More

    ಬಂಡೇ ಮಠದ ಬಸವಲಿಂಗ ಶ್ರೀ ಸಾವು ಪ್ರಕರಣಕ್ಕೆ ಸ್ಫೋಟಕ ತಿರುವು ಕೊಟ್ಟ ಮಹಿಳೆ ಜತೆಗಿನ ವಿಡಿಯೋ ಕಾಲ್!​

    ರಾಮನಗರ: ಜಿಲ್ಲೆಯ ಪುರಾತನ ಮಠಗಳಲ್ಲಿ ಒಂದಾದ ಮಾಗಡಿಯ ಕಂಚುಗಲ್ ಬಂಡೇ ಮಠದ ಪೀಠಾಧ್ಯಕ್ಷ ಶ್ರೀ ಬಸವಲಿಂಗ ಸ್ವಾಮೀಜಿ (45) ಆತ್ಮಹತ್ಯೆ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ.

    ಮಹಿಳೆಯನ್ನು ಮುಂದಿಟ್ಟುಕೊಂಡು ಮಠದ ಚುಕ್ಕಾಣೆ ಹಿಡಿಯಲು ಸಂಚು ನಡೆದಿತ್ತು ಎನ್ನುವ ಅಂಶ ಬೆಳಕಿಗೆ ಬಂದಿದೆ. ಶ್ರೀಗಳನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಲು ಸತತ ಏಳು ತಿಂಗಳಿಂದ ಪ್ರಯತ್ನ ಮಾಡಿದ್ದು, ಅನಾಮಧೇಯ ಮಹಿಳೆಯೊಬ್ಬಳು ಶ್ರೀಗಳ ಮೊಬೈಲ್​ಗೆ ವಿಡಿಯೋ ಕಾಲ್​ ಮಾಡಿರುವುದು ಇದೀಗ ಬಯಲಾಗಿದೆ.

    ವಂಚಕರ ಬಲೆಗೆ ಬಿದ್ದ ಶ್ರೀಗಳು ಕೊನೆಗೆ ಹನಿಟ್ರ್ಯಾಪ್​ಗೆ ಒಳಗಾಗಿದ್ದಾರೆ. ಶ್ರೀಗಳ ಆತ್ಮಹತ್ಯೆಗೆ ವಾಟ್ಸ್ಆ್ಯಪ್ ವಿಡಿಯೋ ಕಾಲ್‌ ಕಾರಣ ಎಂದು ತಿಳಿದುಬಂದಿದೆ. ಮಹಿಳೆಯ ಜೊತೆ ಮಾತನಾಡಿರುವ ವಿಡಿಯೋ ಕಾಲ್​ ಹೊರ ಬಂದರೆ ಮಾನ ಮರ್ಯಾದೆ ಹಾಳಾಗುತ್ತದೆ ಎಂದು ಅಂಜಿ, ಶ್ರೀಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

    ಶ್ರೀಗಳ ಸಾವಿನ ಬೆನ್ನಲ್ಲೇ ಶ್ರೀಗಳ ವಿರುದ್ಧ ಸಂಚು ರೂಪಿಸಿ ಖೆಡ್ಡಾಕ್ಕೆ ಕೆಡವಿದ ಪ್ರಭಾವಿಗಳು ಯಾರು ಎಂಬ ಪ್ರಶ್ನೆ ಮೂಡಿದೆ. ಮಠದ ಪೀಠಾಧ್ಯಕ್ಷ ಸ್ಥಾನ ಹಿಡಿಯಲು ಮತ್ತೊಬ್ಬ ಶ್ರೀ ಸಂಚು ರೂಪಿಸಿರುವ ಶಂಕೆ ವ್ಯಕ್ತವಾಗಿದೆ. ಮಠದ ಹೆಸರಿನಲ್ಲಿರುವ ಸುಮಾರು 50 ಕೋಟಿ ರೂ. ಮೌಲ್ಯದ ಆಸ್ತಿಯ ಮೇಲೆ ಕಣ್ಣು ಬಿದ್ದಿದ್ದು, ಇದಕ್ಕಾಗಿ ಶ್ರೀಗಳನ್ನು ಪೀಠಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಹನಿಟ್ರ್ಯಾಪ್​ ಸಂಚು ರೂಪಿಸಲಾಗಿದೆ ಎಂಬ ಅಂಶ ಬೆಳಕಿಗೆ ಬಂದಿದ್ದು, ತನಿಖೆ ಮುಂದುವರಿದಿದೆ.

    ಎಫ್​ಐಆರ್​ನಲ್ಲಿಲ್ಲ ಆರೋಪಿಯ ಹೆಸರು
    ಬಂಡೇ ಮಠದ ಬಸವಲಿಂಗ ಶ್ರೀ ಆತ್ಮಹತ್ಯೆ ಪ್ರಕರಣ ಸಂಬಂಧ ಎಫ್ಐಆರ್ ದಾಖಲಾಗಿದೆ. ಆದರೆ, ಎಫ್ಐಆರ್​ನಲ್ಲಿ ಯಾವೊಬ್ಬ ಆರೋಪಿಯ ಹೆಸರು ದಾಖಲಾಗಿಲ್ಲ. ಇಡೀ ಪ್ರಕರಣ ಮುಚ್ಚಿಹಾಕಲು ಪ್ರಯತ್ನ ನಡೆಯುತ್ತಿದೆಯಾ ಎಂಬ ಅನುಮಾನ ಮೂಡಿದೆ. ಈ ಪ್ರಕರಣದಲ್ಲಿ ಪ್ರಭಾವಿ ಹಾಲಿ ಸಚಿವರ ಕೈವಾಡದ ಶಂಕೆ ವ್ಯಕ್ತವಾಗಿದೆ. ಡೆತ್​ನೋಟ್​ನಲ್ಲಿ ಹಲವರ ಹೆಸರು ಉಲ್ಲೇಖವಿದ್ರೂ ಅನಾಮಧೇಯ ವ್ಯಕ್ತಿ ಹೆಸರಲ್ಲಿ ಎಫ್ಐಆರ್ ದಾಖಲಾಗಿದ್ದು, ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ. ಮಾಗಡಿ ತಾಲೂಕಿನ ಕುದೂರು ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

    ಕಂಚುಗಲ್ಲು ಬಂಡೇಮಠದ ಶ್ರೀಗಳ ಡೆತ್​ನೋಟ್​ನಲ್ಲಿ ಪ್ರಭಾವಿಗಳ ಹೆಸರು? ಸಾವಿಗೂ ಮುನ್ನ ಮಠಕ್ಕೆ ಬಂದಿದ್ದರಂತೆ ಸಚಿವರ ಆಪ್ತರು..!

    ಚಿಲುಮೆ ಮಠದ ಶ್ರೀಗಳ ರೀತಿಯಲ್ಲೇ ಅದೇ ದಿನ ದುರಂತ ಅಂತ್ಯ ಕಂಡ ಕಂಚುಗಲ್ ಬಂಡೇ ಮಠದ ಸಾಮೀಜಿ! ಡೆತ್​ನೋಟಲ್ಲಿದೆ ರಹಸ್ಯ?

    ನೇಣುಬಿಗಿದ ಸ್ಥಿತಿಯಲ್ಲಿ ಮಾಗಡಿ ಕಂಚುಗಲ್ ಬಂಡೇ ಮಠದ ಸ್ವಾಮೀಜಿ ಶವ ಪತ್ತೆ! ಭಕ್ತರಲ್ಲಿ ಆತಂಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts