More

    ಯುವಕರು ಅವಕಾಶ ಬಳಸಿಕೊಂಡು ಗುರಿ ಸಾಧಿಸಿ: ಎಸ್.ಡಿ.ಜಯರಾಂ ಸಮಗ್ರ ಗ್ರಾಮೀಣಾಭಿವೃದ್ದಿ ಸಂಸ್ಥೆ ಮುಖ್ಯಸ್ಥ ಡಾ.ಸಿ.ಎಂ.ಪರಮೇಶ್ ಕಿವಿಮಾತು

    ಮಂಡ್ಯ: ಜೀವನದಲ್ಲಿ ಬರುವ ಅವಕಾಶಗಳನ್ನು ಬಳಸಿಕೊಂಡು ಯುವಕರು ಸಮಾವ ಮೆಚ್ಚುವಂತಹ ಸಾಧನೆ ಮಾಡಬೇಕು ಎಂದು ಎಸ್.ಡಿ.ಜಯರಾಂ ಸಮಗ್ರ ಗ್ರಾಮೀಣಾಭಿವೃದ್ದಿ ಸಂಸ್ಥೆ ಮುಖ್ಯಸ್ಥ ಡಾ.ಸಿ.ಎಂ.ಪರಮೇಶ್ ಸಲಹೆ ನೀಡಿದರು.
    ತಾಲೂಕಿನ ಕೆರಗೋಡು ಗ್ರಾಮದಲ್ಲಿ ಎಸ್.ಡಿ.ಜಯರಾಂ ಸಮಗ್ರ ಗ್ರಾಮೀಣಾಭಿವೃದ್ದಿ ಸಂಸ್ಥೆಯಿಂದ ಶ್ರೀರಾಮನವಮಿ ಅಂಗವಾಗಿ ಆಯೋಜಿಸಿದ್ದ ಶ್ರೀರಾಮೋತ್ಸವ ಮತ್ತು ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬ ಮನುಷ್ಯರಲ್ಲೂ ವಿಶೇಷ ಶಕ್ತಿಯಿರುತ್ತದೆ. ಅದನ್ನು ಹೊರತೆಗೆಯಲು ಪ್ರೋತ್ಸಾಹದ ಅಗತ್ಯವಿದೆ. ರಾಮಾಯಣದಲ್ಲಿ ಸಮುದ್ರ ದಾಟುವ ಸನ್ನಿವೇಶದಲ್ಲಿ ಆಂಜನೇಯನ ಶಕ್ತಿಯನ್ನು ಶ್ರೀರಾಮಚಂದ್ರ ತಿಳಿಸಿದಾಗ ಪ್ರೇರಣೆಗೊಂಡು ಕಾರ್ಯಸಾಧಿಸಿತ್ತಾರೆ. ಅಂತಹ ಮಹತ್ವದ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ ಎಂದು ನುಡಿದರು.
    ಕೆರಗೋಡು ಗ್ರಾಮದಲ್ಲಿ ರಾಮನವಮಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಿದ್ದೇವೆ. ಈ ಭಾಗದಲ್ಲಿ ಅನೇಕ ಧುರೀಣರು, ಸಜ್ಜನ ರಾಜಕಾರಣಿಗಳನ್ನು ಕಂಡಿದ್ದೇವೆ. ನಿತ್ಯ ಸಚಿವ ಕೆ.ವಿ.ಶಂಕರಗೌಡರು, ಸಹಕಾರಿ ಧುರೀಣ ಡಾ.ಎಚ್.ಡಿ.ಚೌಡಯ್ಯ, ತಮ್ಮಣ್ಣ ಮತ್ತು ಎಸ್.ಡಿ.ಜಯರಾಂ ಅವರಂತವನ್ನು ಸದಾ ಸ್ಮರಿಸೋಣ ಎಂದರು.
    ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ, ರಾಷ್ಟ್ರೀಯ ಯುವಪ್ರಶಸ್ತಿ ಪುರಸ್ಕೃತ ಕಾರಸವಾಡಿ ಮಹದೇವು, ನಿವೃತ್ತ ಶಿಕ್ಷಕ ಕೃಷ್ಣ, ಗ್ರಾಪಂ ಅಧ್ಯಕ್ಷೆ ರಾಧಮಣಿ, ಮುಖಂಡರಾದ ಮಹೇಶ್, ಉಮೇಶ್,ವಿಶ್ವನಾಥ, ನಾಗೇಂದ್ರಕಲ್ಲಹಳ್ಳಿ, ಸೋಮಶೇಖರ್, ಶ್ರೀಕಾಂತ್, ಶಿವನಂಜ, ನಾಗಮ್ಮ, ವರದರಾಜು, ಶಿವಕುಮಾರ್ ಆರಾಧ್ಯ ಇತರರಿದ್ದರು.
    ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಜಾನಪದ ಕಲಾತಂಡ, ನಾದಮೇಳ, ತಮಟೆ ನಗಾರಿ ಸದ್ದಿನೊಂದಿಗೆ ಬೆಳ್ಳಿಲೇಪಿತ ಸಾರೋಟಿನಲ್ಲಿ ಶ್ರೀರಾಮಚಂದ್ರ ದೇವರ ವಿಗ್ರಹದ ಮೆರವಣಿಗೆ ನಡೆಯಿತು. ವೇದಿಕೆಯಲ್ಲಿ ಜಾನಪದ ಗಾಯಕರಾದ ಡಾ.ಮಾದೇಶ್ ಮತ್ತು ಯರಹಳ್ಳಿ ಪುಟ್ಟಸ್ವಾಮಿ ತಂಡದಿಂದ ಭಕ್ತಿಗೀತೆ, ಜಾನಪದ ಗೀತೆಗಳನ್ನು ಹಾಡಲಾಯಿತು. ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಗಣ್ಯರ ಸಮ್ಮುಖದಲ್ಲಿ ಅಭಿನಂದಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts