳಬೇಕೋ ಹೇಳುತ್ತೇನೆ: ಸಿಡಿ ಕೇಸ್​ ಬಗ್ಗೆ ಡಿ.ಕೆ. ಸುರೇಶ್ ಸಿಡಿಮಿಡಿ

    VIDEO: ಇಂಟರ್​ಕೋರ್ಸ್​ ಮಾಡಿಲ್ಲ ಅಂತ ಯಾವ್ ಬಾಯಲ್ಲಿ ಹೇಳ್ತಾನ್ರಿ…? ಪರೀಕ್ಷೆ ಮಾಡ್ತಾರೆ, ತಪ್ಪಿಸಿಕೊಳ್ಳೋದು ಸಾಧ್ಯನೇ ಇಲ್ಲ…

    ನಾಳೆ ನ್ಯಾಯಾಧೀಶರ​ ಮುಂದೆ ಸಿಡಿ ಲೇಡಿ? ‘ಕಳ್ಳರ’ ಎದೆಯಲ್ಲಿ ನಡುಕ- ಬಯಲಾಗತ್ತಾ ಸತ್ಯ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts